ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದೇಶದ ಹಿರಿಯ ಗಂಡು ಕರಡಿ ಬಬ್ಲೂ ಅಂಗಾಂಗ ವೈಫಲ್ಬಯದಿಂದ ನಿಧನ

ಭೋಪಾಲ್‌ ನ ವನವಿಹಾರ ರಾಷ್ಟ್ರೀಯ ಉದ್ಯಾನ ಹಾಗು ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿದ್ದ ಭಾರತದ ಅತಿ ಹಿರಿಯ ಗಂಡು ಕರಡಿ ಬಬ್ಲೂ(೩೬) ಶುಕ್ರವಾರ ಮೃತಪಟ್ಟಿದೆ.
08:28 PM Jan 05, 2024 IST | Maithri S

ಮಧ್ಯಪ್ರದೇಶ: ಭೋಪಾಲ್‌ ನ ವನವಿಹಾರ ರಾಷ್ಟ್ರೀಯ ಉದ್ಯಾನ ಹಾಗು ಪ್ರಾಣಿಗಳ ಪುನರ್ವಸತಿ ಕೇಂದ್ರದಲ್ಲಿದ್ದ ಭಾರತದ ಅತಿ ಹಿರಿಯ ಗಂಡು ಕರಡಿ ಬಬ್ಲೂ(೩೬) ಶುಕ್ರವಾರ ಮೃತಪಟ್ಟಿದೆ.

Advertisement

ಬಬ್ಲೂ ಬಹು ಅಂಗಾಂಗ ವೈಫಲ್ಯದಿಂದ ಬಳಲುತ್ತಿದ್ದು ಕಳೆದ ಕೆಲ ದಿನಗಳಿಂದ ಆಹಾರ ತ್ಯಜಿಸಿತ್ತು ಎಂದು ಡಾ. ಅತುಲ್‌ ಗುಪ್ತಾ ಮಾಹಿತಿ ನೀಡಿದ್ದಾರೆ. ಅದರ ದೇಹವನ್ನು ಅಧ್ಯಯನಕ್ಕಾಗಿ ಜಬಲ್ಪುರದ ವನ್ಯಜೀವಿ ವಿಧಿವಿಜ್ಞಾನ ಪ್ರಯೋಗಾಲಯ ಮತ್ತು ಆರೋಗ್ಯ ಕೆಂದ್ರಕ್ಕೆ ಕಳುಹಿಸಿಕೊಡಲಾಗುವುದೆಂದು ಅವರು ತಿಳಿಸಿದರು.

೨೦೦೬ರಲ್ಲಿ ೧೯ ವರ್ಷದ ಬಬ್ಲೂ ವನ್ನು ರಾಜಸ್ಥಾನದ ಕರಡಿ ಕುಣಿಸುವವರಿಂದ ಕಾಪಾಡಿ ಕರಡಿಧಾಮಕ್ಕೆ ಕರೆತರಲಾಗಿತ್ತು. ಸಾಮಾನ್ಯವಾಗಿ ಕರಡಿಗಳು ೨೫ರಿಂದ ೩೦ ವರ್ಷಗಳ ಆಯಸ್ಸು ಹೊಂದಿದ್ದು, ಪ್ರಾಣಿ ಸಂಗ್ರಹಾಲಯದಲ್ಲಿ ಕೊಂಚ ದೀರ್ಘಾವದಿ ಬದುಕುತ್ತವೆ.

Advertisement

ಎರಡು ವರ್ಷದ ಹಿಂದೆ ಇದೇ ವನವಿಹಾರದಲ್ಲಿ ಗುಲಾಬೋ ಎಂಬ ೪೦ ವರ್ಷದ ಹೆಣ್ಣು ಕರಡಿ ಸಾವನ್ನಪ್ಪಿತ್ತು.

Advertisement
Tags :
BabloobearindiaLatestNewsMADHYA PRADESHNewsKannada
Advertisement
Next Article