ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹುಷಾರ್! ಈ  ಔಷಧಿಗಳನ್ನು ಅಪ್ಪಿತಪ್ಪಿಯೂ ಬಳಸಬೇಡಿ

ಈಗಾಗಲೇ ಬಳಕೆಯಲ್ಲಿರುವ ಕೆಲವೊಂದು ಔಷಧಿಗಳನ್ನು ಅವುಗಳು ಗುಣಮಟ್ಟದಲ್ಲ ಎಂಬುದು ತಿಳಿದು ಬಂದ ಹಿನ್ನಲೆಯಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅಪ್ಪಿತಪ್ಪಿಯೂ  ಈ ಔಷಧಿಗಳನ್ನು ಬಳಸದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.
06:33 PM Jan 08, 2024 IST | Ashika S

ಬೆಂಗಳೂರು: ಈಗಾಗಲೇ ಬಳಕೆಯಲ್ಲಿರುವ ಕೆಲವೊಂದು ಔಷಧಿಗಳನ್ನು ಅವುಗಳು ಗುಣಮಟ್ಟದಲ್ಲ ಎಂಬುದು ತಿಳಿದು ಬಂದ ಹಿನ್ನಲೆಯಲ್ಲಿ ನಿಷೇಧಿಸಲಾಗಿದೆ. ಹೀಗಾಗಿ ಅಪ್ಪಿತಪ್ಪಿಯೂ  ಈ ಔಷಧಿಗಳನ್ನು ಬಳಸದಂತೆ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ.

Advertisement

ಕರ್ನಾಟಕ ಔಷಧ ಪರೀಕ್ಷಾ ಪ್ರಯೋಗಾಲಯದ ಸರ್ಕಾರಿ ವಿಶ್ಲೇಷಕರು ಪ್ಯಾರ್‍ಕ್ಯೂರ್ -650 (ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್ ಐ.ಪಿ.-650 ಎಂಜಿ), ಆಮ್ಲೋಡಿಫೈನ್ ಬಿಸೈಲೆಟ್ ಟ್ಯಾಬ್ಲೆಟ್ಸ್ ಐಪಿ-5ಎಂಜಿ (ಆಮ್ಲೋಪ್ರೈಮ್ 5 ಟ್ಯಾಬ್ಲೆಟ್ಸ್), ಜುಕೋಕ್ಸ್-ಪಿ (ಎಟೋರಿಕೋಕ್ಸಿಬ್  ಅಂಡ್ ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್), ಟ್ಯಾಬ್‍ಡೋಜ್- ಎಲ್‍ಪಿ ಟ್ಯಾಬ್ಲೆಟ್ಸ್ ಲೋರ್‍ನೋಕ್ಸಿಕೆಮ್ ಅಂಡ್ ಪ್ಯಾರಾಸೆಟಮೋಲ್ ಟ್ಯಾಬ್ಲೆಟ್ಸ್, ಓಮಸೆಲ್-ಡಿ (ಒಮೆಪ್ರಜೋಲ್ ಅಂಡ್ ಡೋಮ್‍ ಫೆರಿಡನ್ ಕ್ಯಾಪ್ಸೂಲ್ಸ್ ಐ.ಪಿ.), ಎಲ್‍ವಿಸಿಪ್- 500  (ಸಿಫ್ರೋಪ್ಲಾಕ್ಸಸಿನ್ ಹೈಡ್ರೋಕ್ಲೋರೈಡ್ ಟ್ಯಾಬ್ಲೆಟ್ಸ್ ಐ.ಪಿ) ಆಮ್ಲೋಡಿಫೈನ್ ಅಂಡ್ ಅಟಿನೋಲೋಲ್ ಟ್ಯಾಬ್ಲೆಟ್ಸ್ ಐ.ಪಿ (ಅಮ್ಲೋರೆಡ್ ಅಟ್).

ಇಷ್ಟೇ ಅಲ್ಲದೆ,  ಪಿಯೋಗ್ಲಿಟಜೋಲ್ ಟ್ಯಾಬ್ಲೆಟಸ್ ಐ.ಪಿ 15 ಎಂಜಿ, ಶ್ವಾಸ್ (ಅಲ್ಬುಟೇರಾಲ್ ಎಟೋಫಿಲಿನ್ ಓರಲ್ ಲಿಕ್ವಿಡ್), ನಾಕ್ಟೈನ್ - ಪಿ ಸಸ್‍ಪೆನ್‍ಷನ್ (ಅಸೆಕ್ಲೋಫೆನಕ್ ಅಂಡ್  ಪ್ಯಾರಾಸೆಟಮೋಲ್ ಸಸ್‍ಪೆನ್‍ಷನ್), ಡೆಕ್ಸ್ಟ್ರೋಮೆಥೋರ್‍ಫಾನ್ ಹೈಡ್ರೋಬ್ರೋಮೈಡ್, ಕ್ಲೋರ್ಫೆನಿರಮಿನ್ ಮ್ಯಾಲೆಟ್ ಅಂಡ್ ಫೆನೈಲ್ಟ್ರಿನ್ ಹೈಡ್ರೋಕ್ಲೋರೈಡ್ ಸಿರಪ್ (ಸಾಂಬೆರಿ- ಎಕ್ಸ್‍ಎಲ್ ಸಿರಪ್), ರಾಬೆಫ್ರಜೋಲ್ ಸೋಡಿಯಂ & ಡೋಮ್‍ಫೆರಿಡಿನ್ ಎಸ್‍ಆರ್ ಕ್ಯಾಪ್ಸೂಲ್ಸ್ (20 ಎಂಜಿ/30ಎಂಜಿ), ಪೊವಿಡನ್ ಆಯೋಡಿನ್ ಸಲೂಷನ್ ಐ.ಪಿ.7.5%, ಡಿಸಲ್ಟಿರಾಮ್ ಟ್ಯಾಬ್ಲೆಟ್ಸ್ ಐ.ಪಿ.500 ಎಂಜಿ (ಕ್ರೋಟೋರಿಫ್), ಆಟ್ರೋಫಿನ್ ಸಲ್ಫೆಟ್ ಇನ್‍ಜೆಕ್ಷನ್ ಐಪಿ1 ಎಂಎಲ್, ಔಷಧಿಗಳು / ಕಾಂತಿವರ್ಧಕಗಳು ಉತ್ತಮ ಗುಣಮಟ್ಟವಲ್ಲವೆಂದು ಘೋಷಿಸಿದ್ದಾರೆ.

Advertisement

ಈ ಎಲ್ಲ ಔಷಧಿ ಹಾಗೂ  ಕಾಂತಿವರ್ಧಕಗಳನ್ನು ಔಷಧಿ ವ್ಯಾಪಾರಿಗಳು, ಸಗಟು ಔಷಧ ಮಾರಾಟಗಾರರು, ವೈದ್ಯರು, ಆಸ್ಪತ್ರೆ ಮತ್ತು ನರ್ಸಿಂಗ್ ಹೋಂನವರು ದಾಸ್ತಾನು ಮಾಡುವುದಾಗಲೀ, ಮಾರಾಟ ಮಾಡುವುದಾಗಲೀ ಅಥವಾ ಉಪಯೋಗಿಸುವುದಾಗಲೀ ಮಾಡಬಾರದು. ಯಾರಾದರೂ ಈ ಔಷಧಿಗಳ ದಾಸ್ತಾನನ್ನು ಹೊಂದಿದ್ದಲ್ಲಿ ಕೂಡಲೇ ಸಂಬಂಧಪಟ್ಟ ಕ್ಷೇತ್ರದ ಔಷಧ ಪರಿವೀಕ್ಷಕರು ಅಥವಾ ಔಷಧ ನಿಯಂತ್ರಕರ ಗಮನಕ್ಕೆ ತರುವಂತೆ, ಅಲ್ಲದೆ, ಸಾರ್ವಜನಿಕರು ಈ ಔಷಧಗಳನ್ನು, ಕಾಂತಿವರ್ಧಕಗಳನ್ನು ಉಪಯೋಗಿಸಬಾರದು ಎಂದು ಔಷಧ ನಿಯಂತ್ರಕರಾದ ಭಾಗೋಜಿ ಟಿ. ಖಾನಾಪುರೆ ಅವರು ತಿಳಿಸಿದ್ದಾರೆ.

Advertisement
Tags :
LatetsNewsNewsKannadaಔಷಧಿಗುಣಮಟ್ಟನಿಷೇಧಬಳಕೆ
Advertisement
Next Article