For the best experience, open
https://m.newskannada.com
on your mobile browser.
Advertisement

ಅಕ್ಕಪಕ್ಕದ ಮನೆಯ ಹುಡುಗ ಹುಡುಗಿ ಕಾಣೆ: ಪ್ರತ್ಯೇಕ ಪ್ರಕರಣ ದಾಖಲು

ಅಕ್ಕಪಕ್ಕದ ಮನೆಯ ಹುಡುಗ ಮತ್ತು ಹುಡುಗಿ ಇಬ್ಬರು ಒಂದೇ ದಿನ ನಾಪತ್ತೆಯಾದ ಘಟನೆಯೊಂದು ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಎಂಬಲ್ಲಿ ನಡೆದಿದೆ.
10:43 AM Nov 27, 2023 IST | Ramya Bolantoor
ಅಕ್ಕಪಕ್ಕದ ಮನೆಯ ಹುಡುಗ ಹುಡುಗಿ ಕಾಣೆ  ಪ್ರತ್ಯೇಕ ಪ್ರಕರಣ ದಾಖಲು

ಬಂಟ್ವಾಳ: ಅಕ್ಕಪಕ್ಕದ ಮನೆಯ ಹುಡುಗ ಮತ್ತು ಹುಡುಗಿ ಇಬ್ಬರು ಒಂದೇ ದಿನ ನಾಪತ್ತೆಯಾದ ಘಟನೆಯೊಂದು ಬಂಟ್ವಾಳ ನಗರ ಪೋಲೀಸ್ ಠಾಣಾ ವ್ಯಾಪ್ತಿಯ ಎಂಬಲ್ಲಿ ನಡೆದಿದೆ.

Advertisement

ಸಜೀಪ ಮುನ್ನೂರು ಗ್ರಾಮದ ಉದ್ದೊಟ್ಟು ನಿವಾಸಿ ಅಬ್ದುಲ್ ಹಮೀದ್ ಅವರ ಮಗಳು ಆಯಿಸತ್ ರಸ್ಮಾ (18) ಮತ್ತು ಹೈದರ್ ಎಂಬವರ ಮಗ ಮಹಮ್ಮದ್ ಸಿನಾನ್ (23) ಕಾಣೆಯಾದವರು. ದೇರಳಕಟ್ಟೆಯ ನಡುಪದವು ಪಿ.ಎ.ಕಾಲೇಜಿನಲ್ಲಿ ಫಾರ್ಮಸಿ ವಿಭಾಗದ ಪ್ರಥಮ ವರ್ಷದ ವಿದ್ಯಾರ್ಥಿನಿಯಾಗಿದ್ದು ಒಂದು ವಾರಗಳ ಕಾಲ ರಜೆಯಿದ್ದ ಕಾರಣ ಈಕೆ ಮನೆಯಲ್ಲಿದ್ದಳು.

ನ.23 ರಾತ್ರಿ ಮನೆಯವರ ಜೊತೆ ಮಲಗಿದ್ದ ಈಕೆ ಬೆಳಿಗ್ಗೆ ಎದ್ದು ನೋಡುವಾಗ ಅವಳು ಮಲಗಿದ್ದ ಕೋಣೆಯಲ್ಲಿರದೆ ಕಾಣೆಯಾಗಿದ್ದಾಳೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸಿನಾನ್ ಕೆಲ ವರ್ಷಗಳ ಕಾಲ ವಿದೇಶದಲ್ಲಿ ಉದ್ಯೋಗ ಮಾಡಿಕೊಂಡಿದ್ದ ಇತ್ತೀಚೆಗೆ ಮರಳಿ ಊರಿಗೆ ಬಂದಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ಎಂದು ಅವರು ದೂರಿನಲ್ಲಿ ತಿಳಿಸಿದ್ದಾರೆ. ಈತ ಕೂಡ ನ.22. ರಂದು ಮನೆಯವರ ಜೊತೆಗೆ ಮಲಗಿದ್ದು, ಮರು ದಿನ ಅಂದರೆ ನ.23.ರಂದು ಬೆಳಿಗ್ಗೆ ಎದ್ದು ನೋಡುವಾಗ ಮನೆಯಲ್ಲಿರದೆ ಕಾಣೆಯಾಗಿರುವ ಬಗ್ಗೆ ದೂರಿನಲ್ಲಿ ತಿಳಿಸಲಾಗಿದೆ.

Advertisement

ಪ್ರೇಮ ಪ್ರಣಯ ಶಂಕೆ
ಅಕ್ಕಪಕ್ಕದ ಮನೆಯ ಹುಡುಗಿ ಮತ್ತು ಹುಡುಗನ ನಡುವೆ ಪ್ರೇಮ ಪ್ರಣಯದ ಶಂಕೆಯನ್ನು ವ್ಯಕ್ತಪಡಿಸಲಾಗಿದೆ. ಇವರಿಬ್ಬರು ಸಲುಗೆಯಿಂದ ಇದ್ದುದಲ್ಲದೆ, ಪರಿಚಯಸ್ಥರಾಗಿದ್ದಾರೆ. ಹಾಗಾಗಿ ಇವರಿಬ್ಬರು ಒಂದೇ ದಿನ ಕಾಣೆಯಾಗಿರುವುದರ ಹಿಂದೆ ಸಂದೇಹ ವ್ಯಕ್ತವಾಗಿದೆ. ಎರಡು ಮನೆಯವರ ಪೋಷಕರು ಕಾಣೆಯಾದ ಇಬ್ಬರನ್ನು ಹುಡುಕಿಕೊಡುವಂತೆ ಠಾಣೆಗೆ ನೀಡಿದ ದೂರಿನಲ್ಲಿ ತಿಳಿಸಿದ್ದಾರೆ.

Advertisement
Tags :
Advertisement