For the best experience, open
https://m.newskannada.com
on your mobile browser.
Advertisement

ಮೊದಲ ದಿನ ಕೇವಲ 15 ಕೋಟಿ ರೂ ಗಳಿಕೆ ಮಾಡಿದ ‘ಬಡೇ ಮಿಯಾ ಚೋಟೆ ಮಿಯಾ’

ಅಕ್ಷಯ್ ಕುಮಾರ್  ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಯಿತು. ಸಿನಿಮಾ ಭರ್ಜರಿ ಗಳಿಕೆ ಮಾಡಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ಈ ಚಿತ್ರ ಮೊದಲ ದಿನ ಗಳಿಕೆ ಅಂದುಕೊಂಡ ರೀತಿಯಲ್ಲಿ ಆಗಿಲ್ಲ.
07:35 AM Apr 12, 2024 IST | Ashika S
ಮೊದಲ ದಿನ ಕೇವಲ 15 ಕೋಟಿ ರೂ ಗಳಿಕೆ ಮಾಡಿದ ‘ಬಡೇ ಮಿಯಾ ಚೋಟೆ ಮಿಯಾ’

ಮುಂಬೈ: ಅಕ್ಷಯ್ ಕುಮಾರ್  ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಏಪ್ರಿಲ್ 11ರಂದು ರಿಲೀಸ್ ಆಯಿತು. ಸಿನಿಮಾ ಭರ್ಜರಿ ಗಳಿಕೆ ಮಾಡಲಿದೆ ಎಂದೇ ಭಾವಿಸಲಾಗಿತ್ತು. ಆದರೆ, ಇದು ಸುಳ್ಳಾಗಿದೆ. ಈ ಚಿತ್ರ ಮೊದಲ ದಿನ ಗಳಿಕೆ ಅಂದುಕೊಂಡ ರೀತಿಯಲ್ಲಿ ಆಗಿಲ್ಲ.

Advertisement

‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ ಮೊದಲ ದಿನ ಗಳಿಕೆ ಮಾಡಿದ್ದು ಕೇವಲ 15 ಕೋಟಿ ರೂಪಾಯಿ. ಇದರಿಂದ ಅಕ್ಷಯ್ ಕುಮಾರ್​ಗೆ ಮತ್ತೊಂದು ಸೋಲಿನ ಭಯ ಕಾಡಿದೆ.

ಸಣ್ಣ ಬಜೆಟ್ ಸಿನಿಮಾ ಆಗಿ, ದೊಡ್ಡ ಸ್ಟಾರ್​ಗಳು ಇಲ್ಲ ಎಂದರೆ 15 ಕೋಟಿ ರೂಪಾಯಿ ನಿಜಕ್ಕೂ ದೊಡ್ಡ ಮೊತ್ತವೇ. ಆದರೆ, ‘ಬಡೇ ಮಿಯಾ ಚೋಟೆ ಮಿಯಾ’ ವಿಚಾರದಲ್ಲಿ ಹಾಗಿಲ್ಲ. ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್ ಸುಕುಮಾರನ್ ಸೇರಿ ಅನೇಕ ಸ್ಟಾರ್​ಗಳು ಸಿನಿಮಾದಲ್ಲಿ ನಟಿಸಿದ್ದಾರೆ. ಎಲ್ಲಕ್ಕಿಂತ ಮುಖ್ಯವಾಗಿ ಇದು ಬಿಗ್ ಬಜೆಟ್ ಸಿನಿಮಾ. ಹೀಗಾಗಿ ಚಿತ್ರದ ಮೊದಲ ದಿನದ ಗಳಿಕೆ ಕನಿಷ್ಠ 30-40 ಕೋಟಿ ರೂಪಾಯಿ ದಾಟಬೇಕಿತ್ತು. ಆದರೆ, 15 ಕೋಟಿ ರೂಪಾಯಿಗೆ ಸಿನಿಮಾ ಸಮಾಧಾನಪಟ್ಟುಕೊಂಡಿದೆ.

Advertisement

Advertisement
Tags :
Advertisement