ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಅಂಧ ಮಹಿಳೆಯರ ಟಿ20 ಕ್ರಿಕೆಟ್ ಟೂರ್ನಿ: ಒಡಿಶಾ ತಂಡ ಚಾಂಪಿಯನ್

ಕ್ರಿಕೆಟ್‌ ಅಸೋಸಿಯೇಷನ್ ಫಾರ್ ಬ್ಲೈಂಡ್‌ ಇನ್ ಇಂಡಿಯಾ  ಆಯೋಜಿಸಿದ್ದ ಅಂಧ ಮಹಿಳೆಯರ ರಾಷ್ಟ್ರೀಯ T20 ಕ್ರಿಕೆಟ್ ಟೂರ್ನಿಯಲ್ಲಿ  ಒಡಿಶಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.
09:11 PM Jan 12, 2024 IST | Ashika S

ಹುಬ್ಬಳ್ಳಿ: ಕ್ರಿಕೆಟ್‌ ಅಸೋಸಿಯೇಷನ್ ಫಾರ್ ಬ್ಲೈಂಡ್‌ ಇನ್ ಇಂಡಿಯಾ  ಆಯೋಜಿಸಿದ್ದ ಅಂಧ ಮಹಿಳೆಯರ ರಾಷ್ಟ್ರೀಯ T20 ಕ್ರಿಕೆಟ್ ಟೂರ್ನಿಯಲ್ಲಿ  ಒಡಿಶಾ ತಂಡ ಚಾಂಪಿಯನ್ ಆಗಿ ಹೊರಹೊಮ್ಮಿದೆ.

Advertisement

ಹುಬ್ಬಳ್ಳಿಯ ದೇಶಪಾಂಡೆನಗರ ಕೆಜಿಎ ಮೈದಾನದಲ್ಲಿ ನಡೆದ ಫೈನಲ್‌ನಲ್ಲಿ ಒಡಿಶಾ , ಆತಿಥೇಯ ಕರ್ನಾಟಕ ತಂಡದ ವಿರುದ್ಧ 6 ವಿಕೆಟ್‌ಗಳ ಜಯ ಸಾಧಿಸಿ, ಟ್ರೋಫಿ ತನ್ನದಾಗಿಸಿಕೊಂಡಿತು.

ಇದರೊಂದಿಗೆ ಚಾಂಪಿಯನ್ ತಂಡ 1.04 ಲಕ್ಷ ರೂ. ಹಾಗೂ ರನ್ನರ್ ಅಪ್ ತಂಡ 80 ಸಾವಿರ ರೂ. ನಗದು ಬಹುಮಾನ ಪಡೆಯಿತು.

Advertisement

ಮೊದಲು ಬ್ಯಾಟ್ ಮಾಡಿದ ಕರ್ನಾಟಕ 18.3 ಓವರ್‌ಗಳಲ್ಲಿ 93 ರನ್‌ಗಳಿಗೆ ಆಲೌಟ್‌ ಆಯಿತು.  ಈ ರನ್‌ ಗುರಿ ಬೆನ್ನತ್ತಿದ್ದ ಒಡಿಶಾ 13.1 ಓವರ್‌ಗಳಲ್ಲಿ 4 ವಿಕೆಟ್‌ ನಷ್ಟಕ್ಕೆ 94 ರನ್ ಗಳಿಸಿ ಜಯ ಸಾಧಿಸಿತು.

ಒಡಿಶಾ ತಂಡದ ಜಿಲಿ ಬಿರುವಾ ಫೈನಲ್ ಪಂದ್ಯದ ಆಟಗಾರ್ತಿ, ಬಿ-1 ವಿಭಾಗದಲ್ಲಿ ರಾಜಸ್ಥಾನದ ಸಿಮು ದಾಸ್, ಬಿ-2 ವಿಭಾಗದಲ್ಲಿ ದೆಹಲಿಯ ಮೆಂಕಾ ಕುಮಾರಿ ಹಾಗೂ ಬಿ-3 ವಿಭಾಗದಲ್ಲಿ ಜಿಲಿ ಬಿರುವಾ ಸರಣಿಶ್ರೇಷ್ಠ ಪ್ರಶಸ್ತಿ ಪಡೆದರು.

ಟೂರ್ನಿಯಲ್ಲಿ 16 ತಂಡಗಳು ಪಾಲ್ಗೊಂಡಿದ್ದವು.

Advertisement
Tags :
LatestNewsNewsKannadaಅಂಧ ಮಹಿಳೆಕ್ರಿಕೆಟ್‌ ಅಸೋಸಿಯೇಷನ್ಕ್ರಿಕೆಟ್ ಟೂರ್ನಿಚಾಂಪಿಯನ್ಬ್ಲೈಂಡ್‌ ಇನ್ ಇಂಡಿಯಾ
Advertisement
Next Article