For the best experience, open
https://m.newskannada.com
on your mobile browser.
Advertisement

ವಿಶ್ವಾದ್ಯಂತ ಇಂದು ಕ್ರಿಸ್‌ಮಸ್‌ ಹಬ್ಬದ ಸಡಗರ, ಸಂಭ್ರಮ

ವಿಶ್ವಾದ್ಯಂತ ಆಚರಿಸುವ ಹಬ್ಬಗಳಲ್ಲಿ ಕ್ರಿಸ್‌ಮಸ್‌ ಕೂಡಾ ಒಂದು. ಪ್ರತಿ ವರ್ಷ ಡಿಸೆಂಬರ್‌ ಬಂತೆಂದರೆ ಕ್ರೈಸ್ತರಿಗೆ ಸಡಗರ, ಸಂಭ್ರಮ ಆರಂಭವಾಗುತ್ತದೆ. ಇಡೀ ವಿಶ್ವಕ್ಕೆ ಪ್ರೀತಿ ಮತ್ತು ದಯೆಯ ಸಂದೇಶ ಹಂಚಿದ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ.
09:52 AM Dec 25, 2023 IST | Ashitha S
ವಿಶ್ವಾದ್ಯಂತ ಇಂದು ಕ್ರಿಸ್‌ಮಸ್‌ ಹಬ್ಬದ ಸಡಗರ  ಸಂಭ್ರಮ

ವಿಶ್ವಾದ್ಯಂತ ಆಚರಿಸುವ ಹಬ್ಬಗಳಲ್ಲಿ ಕ್ರಿಸ್‌ಮಸ್‌ ಕೂಡಾ ಒಂದು. ಪ್ರತಿ ವರ್ಷ ಡಿಸೆಂಬರ್‌ ಬಂತೆಂದರೆ ಕ್ರೈಸ್ತರಿಗೆ ಸಡಗರ, ಸಂಭ್ರಮ ಆರಂಭವಾಗುತ್ತದೆ. ಇಡೀ ವಿಶ್ವಕ್ಕೆ ಪ್ರೀತಿ ಮತ್ತು ದಯೆಯ ಸಂದೇಶ ಹಂಚಿದ ಯೇಸು ಕ್ರಿಸ್ತ ಜನಿಸಿದ ದಿನವನ್ನು ಕ್ರಿಸ್‌ಮಸ್‌ ಹಬ್ಬವನ್ನಾಗಿ ಪ್ರತಿವರ್ಷ ಆಚರಿಸಲಾಗುತ್ತದೆ.

Advertisement

ಈ ದಿನ ಮೇರಿ ಮತ್ತು ಜೋಸೆಫ್‌ ದಂಪತಿಯ ಪುತ್ರನಾಗಿ ಯೇಸುಕ್ರಿಸ್ತನು ಬೆತ್ಲಹೆಮ್‌ ಎಂಬಲ್ಲಿ ಜನಿಸುತ್ತಾರೆ. ಗ್ರೀಕ್‌ ಲಿಪಿಯಲ್ಲಿ ಯೇಸು ಕ್ರಿಸ್ತನ ಮೊದಲ ಅಕ್ಷರವು ಇಂಗ್ಲೀಷಿನಲ್ಲಿ X ನಂತೆ ಕಾಣುವುದರಿಂದ ಈ ಹಬ್ಬವನ್ನು ಕ್ರಿಸ್‌ಮಸ್‌ ಎಂದೂ ಇನ್ನೂ ಕೆಲವರು ಎಕ್ಸ್‌ ಮಸ್‌ ಎಂದೂ ಬರೆದು ಸಂಬೋಧಿಸುತ್ತಾರೆ. ಡಿಸೆಂಬರ್‌ 25 ಸಾರ್ವತ್ರಿಕ ರಜಾ ದಿನವಾಗಿದೆ. ಇಸ್ರೇಲ್‌, ಆಸ್ಟ್ರೇಲಿಯಾ, ಅಮೆರಿಕ, ಬ್ರಿಟನ್‌, ಜಪಾನ್‌, ಚೈನಾ, ಈಜಿಪ್ಟ್‌, ರಷ್ಯಾ, ರೊಮೊನಿಯಾ, ಭಾರತ ಸೇರಿದಂತೆ ಬಹುತೇಕ ದೇಶಗಳು ಪ್ರತಿವರ್ಷ ಕ್ರಿಸ್‌ಮಸ್‌ ಆಚರಿಸುತ್ತವೆ.

ಯೇಸು ಕ್ರಿಸ್ತನ ಜನನ:
ಮೇರಿ ಡಿ.25 ರಂದು ಭಗವಂತ ಯೇಸುವಿಗೆ ಜನ್ಮ ನೀಡಿದಳು. ಮೇರಿ ಗರ್ಭಾವಸ್ಥೆಯಲ್ಲಿ ಇದ್ದಾಗ ಬೆಥ್ ಲೆಹೆಮ್ ನಲ್ಲಿ ಇರಬೇಕೆಂದು ದೇವದೂತನು ಕುರುಬರಿಗೆ ತಿಳಿಸಿದ್ದನು. ಒಂದು ದಿನ ತಡರಾತ್ರಿ ಮೇರಿ ಮರಿಯಮ್ಮಗೆ ತಂಗಲು ಸೂಕ್ತ ಸ್ಥಳ ಸಿಗದೆ ಜನರು ಪಶುಪಾಲನೆ ಮಾಡುತ್ತಿದ್ದ ಜಾಗದಲ್ಲಿ ನಿಂತಿದ್ದರು. ರಾತ್ರಿಯಲ್ಲಿ ಆ ಸ್ಥಳದಲ್ಲಿಯೇ ಮೇರಿ ಯೇಸುವಿಗೆ ಜನ್ಮ ನೀಡಿದಳು.

Advertisement

ಯೇಸುಕ್ರಿಸ್ತನ ಜನ್ಮಸ್ಥಳದಿಂದ ಸ್ವಲ್ಪ ದೂರದಲ್ಲಿ ಕೆಲವು ಕುರುಬರು ಕುರಿಗಳನ್ನು ಮೇಯಿಸುತ್ತಿದ್ದರು ಎಂದು ಹೇಳಲಾಗುತ್ತದೆ. ಆಗ ದೇವರೇ ದೇವದೂತನ ರೂಪದಲ್ಲಿ ಅಲ್ಲಿಗೆ ಬಂದು ಕುರುಬರಿಗೆ ಈ ನಗರದಲ್ಲಿ ಒಬ್ಬ ರಕ್ಷಕನು ಜನಿಸಿದನು, ಅದು ಪ್ರಭು ಯೇಸುವೇ ಎಂದು ಹೇಳಿದನು. ದೇವದೂತರ ಮಾತನ್ನು ನಂಬಿದ ಕುರುಬರು ಮಗುವನ್ನು ನೋಡಲು ಧಾವಿಸಿದರು.

ಇದಾದ ನಂತರ ಮಗುವನ್ನು ನೋಡುವವರ ದಂಡು ಹೆಚ್ಚಾಗತೊಡಗಿತು. ಜನರ ಕಲ್ಯಾಣಕ್ಕಾಗಿ ಭೂಮಿಗೆ ಬಂದ ಯೇಸು ದೇವರ ಮಗನೆಂದು ಅವರೆಲ್ಲರೂ ನಂಬಿದ್ದರು. ಕಾಲಾನಂತರದಲ್ಲಿ ಲಾರ್ಡ್ ಜೀಸಸ್ ಅವರು ಕ್ರಿಶ್ಚಿಯನ್ ಧರ್ಮವನ್ನು ಸ್ಥಾಪಿಸಿದರು ಎಂದು ಹೇಳಲಾಗುತ್ತದೆ.

ಇನ್ನು ಯೇಸು ಕ್ರಿಸ್ತ ಹುಟ್ಟಿದ್ದು ಹಸುವಿನ ಕೊಟ್ಟಿಗೆಯಲ್ಲಿ, ಆದ್ದರಿಂದ ಕ್ರಿಸ್‌ಮಸ್‌ ಹಬ್ಬದಂದು ಬಹುತೇಕ ಕ್ರೈಸ್ತರ ಮನೆಯಲ್ಲಿ ಪುಟ್ಟ ಕೊಟ್ಟಿಗೆ ಆಕಾರದ ಆಕೃತಿ ನಿರ್ಮಿಸಿ ಕ್ರೈಸ್ತ, ಮೇರಿ, ಜೋಸೆಫ್‌ ಸೇರಿದಂತೆ ಕೆಲವು ಗೊಂಬೆಯನ್ನು ಇಡಲಾಗುತ್ತದೆ. ಜೊತೆಗೆ ಕ್ರಿಸ್‌ ಮಸ್‌ ಮರಕ್ಕೆ ಲೈಟಿಂಗ್‌ ಹಾಗೂ ವಿವಿಧ ವಿನ್ಯಾಸದಿಂದ ಅಲಂಕರಿಸಲಾಗುತ್ತದೆ. ಕೇಕ್‌, ರೋಸ್‌ ಕುಕೀಸ್‌, ಕುಲ್‌ ಕುಲ್ಸ್ ಸೇರಿದಂತೆ ಇನ್ನಿತರ ತಿಂಡಿಗಳನ್ನು ಪ್ರೀತಿ ಪಾತ್ರರಿಗೆ ಹಂಚಲಾಗುತ್ತದೆ. ಸಾಂಟಾಕ್ಲಾಸ್‌ ವೇಷಧಾರಿ, ಮನೆಗಳಿಗೆ ತೆರಳಿ ಮಕ್ಕಳಿಗೆ ಇಷ್ಟವಾದ ಚಾಕೊಲೇಟ್‌, ಕುಕೀಸ್‌ ಸೇರಿದಂತೆ ಇನ್ನಿತರ ಗಿಫ್ಟ್‌ಗಳನ್ನು ನೀಡುತ್ತಾರೆ.

ಇನ್ನು ಕ್ರಿಸ್‌ಮಸ್‌ ಹತ್ತಿರ ಬರುತ್ತಿದ್ದಂತೆ ಯೇಸು ಕ್ರಿಸ್ತನನ್ನು ಸ್ವಾಗತಿಸಲು ಕ್ರೈಸ್ತರು ಗುಂಪು ಗೂಡಿ, ಇತರ ಕ್ರೈಸ್ತರ ಮನೆ ಮನೆಗಳಿಗೆ ತೆರಳಿ ಪ್ರಾರ್ಥನೆ ಹಾಡುತ್ತಾರೆ. ಕ್ರಿಸ್‌ ಮಸ್‌ ದಿನದಂದು ಕುಟುಂಬ ಸಹಿತ ಚರ್ಚ್‌ಗಳಿಗೆ ತೆರಳಿ ಪ್ರಾರ್ಥನೆ ಸಲ್ಲಿಸಲಾಗುತ್ತದೆ. ಅಲ್ಲಿ ವಿವಿಧ ಧಾರ್ಮಿಕ ಆಚರಣೆಗಳನ್ನು ಏರ್ಪಡಿಸಲಾಗುತ್ತದೆ. ದೇಶದಿಂದ ದೇಶಕ್ಕೆ , ಪ್ರತಿ ರಾಜ್ಯಗಳಲ್ಲೂ ಆಚರಣೆಯಲ್ಲಿ ವೈವಿಧ್ಯತೆ ಇರುತ್ತದೆ.

ಹಬ್ಬದ​​ ಅಚರಣೆಯ ಮಹತ್ವ:
ಕ್ರಿಸ್​ಮಸ್ ಕ್ರಿಶ್ಚಿಯನ್ ಸಮುದಾಯದ ಪಾಲಿಗೆ ವಿಶೇಷ ದಿನ. ದೇವರು ತನ್ನ ಮಗನನ್ನು ಭೂಮಿಯಲ್ಲಿರುವ ಜನತೆಗೆ ತ್ಯಾಗ ಮತ್ತು ಮಾನವೀಯ ಗುಣಗಳನ್ನು ತಿಳಿಸಲು ಕಳುಹಿಸಿದ್ದಾರೆ. ಜನರಿಗೋಸ್ಕರ ತ್ಯಾಗ ಮಾಡಿ ಏಸುಕ್ರಿಸ್ತ ಶಿಲುಬೆಗೆ ಏರಿದ್ದಾನೆ ಎಂದು ನಂಬಲಾಗಿದೆ.

ಇನ್ನುಆಧುನಿಕ ಪ್ರಪಂಚದಲ್ಲಿ ಯುಎಸ್​ ಮತ್ತು ಇತರ ದೇಶಗಳಲ್ಲಿ ಸಾಂತಾ ಕ್ಲಾಸ್​ ಎನ್ನುವ ವ್ಯಕ್ತಿಯ ಪರಿಕಲ್ಪನೆಯಿದೆ. ಅವರು ಪ್ರತೀ ವರ್ಷ ಕಿಸ್​ ಮಸ್​ ಸಮಯದಲ್ಲಿ ಮಕ್ಕಳಿಗೆ ಉಡುಗೊರೆಯನ್ನು ತರುತ್ತಾರೆ. ಉತ್ತರ ದ್ರುವದಲ್ಲಿ ವಾಸಿಸುವ ಸಾಂತಾ ಕ್ರಿಸ್​ ಮಸ್​ ಹಿಂದಿನ ದಿನ ಜಗತ್ತಿನಲ್ಲಿರುವ ಎಲ್ಲಾ ಮಕ್ಕಳಿಗೆ ಉಡುಗೊರೆಯನ್ನು ನೀಡುತ್ತಾರೆ ಎನ್ನುವ ನಂಬಿಕೆಯಿದೆ.

Advertisement
Tags :
Advertisement