ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಏಪ್ರೀಲ್‌ 14ರ ಮೋದಿ ಕರ್ನಾಟಕ ಪ್ರವಾಸದಲ್ಲಿ ಬದಲಾವಣೆ : ಎರಡು ಕಾರ್ಯಕ್ರಮಗಳು ರದ್ದು

ಏಪ್ರೀಲ್‌ 14 ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಕೆಲ ಜಿಲ್ಲೆಗಳಿಗೆ ಭೇಟಿ ನೀಡಲಿದ್ದರು ಆದರೆ ಇದೀಗ ಅವರ ಪ್ರವಾಸದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು 14 ರಂದು ಮಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಬೃಹತ್ ಸಮಾವೇಶ ಮತ್ತು ಬೆಂಗಳೂರಿನಲ್ಲಿನಿಗದಿಯಾಗಿದ್ದ ರೋಡ್​ ಶೋ ರದ್ದಾಗಿದೆ.
05:38 PM Apr 10, 2024 IST | Nisarga K
ಏಪ್ರೀಲ್‌ 14ರ ಮೋದಿ ಕರ್ನಾಟಕ ಪ್ರವಾಸದಲ್ಲಿ ಬದಲಾವಣೆ : ಎರಡು ಕಾರ್ಯಕ್ರಮಗಳು ರದ್ಧು

ಮಂಗಳೂರು:   ಏಪ್ರೀಲ್‌ 14 ರಂದು ಪ್ರಧಾನಿ ನರೇಂದ್ರ ಮೋದಿ ಆಗಮಿಸಿ ಕೆಲ ಜಿಲ್ಲೆಗಳಿಗೆ ಭೇಟಿ ನೀಡಲಿದ್ದರು ಆದರೆ ಇದೀಗ ಅವರ ಪ್ರವಾಸದಲ್ಲಿ ಮಹತ್ವದ ಬದಲಾವಣೆ ಮಾಡಲಾಗಿದ್ದು 14 ರಂದು ಮಂಗಳೂರಿನಲ್ಲಿ ನಡೆಯಬೇಕಿದ್ದ ಬಿಜೆಪಿ ಬೃಹತ್ ಸಮಾವೇಶ ಮತ್ತು ಬೆಂಗಳೂರಿನಲ್ಲಿನಿಗದಿಯಾಗಿದ್ದ ರೋಡ್​ ಶೋ ರದ್ದಾಗಿದೆ.

Advertisement

ಮೊದಲಿಗೆ ಮೋದಿ ಮೈಸೂರಿನಲ್ಲಿ ನಡೆಯಲಿರುವ ಸಮಾವೇಶದಲ್ಲಿ ಭಾಗಿಯಾಗಲಿದ್ದಾರೆ. ಬಳಿಕ ಮಂಗಳೂರಿನಲ್ಲಿ ಸಮಾವೇಶದ ಬದಲಿಗೆ ಸುಮಾರು 2.5 ಕಿ.ಮೀ. ರೋಡ್​ ಶೋ ಮಾತ್ರ ಮಾಡಲಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಏಪ್ರಿಲ್ 14ರಂದು ಮಂಗಳೂರಿನ ಗೋಲ್ಡ್ ಪಿಂಚ್ ಸಿಟಿ ಮೈದಾನದಲ್ಲಿ ಬೃಹತ್ ಬಿಜೆಪಿ ಸಮಾವೇಶ ಹಮ್ಮಿಕೊಳ್ಳಲಾಗಿತ್ತು. ಆದ್ರೆ, ಇದೀಗ ಕೆಲ ಕಾರಣಾಂತರಗಳಿಂದ ಈ ಸಮಾವೇಶ ರದ್ದಾಗಿದ್ದು, ಸಮಾವೇಶದ ಬದಲು ಸುಮಾರು 2.5 ಕಿ.ಮೀ ರೋಡ್​ ಶೋ ರೋಡ್ ಶೋ ನಡೆಸಲಿದ್ದು, ರೂಟ್​ ಮ್ಯಾಪ್ ಸಹ ಸಿದ್ಧವಾಗಿದೆ.

Advertisement

ಏಪ್ರಿಲ್ 14ರಂದು ಸಂಜೆ 4 ಗಂಟೆಗೆ ಮೈಸೂರಿನಲ್ಲಿ ನಡೆಯಲಿರುವ ಸಾರ್ವಜನಿಕ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಮೈಸೂರಿನಿಂದ ಮಂಗಳೂರಿಗೆ ಆಗಮಿಸಲಿದ್ದು, ಸಂಜೆ 6 ಗಂಟೆಗೆ ರೋಡ್​ ಶೋ ಆರಂಭಿಸಲಿದ್ದಾರೆ.

ಏಪ್ರಿಲ್ 14ರ ಸಂಜೆ 5 ಗಂಟೆಗೆ ಮಂಗಳೂರಿಗೆ ಆಗಮಿಸಲಿರುವ ಪ್ರಧಾನಿ ನರೇಂದ್ರ ಮೋದಿ ಮೊದಲಿಗೆ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮೋದಿ ರೋಡ್​ ಶೋ ಆರಂಭಿಸಲಿದ್ದಾರೆ. ಲೇಡಿಹಿಲ್ ನಾರಾಯಣಗುರು ವೃತ್ತದಿಂದ ಹಂಪನಕಟ್ಟೆವರೆಗೆ ಸುಮಾರು 2.5 ಕೀ.ಮಿ ರೋಡ್ ಶೋ ನಡೆಯಲಿದೆ. ಲಾಲ್​ಬಾಗ್, ಮಂಗಳೂರು ಪಾಲಿಕೆ ಕಚೇರಿ, ಬಳ್ಳಾಲ್​ಬಾಗ್, ಎಂ.ಜಿ.ರಸ್ತೆ, PVS ವೃತ್ತ, ನವಭಾರತ ವೃತ್ತ, ಕೆ.ಎಸ್.ರಾವ್ ರಸ್ತೆ ಮೂಲಕ ಹಂಪನಕಟ್ಟೆ ಸಿಗ್ನಲ್​ನಲ್ಲಿ ರೋಡ್​ ಶೋ ಅಂತ್ಯವಾಗಲಿದೆ.

Advertisement
Tags :
BreakingNewscancelledKARNATAKALatestNewsmangaluruNARENDRA MODInewkarnatakaprogramstour
Advertisement
Next Article