For the best experience, open
https://m.newskannada.com
on your mobile browser.
Advertisement

'ಸೀತಾರಾಮ' ಖ್ಯಾತಿಯ ವೈಷ್ಣವಿಗೆ ದಂಡ ವಿಧಿಸಿದ ರಿಯಲ್ ಪೊಲೀಸರು

ಯಾವಾಗಲೂ ಯಾರೇ ಆದರೂ ಟ್ರಾಫಿಕ್​ ರೂಲ್ಸ್​​ ಪಾಲನೆ ಮಾಡಲೇ ಬೇಕು. ಅದು ರಿಯಲ್ ಆಗಿರಲಿ ಅಥವಾ ರೀಲ್ ಆಗಿರಲಿ. ಹೌದು ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಹಾಗೂ ಅವರ ಸ್ನೇಹಿತೆ ಸ್ಕೂಟರ್​ನಲ್ಲಿ ಪ್ರಯಾಣ ಮಾಡುತ್ತಾ ಇರುತ್ತಾರೆ. ಆದರೆ ಈ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡುತ್ತಿರುವ ವೈಷ್ಣವಿ ಗೌಡ ಅವರು ಸೀರಿಯಲ್ ಶೂಟಿಂಗ್​ ವೇಳೆ ಹೆಲ್ಮೆಟ್​ ಧರಿಸಿರುವುದಿಲ್ಲ.
06:28 PM May 12, 2024 IST | Ashitha S
 ಸೀತಾರಾಮ  ಖ್ಯಾತಿಯ ವೈಷ್ಣವಿಗೆ ದಂಡ ವಿಧಿಸಿದ ರಿಯಲ್ ಪೊಲೀಸರು

ಬೆಂಗಳೂರು: ಯಾವಾಗಲೂ ಯಾರೇ ಆದರೂ ಟ್ರಾಫಿಕ್​ ರೂಲ್ಸ್​​ ಪಾಲನೆ ಮಾಡಲೇ ಬೇಕು. ಅದು ರಿಯಲ್ ಆಗಿರಲಿ ಅಥವಾ ರೀಲ್ ಆಗಿರಲಿ. ಹೌದು ಸೀತಾ ರಾಮ ಧಾರಾವಾಹಿಯಲ್ಲಿ ಸೀತಾ ಪಾತ್ರಧಾರಿ ವೈಷ್ಣವಿ ಗೌಡ ಹಾಗೂ ಅವರ ಸ್ನೇಹಿತೆ ಸ್ಕೂಟರ್​ನಲ್ಲಿ ಪ್ರಯಾಣ ಮಾಡುತ್ತಾ ಇರುತ್ತಾರೆ. ಆದರೆ ಈ ಸಂದರ್ಭದಲ್ಲಿ ಸ್ಕೂಟಿಯಲ್ಲಿ ಹಿಂದೆ ಕುಳಿತು ಪ್ರಯಾಣ ಮಾಡುತ್ತಿರುವ ವೈಷ್ಣವಿ ಗೌಡ ಅವರು ಸೀರಿಯಲ್ ಶೂಟಿಂಗ್​ ವೇಳೆ ಹೆಲ್ಮೆಟ್​ ಧರಿಸಿರುವುದಿಲ್ಲ.

Advertisement

ಧಾರಾವಾಹಿಯನ್ನು ಹಲವಾರು ಜನರು ನೋಡುತ್ತಾರೆ. ನಂತರ ಅವರೂ ಇದೇ ರೀತಿ ಮಾಡುತ್ತಾರೆ ಎನ್ನುವ ಕಾರಣಕ್ಕೆ ಇದೀಗ ಅವರಿಗೆ ದಂಡ ವಿಧಿಸಲಾಗಿದೆ.

ಜೀ ಕನ್ನಡದಲ್ಲಿ ಪ್ರಸಾರವಾಗುವ ಸೀತಾ ರಾಮ ಧಾರಾವಾಹಿ ನಟಿಗೆ ಈ ಭಾರಿ ದಂಡ ವಿಧಿಸಲಾಗಿದೆ. ಈ ಸೀರಿಯಲ್‌ ದೃಶ್ಯ ಟಿವಿಯಲ್ಲಿ ಪ್ರಸಾರವಾಗುತ್ತಿದ್ದಂತೆ ಅದನ್ನು ಗಮನಿಸಿದ ಮಂಗಳೂರಿನ ಜಯಪ್ರಕಾಶ್‌ ಎಕ್ಕೂರು ಎಂಬುವವರು ಮಂಗಳೂರು ನಗರ ಪೊಲೀಸರಿಗೆ ಈ ಬಗ್ಗೆ ದೂರು ಸಲ್ಲಿಸಿದ್ದಾರೆ. ಸಮಾಜಕ್ಕೆ ಇದರಿಂದ ತುಂಬಾ ತಪ್ಪು ಸಂದೇಶ ರವಾನೆ ಆಗುತ್ತಾ ಇದೆ ಎಂದು ಹೇಳಿದ್ದಾರೆ. ಆ ಕಾರಣದಿಂದ ಅವರು ಕಂಪ್ಲೇಂಟ್ ಮಾಡಿದ್ಧಾರೆ.

Advertisement

ಈ ಕೂಡಲೇ ಆ ನಟಿಯ ಮೇಲೆ, ಸೀರಿಯಲ್‌ ನಿರ್ದೇಶಕ ಮತ್ತು ವಾಹಿನಿ ಮೇಲೆ ಕಟ್ಟು ನಿಟ್ಟಿನ ಕ್ರಮ ಜರುಗಿಸಬೇಕೆಂದು ದೂರಿನಲ್ಲಿ ಜಯಪ್ರಕಾಶ್​ ಬರೆದಿದ್ದಾರೆ.

ದೂರಿನ ಆಧಾರದ ಮೇಲೆ ಮಂಗಳೂರು ಪೂರ್ವ ಸಂಚಾರ ಠಾಣೆಗೆ ಈ ಕೇಸ್‌ ವರ್ಗಾವಣೆಯಾಗಿತ್ತು. ವಾಹಿನಿ ಮತ್ತು ನಟಿಗೆ ನೋಟಿಸ್‌ ರವಾನಿಸಲಾಗಿತ್ತು. ಜತೆಗೆ ಈ ಸೀರಿಯಲ್‌ ಶೂಟಿಂಗ್‌ ಬೆಂಗಳೂರಿನ ನಂದಿನಿ ಲೇಔಟ್‌ನಲ್ಲಿ ನಡೆದಿದ್ದರಿಂದ ಆ ಭಾಗದ ರಾಜಾಜಿನಗರ ಪೊಲೀಸ್‌ ಠಾಣೆಗೆ ಪ್ರಕರಣವನ್ನು ವರ್ಗಾಯಿಸಿ. ಆ ನಂತರದಲ್ಲಿ ತಲಾ 500 ರೂಪಾಯಿ ದಂಡ ವಿಧಿಸಲಾಗಿದೆ. ಗಾಡಿಯ ಓನರ್ ಸವಿತಾ ಎನ್ನುವವರಿಗೂ 500 ರೂ ದಂಡ ವಿಧಿಸಲಾಗಿದೆ.

Advertisement
Tags :
Advertisement