ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಮ್ಮ ದಿನನಿತ್ಯದ ಸಂಗಾತಿಯ ಸ್ವಚ್ಛತೆಗೆ ಆದ್ಯತೆ

ಮೊಬೈಲ್ ಪರದೆಯನ್ನು ಸ್ವಚ್ಛಗೊಳಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು
07:23 PM Jan 02, 2024 IST | Maithri S

ನಮ್ಮ ಜೀವನದ ಪ್ರತಿ ಘಟ್ಟದಲ್ಲೂ ಜೊತೆಗಿರುವ ಸಾಧನವಾದ ಮೊಬೈಲ್ ತನ್ನ ಪರದೆಯ ಮೇಲೆ ಸಾಕಷ್ಟು ಪ್ರಮಾಣದ ಧೂಳು ಹಾಗು ಕೊಳಕನ್ನು ಶೇಖರಿಸಿಟ್ಟುಕೊಂಡಿರುತ್ತದೆ. ಕೆಲವೊಮ್ಮೆ ಸೂಕ್ಷ್ಮಾಣು ಜೀವಿಗಳಿಗೂ ಇದು ಆಶ್ರಯ ತಾಣ. ಮೊಬೈಲ್ ಪರದೆಯನ್ನು ಪದೇಪದೇ ಸವರಿ ಕಣ್ಣು ಮೂಗುಗಳಂತಹ ಸೂಕ್ಷ್ಮ ಅಂಗಗಳನ್ನು ಮುಟ್ಟಿಕೊಳ್ಳುವುದರಿಂದ ಅನೇಕ ರೋಗ ರುಜಿನಗಳು ನಮ್ಮನ್ನು ಮೆಟ್ಟಿಕೊಳ್ಳುವ ಸಾಧ್ಯತೆ ಇರುತ್ತದೆ. ಹಾಗಾಗಿ ನಿಯಮಿತವಾಗಿ ಇದನ್ನು ಸ್ವಚ್ಛಗೊಳಿಸುವುದು ಅಗತ್ಯ.

Advertisement

ಮೊಬೈಲ್ ಪರದೆಯನ್ನು ಸ್ವಚ್ಛಗೊಳಿಸುವಾಗ ಗಮನದಲ್ಲಿಟ್ಟುಕೊಳ್ಳಬೇಕಾದ ಅಂಶಗಳು ಹೀಗಿವೆ:

ಮೃದು ಬಟ್ಟೆಯ ಬಳಕೆ: ಮೊಬೈಲ್ ಸ್ಕ್ರೀನ್ ಒರೆಸಲು ಮೈಕ್ರೋಪೈಬರ್ ನಂತಹ ಮೆತ್ತಗಿನ ಬಟ್ಟೆ ಸೂಕ್ತ. ಕಾರಣ, ಇದು ಗಾಜಿನ ಮೇಲೆ ಗೀರಾಗುವುದನ್ನು ತಡೆಯುವುದಷ್ಟೇ ಅಲ್ಲ, ಧೂಳು, ಬೆರಳಚ್ಚುಗಳನ್ನು ಉತ್ತಮವಾಗಿ ಅಳಿಸುತ್ತದೆ.

Advertisement

ಡಿಸ್ಟಿಲ್ಡ್ ನೀರು: ಯಾವುದೇ ಖನಿಜ ಅಥವ ಕಲ್ಮಶ ಹೊಂದಿರದ ಡಿಸ್ಟಿಲ್ಡ್ ವಾಟರ್ ಪರದೆಯ ಮೇಲೆ ಸಂಗ್ರಹವಾಗಬಹುದಾದಂತಹ ಖನಿಜಗಳನ್ನು ಪರಿಣಾಮಕಾರಿಯಾಗಿ ತಡೆಯುತ್ತದೆ.

ರಾಸಾಯನಿಕಗಳ ಬಳಕೆ ಬೇಡ: ಮನೆಯ ಇತರೆ ಗಾಜುಗಳನ್ನು ಒರೆಸಲು ಬಳಸುವ ವಿಂಡೋ ಕ್ಲೀನರ್, ಬ್ಲೀಚ್ ಗಳಂತಹ ಕಠಿಣ ರಾಸಾಯನಿಕಗಳ ಬಳಕೆ ಮೊಬೈಲ್ ಗಾಜಿಗೆ ಹಾನಿಯುಂಟುಮಾಡಬಹುದು.

ಸ್ವಚ್ಛಗೊಳಿಸುವ ಮುನ್ನ ನಿಮ್ಮ ಫೋನನ್ನು ಅನ್ ಪ್ಲಗ್ ಮಾಡುವುದರಿಂದ ಕರೆಂಟ್ ಶಾಕ್ ಸಮಸ್ಯೆ ಎದುರಾಗುವುದಿಲ್ಲ. ಧೂಳನ್ನು ಒರೆಸಲು ಬಳಸುವ ಬಟ್ಟೆ ಸ್ವಚ್ಛ ಮತ್ತು ಒಣಗಿರಲಿ. ಮೊಬೈಲ್ ಪರದೆ ಒರೆಸುವಾಗ ಬಲ ಪ್ರಯೋಗ ಬೇಡ. ಗಾಜನ್ನು ಗೀರಬಹುದಾದ ಬಟ್ಟೆಗಳನ್ನು ಬಳಸದಿರಿ. ದ್ರವಗಳನ್ನು ಬಳಸುವಾಗ ಅದು ಸಾಧನದ ಒಳಗೆ ಸೇರಿ ತೊಂದರೆಯಾಗದಂತೆ ಎಚ್ಚರ ವಹಿಸಿ. ಸ್ವಚ್ಛಗೊಳಿಸಿದ ನಂತರ ಫೋನ್ ಕವರ್ ಹಾಕುವ ಮೊದಲು ಅದು ಒಣಗಿದೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ.

ಹೀಗೆ ನಿಯಮಿತವಾಗಿ ಮೊಬೈಲ್ ಪರದೆ ಸ್ವಚ್ಛಗೊಳಿಸಿಕೊಳ್ಲುವುದನ್ನು ರೂಢಿಸಿಕೊಳ್ಳಿ.

Advertisement
Tags :
cleanlinessLatestNewsmobilemobile screen cleaningNewsKannada
Advertisement
Next Article