ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಜ. 26ರಂದು ರಿಲೀಸ್ ಆಗಲಿದೆ ವಿಜಯ ರಾಘವೇಂದ್ರ ಅಭಿನಯದ ‘ಕೇಸ್‌ ಆಫ್ ಕೊಂಡಾಣ’

ವಿಜಯ ರಾಘವೇಂದ್ರ  ಅವರು ನಿಧಾನವಾಗಿ  ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಇವರು ಅಭಿನಯಿಸಿದ ‘ಕೇಸ್‌ ಆಫ್ ಕೊಂಡಾಣ’ ಸಿನಿಮಾ ಜನವರಿ 26ರಂದು ರಿಲೀಸ್ ಆಗಲಿದೆ.
02:51 PM Jan 18, 2024 IST | Ashika S

ಬೆಂಗಳೂರು: ವಿಜಯ ರಾಘವೇಂದ್ರ  ಅವರು ನಿಧಾನವಾಗಿ  ಸಿನಿಮಾ ಕೆಲಸಗಳಲ್ಲಿ ತೊಡಗಿಸಿಕೊಂಡಿದ್ದು ಇವರು ಅಭಿನಯಿಸಿದ ‘ಕೇಸ್‌ ಆಫ್ ಕೊಂಡಾಣ’ ಸಿನಿಮಾ ಜನವರಿ 26ರಂದು ರಿಲೀಸ್ ಆಗಲಿದೆ.

Advertisement

‘ಕೇಸ್‌ ಆಫ್ ಕೊಂಡಾಣ’ ಚಿತ್ರದಲ್ಲಿ ವಿಜಯ್ ರಾಘವೇಂದ್ರ ಅವರಿಗೆ ಜೊತೆಯಾಗಿ ಭಾವನಾ ಮೆನನ್‌ ಕಾಣಿಸಿಕೊಂಡಿದ್ದಾರೆ. ದೇವಿಪ್ರಸಾದ್‌ ಶೆಟ್ಟಿ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಗಗನ್ ಬಡೇರಿಯಾ ಸಂಗೀತ ನೀಡಿದ್ದಾರೆ. ವಿಶ್ವ ಜಿತ್ ರಾವ್ ಛಾಯಾಗ್ರಹಣ ಮಾಡಿದ್ದಾರೆ. ಭವಾನಿ ಶಂಕರ್ ಆನೆಕಲ್ಲು ಕಲಾ ನಿರ್ದೇಶನ ಹಾಗೂ ಶಶಾಂಕ್ ನಾರಾಯಣ್ ಸಂಕಲನವಿದೆ. ಜೋಗಿ ಸಂಭಾಷಣೆ ಬರೆದಿದ್ದಾರೆ.

ಈ ಮೊದಲುದೇವಿಪ್ರಸಾದ್‌ ಶೆಟ್ಟಿ ‘ಸೀತಾರಾಮ್‌ ಬಿನೋಯ್‌’ ಹೆಸರಿನ ಸಿನಿಮಾ ಮಾಡಿದ್ದರು. ಈಗ ಅವರು ಇನ್ವೆಸ್ಟಿಗೇಷನ್‌ ಜಾನರ್‌ನ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಚಿತ್ರವನ್ನು ಸಾತ್ವಿಕ್ ಹೆಬ್ಬಾರ್ ನಿರ್ಮಾಣ ಮಾಡಿದ್ದು,ಖುಷಿ ರವಿ ಹಾಗೂ ರಂಗಾಯಣ ರಘು ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ.

Advertisement

Advertisement
Tags :
‘ಕೇಸ್‌ ಆಫ್ ಕೊಂಡಾಣ’LatetsNewsNewsKannadaರಿಲೀಸ್ವಿಜಯ ರಾಘವೇಂದ್ರಸಿನಿಮಾ
Advertisement
Next Article