ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕ್ರಿಕೆಟ್ ಆಟಗಾರರನ್ನು ನಿಯಂತ್ರಿಸಲು ಹೊಸ ಆದೇಶ ಹೊರಡಿಸಿದ ಬಿಸಿಸಿಐ

ಕ್ರಿಕೆಟ್ ಆಟಗಾರರನ್ನು ನಿಯಂತ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಆದೇಶ ಹೊರಡಿಸಿದೆ. ಇನ್ನು ಮುಂದೆ ದೇಶೀಯ ಪಂದ್ಯಗಳನ್ನು ಆಡದೆ ತಂಡಕ್ಕೆ ಮರಳಲು ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.
08:13 AM Feb 13, 2024 IST | Gayathri SG

ಕ್ರಿಕೆಟ್ ಆಟಗಾರರನ್ನು ನಿಯಂತ್ರಿಸಲು ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಹೊಸ ಆದೇಶ ಹೊರಡಿಸಿದೆ. ಇನ್ನು ಮುಂದೆ ದೇಶೀಯ ಪಂದ್ಯಗಳನ್ನು ಆಡದೆ ತಂಡಕ್ಕೆ ಮರಳಲು ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಬಂದಿದೆ.

Advertisement

ದೇಶೀಯ ಕ್ರಿಕೆಟ್ ತೊರೆದು ತಿಂಗಳ ಮೊದಲೇ ಐಪಿಎಲ್ ತಯಾರಿ ಆರಂಭಿಸುವ ಮನೋಭಾವದಿಂದ ಬಿಸಿಸಿಐ ಸಂತುಷ್ಟರಾಗಿಲ್ಲ ಎಂದು ವರದಿಯೊಂದು ಹೇಳಿದೆ. ಟೈಮ್ಸ್ ಆಫ್ ಇಂಡಿಯಾದ ವರದಿಯ ಪ್ರಕಾರ, ಆಟಗಾರರು ರಣಜಿ ಟ್ರೋಫಿಯನ್ನು ಆಡಬೇಕು ಎಂದು ಬಿಸಿಸಿಐ ಮೂಲ ತಿಳಿಸಿದೆ. ರೆಡ್ ಬಾಲ್ ಕ್ರಿಕೆಟ್ ಅದರಲ್ಲೂ ರಣಜಿ ಟ್ರೋಫಿ ಬಗ್ಗೆ ಟೀಮ್ ಇಂಡಿಯಾದ ಕೆಲವು ಆಟಗಾರರ ವರ್ತನೆಯಿಂದ ಬಿಸಿಸಿಐ ಅಧಿಕಾರಿಗಳು ಕೋಪಗೊಂಡಿದ್ದಾರೆ ಎಂದು ವರದಿಯಾಗಿದೆ.

ಇಶಾನ್ ಕಿಶನ್ ರಣಜಿಯಲ್ಲಿ ಆಡದಿರುವ ಬಗ್ಗೆ ಭಾರೀ ಕೋಲಾಹಲ ಎದ್ದಿತ್ತು. ದಕ್ಷಿಣ ಆಫ್ರಿಕಾ ಪ್ರವಾಸದ ಮಧ್ಯದಲ್ಲಿ ವಿಶ್ರಾಂತಿ ಪಡೆದ ನಂತರ ಇಶಾನ್ ತಂಡದಿಂದ ಹೊರಗುಳಿದಿದ್ದರು. ಅಂದಿನಿಂದ ಅವರು ಯಾವುದೇ ಕ್ರಿಕೆಟ್ ಆಡುತ್ತಿಲ್ಲ. ಇಶಾನ್ ಮರಳಿ ಬರಬೇಕಾದರೆ ಮೊದಲು ರಣಜಿ ಆಡಲಿ ಎಂದು ಕೋಚ್ ರಾಹುಲ್ ದ್ರಾವಿಡ್ ಕೂಡ ಹೇಳಿದ್ದರು. ಅತ್ತ ಜಾರ್ಖಂಡ್ ತಂಡ ಹಲವು ರಣಜಿ ಪಂದ್ಯಗಳಲ್ಲಿ ಭಾಗವಹಿಸಿದ್ದರೂ ಒಮ್ಮೆಯೂ ಇಶಾನ್ ಕಾಣಿಸಿಕೊಂಡಿರಲಿಲ್ಲ.

Advertisement

ಗಾಯದ ಸಮಸ್ಯೆಯಿಂದಾಗಿ ಹಾರ್ದಿಕ್ 2023ರ ವಿಶ್ವಕಪ್‌ನಿಂದ ಹೊರಗುಳಿದಿದ್ದರು. ಅಲ್ಲಿಂದೀಚೆಗೆ ಅವರ ಚೇತರಿಕೆಯ ಹಲವು ವಿಡಿಯೋಗಳು ಹೊರಬಂದಿವೆ. ಆದರೆ ಅವರು ಹಿಂದಿರುಗುವ ಸುದ್ದಿ ಬರುತ್ತಿರುವುದು ಐಪಿಎಲ್‌ನಲ್ಲಿ ಮಾತ್ರ. ಹಾರ್ದಿಕ್ ವರ್ಷಗಳ ಕಾಲ ಟೆಸ್ಟ್ ಕ್ರಿಕೆಟ್ ಆಡಿಲ್ಲ ಎಂಬುದು ಗಮನಿಸಬೇಕಾದ ಸಂಗತಿ. ಇದೀಗ ಬಿಸಿಸಿಐ ಇಂಥ ಆಟಗಾರರಿಗೆ ಎಚ್ಚರಿಕೆ ನೀಡುವತ್ತ ಚಿತ್ತ ನೆಟ್ಟಿದ್ದು, ದೇಶೀಯ ಪಂದ್ಯಗಳನ್ನು ಆಡದೆ ತಂಡಕ್ಕೆ ಮರಳಲು ಅವಕಾಶ ನೀಡುವುದಿಲ್ಲ ಎಂಬ ನಿರ್ಧಾರಕ್ಕೆ ಮಾಡಿದೆ. ಇದೀಗ ಆಟಗಾರರಿಗೆ ಸಂಕಷ್ಟ ಎದುರಾಗಿದೆ.

Advertisement
Tags :
BCCILatestNewsNewsKannadaಕ್ರಿಕೆಟ್
Advertisement
Next Article