ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಕುಲ್ ಪ್ರೀತ್ ಸಿಂಗ್ ಮದುವೆ: ಪಟಾಕಿ ಸಿಡಿಸೋ ಬೇಡ ಎಂದ ನಟಿ

ನಟಿ ರಕುಲ್ ಪ್ರೀತ್ ಸಿಂಗ್  ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಮದುವೆ ಫೆಬ್ರವರಿ 21ರಂದು ಅದ್ದೂರಿಯಾಗಿ ನೆರವೇರಲಿದೆ.
08:33 AM Feb 14, 2024 IST | Ashika S

ಬೆಂಗಳೂರು: ನಟಿ ರಕುಲ್ ಪ್ರೀತ್ ಸಿಂಗ್  ಹಾಗೂ ನಿರ್ಮಾಪಕ ಜಾಕಿ ಭಗ್ನಾನಿ ಮದುವೆ ಫೆಬ್ರವರಿ 21ರಂದು ಅದ್ದೂರಿಯಾಗಿ ನೆರವೇರಲಿದೆ.

Advertisement

ಗೋವಾದ ಸಮುದ್ರ ತೀರದಲ್ಲಿ ಇವರ ಮದುವೆ ನಡೆಯಲಿದೆ ಎನ್ನಲಾಗುತ್ತಿದೆ. ಈಗಾಗಲೇ ಇವರ ಆಮಂತ್ರಣಪತ್ರ ವೈರಲ್ ಆಗಿದ್ದು, ಅದರಲ್ಲಿ ಸಮುದ್ರವನ್ನು ಕಾಣಬಹುದು. ಅವರ ಮದುವೆ ಸಂದರ್ಭದಲ್ಲಿ ಪಟಾಕಿ ಸಿಡಿಸೋ ಪದ್ಧತಿ ಬೇಡ ಎಂದು ರಕುಲ್ ಪ್ರೀತ್ ಸಿಂಗ್  ಹೇಳಿದ್ದು ಅವರ ನಿರ್ಧಾರವನ್ನು ಅನೇಕರು ಮೆಚ್ಚಿಕೊಂಡಿದ್ದಾರೆ.

ದೊಡ್ಡ ಸೆಲೆಬ್ರಿಟಿಗಳ ಮದುವೆ ಎಂದರೆ ಅಲ್ಲಿ ಪಟಾಕಿ ಸಿಡಿಸೋದು ಇದ್ದೇ ಇರುತ್ತದೆ. ನಾನಾ ರೀತಿಯ ಪಟಾಕಿಗಳನ್ನು ಸಿಡಿಸಿ ಕಣ್ಣಿಗೆ ತಂಪು ನೀಡಲಾಗುತ್ತದೆ. ಈ ರೀತಿ ಪಟಾಕಿ ಸಿಡಿಸುವುದರಿಂದ ಗಾಳಿಗೆ ಸಾಕಷ್ಟು ವಿಷಾನಿಲಗಳು ಸೇರಿಕೊಳ್ಳುತ್ತವೆ. ಈ ಕಾರಣಕ್ಕೆ ಪಟಾಕಿ ಬೇಡ ಎಂದು ಅವರು ನಿರ್ಧರಿಸಿದ್ದಾರೆ.

Advertisement

ರಕುಲ್ ಅವರು ಯಾವುದೇ ಆಮಂತ್ರಣ ಪತ್ರವನ್ನು ಪ್ರಿಂಟ್ ಮಾಡಿಲ್ಲ. ಬದಲಿಗೆ ಡಿಜಿಟಲ್ ಆಮಂತ್ರಣಪತ್ರ ಸಿದ್ಧಪಡಿಸಿ ಅದನ್ನು ನೀಡಲಾಗಿದೆ.

ಊಟದ ವಿಚಾರದಲ್ಲೂ ಕೆಲವು ನಿಯಮಗಳನ್ನು ತರಲು ಅವರು ಮುಂದಾಗಿದ್ದಾರೆ. ಯಾರೂ ಊಟವನ್ನು ಚೆಲ್ಲದಂತೆ ವಿಶೇಷ ಸೂಚನೆ ಹಾಕಿಸಲು ನಿರ್ಧರಿಸಲಾಗಿದೆ.

Advertisement
Tags :
LatetsNewsMARRIAGENewsKannadaಜಾಕಿ ಭಗ್ನಾನಿರಕುಲ್ ಪ್ರೀತ್ ಸಿಂಗ್
Advertisement
Next Article