For the best experience, open
https://m.newskannada.com
on your mobile browser.
Advertisement

ದೀಪಿಕಾಗಾಗಿ ಬಿಗ್ ಬಜೆಟ್ ಸಿನಿಮಾ ಹೋಲ್ಡ್ ಮಾಡಿದ ಕರಣ್ ಜೋಹರ್

ಇತ್ತೀಚೆಗೆ ದೀಪಿಕಾ ಪಡುಕೋಣೆ ತಾಯಿ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ವಿಚಾರವನ್ನು ರಣವೀರ್ ಸಿಂಗ್ ಹಾಗೂ ಅವರು ಖುಷಿಯಿಂದ ರಿವೀಲ್ ಮಾಡಿದ್ದಾರೆ. ಇದೀಗ ಕರಣ್ ಜೋಹರ್, ದೀಪಿಕಾ ಪ್ರಗ್ನೆಂಟ್ ಆಗಿರುವುದರಿಂದ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಒಂದು ಹೋಲ್ಡ್​ನಲ್ಲಿ ಎನ್ನಲಾಗಿದೆ.
08:39 AM Mar 05, 2024 IST | Gayathri SG
ದೀಪಿಕಾಗಾಗಿ ಬಿಗ್ ಬಜೆಟ್ ಸಿನಿಮಾ ಹೋಲ್ಡ್ ಮಾಡಿದ ಕರಣ್ ಜೋಹರ್

ಇತ್ತೀಚೆಗೆ ದೀಪಿಕಾ ಪಡುಕೋಣೆ ತಾಯಿ ಆಗುತ್ತಿರುವ ಬಗ್ಗೆ ಘೋಷಣೆ ಮಾಡಿದ್ದಾರೆ. ಈ ವಿಚಾರವನ್ನು ರಣವೀರ್ ಸಿಂಗ್ ಹಾಗೂ ಅವರು ಖುಷಿಯಿಂದ ರಿವೀಲ್ ಮಾಡಿದ್ದಾರೆ. ಇದೀಗ ಕರಣ್ ಜೋಹರ್, ದೀಪಿಕಾ ಪ್ರಗ್ನೆಂಟ್ ಆಗಿರುವುದರಿಂದ ಬಹುನಿರೀಕ್ಷಿತ ಬಿಗ್ ಬಜೆಟ್ ಸಿನಿಮಾ ಒಂದು ಹೋಲ್ಡ್​ನಲ್ಲಿ ಎನ್ನಲಾಗಿದೆ.

Advertisement

ಕರಣ್ ಜೋಹರ್ ವಿಶೇಷವಾಗಿ ದೀಪಿಕಾಗಾಗಿ ಒಂದು ಕಥೆ ತಯಾರಿಸಿದ್ದರಂತೆ. ಈ ಸಿನಿಮಾ ಮಾಡಲು ದೀಪಿಕಾ ಗ್ರೀನ್ ಸಿಗ್ನಲ್ ನೀಡಿದ್ದರು. ಆದರೆ, ಈ ಮಧ್ಯೆ ಮಗು ಹೊಂದುವ ನಿರ್ಧಾರಕ್ಕೆ ಬಂದರು. ಮಗು ಜನಿಸಿದ ಮೇಲೆ ಆರೈಕೆ ಎಂದು ಎರಡು ವರ್ಷ ಅವರು ಬ್ರೇಕ್ ಪಡೆಯಬೇಕಾಗುತ್ತದೆ. ಹೀಗಾಗಿ, ಬೇರೆಯವರನ್ನು ಆಯ್ಕೆ ಮಾಡಿಕೊಂಡು ಸಿನಿಮಾ ಮಾಡುವಂತೆ ದೀಪಿಕಾ ಅವರು ಕರಣ್​ಗೆ ಸೂಚಿಸಿದ್ದಾರೆ. ಆದರೆ ಇದಕ್ಕೆ ಕರಣ್ ಜೋಹರ್ ಒಪ್ಪಿಲ್ಲ ಎನ್ನಲಾಗುತ್ತಿದೆ.

Advertisement
Advertisement
Tags :
Advertisement