ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇನ್ಮುಂದೆ ಕೆಎಸ್‌ಆರ್‌ಟಿಸಿಯಲ್ಲಿ ಕ್ಯಾಶ್‌ ಇಲ್ಲದೆ ಓಡಾಡಿ..!

ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣಿಸುವವರು ಇನ್ನು ಮೂರು ತಿಂಗಳ ನಂತರ ನಗದನ್ನು ತೆಗೆದುಕೊಂಡು ಹೋಗದಿದ್ದರೂ ಬಸ್‌ನಲ್ಲಿ ಪ್ರಯಾಣಿಸಬಹುದು. ಏಕೆಂದರೆ ನಗದು ನೀಡುವ ಜಂಜಾಟದಿಂದ ಪ್ರಯಾಣಿಕರನ್ನು ಹೊರತರಲು ಮುಂದಾಗಿರುವ ಕೆಎಸ್ಸಾರ್ಟಿಸಿ, ಯುಪಿಐ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮುಂತಾದವುಗಳ ಮೂಲಕ ‘ಕ್ಯಾಶ್‌ ಲೆಸ್‌’ ಟಿಕೆಟಿಂಗ್‌ ವ್ಯವಸ್ಥೆ ಜಾರಿ ಮಾಡುತ್ತಿದೆ.
10:02 AM Jan 07, 2024 IST | Ashitha S

ಬೆಂಗಳೂರು: ಕೆಎಸ್ಸಾರ್ಟಿಸಿಯಲ್ಲಿ ಪ್ರಯಾಣಿಸುವವರು ಇನ್ನು ಮೂರು ತಿಂಗಳ ನಂತರ ನಗದನ್ನು ತೆಗೆದುಕೊಂಡು ಹೋಗದಿದ್ದರೂ ಬಸ್‌ನಲ್ಲಿ ಪ್ರಯಾಣಿಸಬಹುದು. ಏಕೆಂದರೆ ನಗದು ನೀಡುವ ಜಂಜಾಟದಿಂದ ಪ್ರಯಾಣಿಕರನ್ನು ಹೊರತರಲು ಮುಂದಾಗಿರುವ ಕೆಎಸ್ಸಾರ್ಟಿಸಿ, ಯುಪಿಐ, ಡೆಬಿಟ್‌, ಕ್ರೆಡಿಟ್‌ ಕಾರ್ಡ್‌ ಮುಂತಾದವುಗಳ ಮೂಲಕ ‘ಕ್ಯಾಶ್‌ ಲೆಸ್‌’ ಟಿಕೆಟಿಂಗ್‌ ವ್ಯವಸ್ಥೆ ಜಾರಿ ಮಾಡುತ್ತಿದೆ.

Advertisement

ಎಲ್ಲೆಡೆ ಕ್ಯಾಶ್‌ ಲೆಸ್ ವಹಿವಾಟು ನಡೆಯುತ್ತಿದ್ದು, ಅದರಿಂದಾಗಿ ಜನರು ತಮ್ಮೊಂದಿಗೆ ನಗದು ಇಟ್ಟುಕೊಳ್ಳುವುದನ್ನೇ ಕಡಿಮೆ ಮಾಡಿದ್ದಾರೆ. ಜನರ ಪರಿಪಾಠವನ್ನು ಅರಿತಿರುವ ಕೆಎಸ್ಸಾರ್ಟಿಸಿ, ತನ್ನ ಟಿಕೆಟಿಂಗ್ ವ್ಯವಸ್ಥೆಯಲ್ಲಿ ಬದಲಾವಣೆ ತರುತ್ತಿದೆ. ಸದ್ಯ ಇರುವ ನಗದು ವ್ಯವಹಾರದ ಜತೆಗೆ ಕ್ಯಾಶ್‌ ಲೆಸ್‌ ಟಿಕೆಟಿಂಗ್‌ ವ್ಯವಸ್ಥೆಯನ್ನು ಜಾರಿಗೊಳಿಸಲಾಗುತ್ತಿದೆ. ಅದಕ್ಕಾಗಿ ಎಲ್ಲ ಸಿದ್ಧತೆ ಮಾಡಿಕೊಳ್ಳುತ್ತಿರುವ ಕೆಎಸ್ಸಾರ್ಟಿಸಿ, ಏಪ್ರಿಲ್‌ ಅಥವಾ ಮೇ ವೇಳೆಗೆ ನೂತನ ವ್ಯವಸ್ಥೆ ಜಾರಿಗೊಳಿಸಲಿದೆ. ಅದಕ್ಕಾಗಿ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ಟಿಕೆಟಿಂಗ್‌ ಯಂತ್ರ (ಸ್ಮಾರ್ಟ್‌ ಇಟಿಎಂ)ವನ್ನು ಬಾಡಿಗೆ ಆಧಾರದಲ್ಲಿ ಪಡೆಯಲು ಮುಂದಾಗಿದೆ.

ಈ ಸ್ಮಾರ್ಟ್‌ ಎಲೆಕ್ಟ್ರಾನಿಕ್‌ ನಲ್ಲಿ ಟೀಕೆಟ್‌ ನೀಡುವುದು ಟಿಕೆಟ್‌ ಮೊತ್ತ ಪಡೆಯುವುದಷ್ಟೆ ಅಲ್ಲದೆ, ಕೆಎಸ್ಸಾರ್ಟಿಸಿ ಬಸ್‌ಗಳ ಕಾರ್ಯಾಚರಣೆಯ ಸಂಪೂರ್ಣ ಮಾಹಿತಿ ಸ್ಮಾರ್ಟ್‌ ಇಟಿಎಂನಲ್ಲಿ ನಮೂದಾಗುವಂತೆ ಮಾಡಲಾಗುತ್ತದೆ. ಸದ್ಯದಲ್ಲೆ ಇದು ಜಾರಿಗೆ ಬರಲಿದೆ.

Advertisement

Advertisement
Tags :
‘ಕ್ಯಾಶ್‌ ಲೆಸ್‌indiaLatestNewsNewsKannadaಕೆಎಸ್‌ಆರ್‌ಟಿಸಿಬೆಂಗಳೂರು
Advertisement
Next Article