ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೋಳಿ ಅಂಕಕ್ಕೆ ಪೊಲೀಸರ ದಾಳಿ: ಬಿಜೆಪಿ ಬೆಂಬಲಿತ ಗ್ರಾಪಂ ಸದಸ್ಯ ಸಹಿತ 11 ಮಂದಿ ವಶ

ಕೋಳಿ ಅಂಕ ಅಡ್ಡೆಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು 11 ಮಂದಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಹಿರೇಬೆಟ್ಟು ಗ್ರಾಮದ ಕಬ್ಯಾಡಿ ಕಂಬಳ ಗದ್ದೆಯಲ್ಲಿ ಎಂಬಲ್ಲಿ ನಡೆದಿದೆ.
09:28 AM Dec 19, 2023 IST | Ashika S

ಉಡುಪಿ: ಕೋಳಿ ಅಂಕ ಅಡ್ಡೆಗೆ ದಾಳಿ ನಡೆಸಿದ ಮಣಿಪಾಲ ಪೊಲೀಸರು 11 ಮಂದಿಯನ್ನು ವಶಕ್ಕೆ ಪಡೆದುಕೊಂಡ ಘಟನೆ ಹಿರೇಬೆಟ್ಟು ಗ್ರಾಮದ ಕಬ್ಯಾಡಿ ಕಂಬಳ ಗದ್ದೆಯಲ್ಲಿ ಎಂಬಲ್ಲಿ ನಡೆದಿದೆ.

Advertisement

80 ಬಡಗಬೆಟ್ಟು ಗ್ರಾಪಂನ ಬಿಜೆಪಿ ಬೆಂಬಲಿತ ಸದಸ್ಯ ಶುಭಕ‌ರ್ ಶೆಟ್ಟಿ ನೇತೃತ್ವದಲ್ಲಿ ಈ ಕೋಳಿ ಅಂಕ‌ ನಡೆಯುತ್ತಿತ್ತು ಎನ್ನಲಾಗಿದೆ‌.

ಖಚಿತ ಮಾಹಿತಿ ಮೇರೆಗೆ ಮಣಿಪಾಲ ಎಸ್‌ಐ ರಾಘವೇಂದ್ರ ಸಿ. ನೇತೃತ್ವದಲ್ಲಿ ದಾಳಿ ನಡೆಸಿದ ಪೊಲೀಸರು, ಗ್ರಾಪಂ ಸದಸ್ಯ ಶುಭಕ‌ರ್ ಶೆಟ್ಟಿ ಆತ್ರಾಡಿ, ರಾಕೇಶ್ ಶೆಟ್ಟಿ ಕುಕ್ಕುದಕಟ್ಟೆ, ಉಮೇಶ್ ಕಬ್ಯಾಡಿ, ವಿಶ್ಲೇಶ್ ಕಬ್ಯಾಡಿ, ವಿವೇಕ್, ದಿನೇಶ ನಾಯ್ಕ್, ರತ್ನಾಕರ್ ಪೂಜಾರಿ ಪೆರ್ಡೂರು, ವಿಠಲ್ ನಾಯ್ಕ್ ಕಾಜಾರಗುತ್ತು, ರಾಜೇಶ್ ನಾಯ್ಕ್ ನೆಲ್ಲಿಕಟ್ಟೆ, ಜಯ ಶೆಟ್ಟಿ ಹಿರೇಬೆಟ್ಟು ಹಾಗೂ ಸುಂದರ ಬಡಗಬೆಟ್ಟು ಎಂಬವರನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

Advertisement

ಈ ವೇಳೆ 5450 ರೂ.ಮೌಲ್ಯದ ಹತ್ತು ಹುಂಜ, 2800 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಮಣಿಪಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Advertisement
Tags :
LatetsNewsNewsKannadaಅಡ್ಡೆಕೋಳಿ ಅಂಕದಾಳಿಪೊಲೀಸರುಮಣಿಪಾಲವಶ
Advertisement
Next Article