For the best experience, open
https://m.newskannada.com
on your mobile browser.
Advertisement

ತಮ್ಮ ಆಸ್ತಿ ಹಂಚಿಕೆ ವಿಚಾರದ ಬಗ್ಗೆ ಘೋಷಣೆ ಮಾಡಿದ ಬಿಗ್ ಬಿ

ಬಾಲಿವುಡ್‌ ಬಿಗ್​ಬಿ ಅಮಿತಾಬ್ ಬಚ್ಚನ್ ಕೋಟಿಗಟ್ಟಲೇ ಆಸ್ತಿ ಹೊಂದಿದ್ದಾರೆ. ಇತ್ತೀಚೆಗೆ ತಮ್ಮ ಪುತ್ರಿ ಶ್ವೇತಾಗೆ ಜುಹು ಏರಿಯಾದಲ್ಲಿರುವ ಭವ್ಯ ಬಂಗಲೆಯನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು. 1564 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣ ಆಗಿರುವ ಬಂಗಲೆಯ ಬೆಲೆ ಸದ್ಯ 50 ಕೋಟಿ ಎಂದು ಹೇಳಲಾಗುತ್ತಿದೆ.
01:40 PM Dec 01, 2023 IST | Ashitha S
ತಮ್ಮ ಆಸ್ತಿ ಹಂಚಿಕೆ ವಿಚಾರದ ಬಗ್ಗೆ ಘೋಷಣೆ ಮಾಡಿದ ಬಿಗ್ ಬಿ

ಮುಂಬೈ: ಬಾಲಿವುಡ್‌ ಬಿಗ್​ಬಿ ಅಮಿತಾಬ್ ಬಚ್ಚನ್ ಕೋಟಿಗಟ್ಟಲೇ ಆಸ್ತಿ ಹೊಂದಿದ್ದಾರೆ. ಇತ್ತೀಚೆಗೆ ತಮ್ಮ ಪುತ್ರಿ ಶ್ವೇತಾಗೆ ಜುಹು ಏರಿಯಾದಲ್ಲಿರುವ ಭವ್ಯ ಬಂಗಲೆಯನ್ನು ಉಡುಗೊರೆಯಾಗಿ ನೀಡಿ ಸುದ್ದಿಯಾಗಿದ್ದರು. 1564 ಚದರ ಮೀಟರ್ ಪ್ರದೇಶದಲ್ಲಿ ನಿರ್ಮಾಣ ಆಗಿರುವ ಬಂಗಲೆಯ ಬೆಲೆ ಸದ್ಯ 50 ಕೋಟಿ ಎಂದು ಹೇಳಲಾಗುತ್ತಿದೆ.

Advertisement

ಇತ್ತೀಚಿನ ವಿಚಾರ ಏನಂದರೆ ಲೈಫ್ ಸ್ಟೈಲ್ ಏಷ್ಯಾ ವರದಿ ಪ್ರಕಾರ 3190 ಕೋಟಿ ಒಡೆಯರಾಗಿರುವ ಬಚ್ಚನ್, ತಮ್ಮ ಇಬ್ಬರು ಮಕ್ಕಳಿಗೆ ಆಸ್ತಿಯನ್ನು ಸಮನಾಗಿ ಪಾಲು ನೀಡಲಿದ್ದಾರೆ. 43 ವರ್ಷದ ಅಭಿಷೇಕ್ ಬಚ್ಚನ್ ಹಾಗೂ 45 ವರ್ಷದ ಶ್ವೇತಾ ಅವರಿಗೆ ಆಸ್ತಿಯನ್ನು ಸಮನಾಗಿ ನೀಡುವುದಾಗಿ ಇತ್ತೀಚೆಗೆ ಪ್ರಸಾರವಾಗಿರುವ ಕೆಬಿಸಿ ಕಾರ್ಯಕ್ರಮದಲ್ಲಿ ಹೇಳಿದ್ದಾರೆ. ಅವರ ಆಸ್ತಿಯಲ್ಲಿ ಜುಹುದಲ್ಲಿರುವ ಭವ್ಯ ಬಂಗಲೆಗಳು ಕೂಡ ಸೇರಿವೆ ಎನ್ನಲಾಗಿದೆ.

ನನ್ನ ಆಸ್ತಿಯಲ್ಲಿ ಇಬ್ಬರು ಮಕ್ಕಳಿಗೆ ಹಂಚಿಕೆ ಮಾಡಲಿದ್ದೇನೆ ಎಂದು ಕಾರ್ಯಕ್ರಮದಲ್ಲಿ ಬಿಗ್​ಬಿ ಹೇಳಿದ್ದಾರೆ. ನಾವು ಇನ್ನಿಲ್ಲದಿರುವಾಗ ನಮ್ಮಲ್ಲಿ ಏನಿದೆಯೋ ಅದು ನಮ್ಮ ಮಕ್ಕಳಿಗೆ ಸೇರುತ್ತದೆ. ನಮಗೆ ಒಬ್ಬ ಮಗ ಮತ್ತು ಮಗಳಿದ್ದಾಳೆ. ಅದನ್ನು ಇಬ್ಬರಿಗೂ ಸಮನಾಗಿ ಹಂಚಲಾಗುವುದು ಎಂದಿದ್ದಾರೆ. ಈ ಮೂಲಕ ಅಮಿತಾಬ್ ಬಚ್ಚನ್ ಅವರ ಎಲ್ಲಾ ಆಸ್ತಿಗಳ ಮೇಲೆ ಅಭಿಷೇಕ್ ಬಚ್ಚನ್ ಮತ್ತು ಶ್ವೇತಾ ಬಚ್ಚನ್ ಸಮಾನ ಹಕ್ಕುಗಳನ್ನು ಹೊಂದಿರುತ್ತಾರೆ ಅನ್ನೋದು ಸ್ಪಷ್ಟವಾಗಿದೆ.

Advertisement

Advertisement
Tags :
Advertisement