For the best experience, open
https://m.newskannada.com
on your mobile browser.
Advertisement

ಹೀನಾಯ ಸೋಲು ಕಂಡ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ

ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಎರಡನೇ ದಿನದ ಗಳಿಕೆ ಒಂದಂಕಿಗೆ ಇಳಿದಿದೆ. ಈ ಚಿತ್ರದ ಒಟ್ಟಾರೆ ಗಳಿಕೆ 100 ಕೋಟಿ ರೂಪಾಯಿ ಆಗೋದು ಅನುಮಾನ ಎನ್ನಲಾಗುತ್ತಿದೆ. 
10:30 AM Apr 13, 2024 IST | Ashika S
ಹೀನಾಯ ಸೋಲು ಕಂಡ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ

ಮುಂಬೈ: ಅಕ್ಷಯ್ ಕುಮಾರ್ ಹಾಗೂ ಟೈಗರ್ ಶ್ರಾಫ್ ನಟನೆಯ ‘ಬಡೆ ಮಿಯಾ ಚೋಟೆ ಮಿಯಾ’ ಸಿನಿಮಾದ ಎರಡನೇ ದಿನದ ಗಳಿಕೆ ಒಂದಂಕಿಗೆ ಇಳಿದಿದೆ. ಈ ಚಿತ್ರದ ಒಟ್ಟಾರೆ ಗಳಿಕೆ 100 ಕೋಟಿ ರೂಪಾಯಿ ಆಗೋದು ಅನುಮಾನ ಎನ್ನಲಾಗುತ್ತಿದೆ.

Advertisement

ಮೊದಲ ದಿನ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾ 15.65 ಕೋಟಿ ರೂಪಾಯಿ ಗಳಿಕೆ ಮಾಡಿತ್ತು. ಎರಡನೇ ದಿನ ಅಂದರೆ ಶುಕ್ರವಾರ (ಏಪ್ರಿಲ್ 12) ಕೇವಲ 7 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಈ ಮೂಲಕ 22.65 ಕೋಟಿ ರೂಪಾಯಿ ಗಳಿಕೆ ಆಗಿದೆ.

ಇಂದು (ಏಪ್ರಿಲ್ 13) ಹಾಗೂ ನಾಳೆ (ಏಪ್ರಿಲ್ 14) ಸಿನಿಮಾ ದೊಡ್ಡ ಮೊತ್ತ ಕಲೆಕ್ಷನ್ ಮಾಡಿದರೂ ಸೋಮವಾರದಿಂದ ಕಲೆಕ್ಷನ್ ಕಡಿಮೆ ಆಗಲಿದೆ.

Advertisement

ಅಕ್ಷಯ್ ಕುಮಾರ್, ಟೈಗರ್ ಶ್ರಾಫ್, ಪೃಥ್ವಿರಾಜ್​ ಸುಕುಮಾರನ್ ‘ಬಡೇ ಮಿಯಾ ಚೋಟೆ ಮಿಯಾ’ ಸಿನಿಮಾದಲ್ಲಿ ನಟಿಸಿದ್ದಾರೆ. ಇಷ್ಟು ದೊಡ್ಡ ಪಾತ್ರವರ್ಗ ಇದ್ದ ಹೊರತಾಗಿಯೂ ಸಿನಿಮಾ ತೂಕ ಕಳೆದುಕೊಂಡಿದೆ.

Advertisement
Tags :
Advertisement