ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೊಹ್ಲಿ ತಾಯಿ ಅನಾರೋಗ್ಯದ ಬಗ್ಗೆ ವದಂತಿ; ಸ್ಪಷ್ಟನೆ ನೀಡಿದ ವಿಕಾಸ್ ಕೊಹ್ಲಿ

ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆಯಾಗಿದ್ದ ಕೊಹ್ಲಿ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದರು. ಇದಕ್ಕೆ ಅವರು ಯಾವುದೇ ಕಾರಣ ಕೊಡಲಿಲ್ಲವಾದರೂ ಕೌಟುಂಬಿಕ ಕಾರಣಗಳಿಂದ ಅವರು ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿತ್ತು.
08:33 PM Feb 01, 2024 IST | Maithri S

ನವದೆಹಲಿ: ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯ ಮೊದಲ ಎರಡು ಪಂದ್ಯಗಳಿಗೆ ಆಯ್ಕೆಯಾಗಿದ್ದ ಕೊಹ್ಲಿ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದರು. ಇದಕ್ಕೆ ಅವರು ಯಾವುದೇ ಕಾರಣ ಕೊಡಲಿಲ್ಲವಾದರೂ ಕೌಟುಂಬಿಕ ಕಾರಣಗಳಿಂದ ಅವರು ಮೊದಲೆರಡು ಟೆಸ್ಟ್ ಪಂದ್ಯಗಳನ್ನು ಆಡಲು ಸಾಧ್ಯವಿಲ್ಲ ಎಂದು ಬಿಸಿಸಿಐ ಹೇಳಿತ್ತು.

Advertisement

ಹೀಗಿದ್ದರೂ ಕೊಹ್ಲಿಯವರ ಕುಟುಂಬದ ಬಗ್ಗೆ ಹಲವಾರು ಸುದ್ದಿಗಳು ಹರಿದಾಡುತ್ತಿದ್ದು, ಅವರ ತಾಯಿಯ ಆರೋಗ್ಯದಲ್ಲಿ ಏರುಪೇರಾದ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ವದಂತಿಗಳು ಹರಡುತ್ತಿವೆ.

ಇದಕ್ಕೆ ಪ್ರತಿಕ್ರಿಯಿಸಿರುವ ವಿರಾಟ್ ಕೊಹ್ಲಿಯ ಸಹೋದರ ವಿಕಾಸ್ ಕೊಹ್ಲಿ, ʼನಮ್ಮ ತಾಯಿಯ ಆರೋಗ್ಯದ ಬಗ್ಗೆ ಕೆಲ ಸುದ್ದಿಗಳು ಹರಿದಾಡುತ್ತಿರುವುದನ್ನು ಗಮನಿಸಿದ್ದೇನೆ. ನಮ್ಮ ತಾಯಿ ಆರೋಗ್ಯವಾಗಿದ್ದಾರೆʼ ಎಂದು ಸ್ಪಷ್ಟನೆ ನೀಡಿದ್ದು, ʼಸರಿಯಾದ ಮಾಹಿತಿ ಇಲ್ಲದೆ ಯಾವ ವಿಷಯವನ್ನೂ ಹರಡದಂತೆ ಮಾಧ್ಯಮದವರಲ್ಲಿ ಹಾಗು ಜನಸಾಮಾನ್ಯರಲ್ಲಿ ವಿನಂತಿಸುತ್ತೇನೆʼ ಎಂದು ಮನವಿ ಮಾಡಿದ್ದಾರೆ.

Advertisement

ಮೂರನೇ ಟೆಸ್ಟ್‌ಗೆ ಭಾರತ ತಂಡವನ್ನು ಶೀಘ್ರದಲ್ಲೇ ಪ್ರಕಟಿಸುವ ಸಾಧ್ಯತೆಯಿದ್ದು, ಕೋಹ್ಲಿ ಮರಳುವ ಬಗ್ಗೆ ಕುತೂಹಲ ಮನೆಮಾಡಿದೆ.

Advertisement
Tags :
indiakohliLatestNewsNewsKannadaRumour
Advertisement
Next Article