ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕಂಡಕ್ಟರ್‌ಗಳು 10 ರೂಪಾಯಿ ನಾಣ್ಯ ತೆಗೆದುಕೊಳ್ಳಬೇಕು: ಸಾರಿಗೆ ಇಲಾಖೆ

ಇಷ್ಟು ದಿನ 10 ರೂ. ನಾಣ್ಯ ಕೊಟ್ಟರೆ ಕಂಡಕ್ಟರ್‌ಗಳು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹೇಗಾಗುವುದಿಲ್ಲ ಯಾಕೆಂದರೆ  ರಾಜ್ಯದ ಬಸ್‌ ಕಂಡಕ್ಟರ್‌ಗಳಿಗೆ ಸಾರಿಗೆ ಇಲಾಖೆ ಖಡಕ್‌ ಸೂಚನೆಯೊಂದನ್ನು ಕೊಟ್ಟಿದೆ.
02:23 PM Jan 07, 2024 IST | Ashika S

ಬೆಂಗಳೂರು: ಇಷ್ಟು ದಿನ 10 ರೂ. ನಾಣ್ಯ ಕೊಟ್ಟರೆ ಕಂಡಕ್ಟರ್‌ಗಳು ತೆಗೆದುಕೊಳ್ಳುತ್ತಿರಲಿಲ್ಲ. ಆದರೆ ಇನ್ನು ಮುಂದೆ ಹೇಗಾಗುವುದಿಲ್ಲ ಯಾಕೆಂದರೆ  ರಾಜ್ಯದ ಬಸ್‌ ಕಂಡಕ್ಟರ್‌ಗಳಿಗೆ ಸಾರಿಗೆ ಇಲಾಖೆ ಖಡಕ್‌ ಸೂಚನೆಯೊಂದನ್ನು ಕೊಟ್ಟಿದೆ.

Advertisement

ಹೀಗಾಗಿ 10 ರೂಪಾಯಿ ನಾಣ್ಯದ ಬಗ್ಗೆ ನಿರ್ಲಕ್ಷ್ಯ ವಹಿಸಿದ ಹಿನ್ನೆಲೆಯಲ್ಲಿ ತಿಳುವಳಿಕೆ ಪತ್ರದ ಮೂಲಕ ಸಾರಿಗೆ ಇಲಾಖೆಯ ಕಾರ್ಯದರ್ಶಿಯು ಎಲ್ಲಾ ನಿಗಮಗಳಿಗೂ ವಾರ್ನಿಂಗ್ ಮಾಡಿದ್ದಾರೆ.

ಬಸ್ ಪ್ರಯಾಣದ ವೇಳೆ ಪ್ರಯಾಣಿಕರು 10 ರೂ. ನಾಣ್ಯ ನೀಡಿದರೆ ಪಡೆಯಬೇಕು. ಒಂದು ವೇಳೆ 10 ರೂ. ನಾಣ್ಯ ಪಡೆಯದೇ ಇದ್ದರೆ, ಈ ಬಗ್ಗೆ ಪ್ರಯಾಣಿಕರಿಂದ ದೂರು ಬಂದರೆ ಆ ಬಸ್ಸಿನ ನಿರ್ವಾಹಕರ ವಿರುದ್ಧ ಕೂಡಲೇ ಕ್ರಮ ಕೈಗೊಳ್ಳುವುದಾಗಿ ಇಲಾಖೆ ಎಚ್ಚರಿಕೆ ನೀಡಿದೆ.

Advertisement

ಕೆಎಸ್ ಆರ್ ಟಿಸಿ, ಬಿಎಂಟಿಸಿ , ವಾಯುವ್ಯ ಸಾರಿಗೆ ಹಾಗೂ ಈಶಾನ್ಯ ಸಾರಿಗೆ ನಿಗಮಕ್ಕೆ ಸಾರಿಗೆ ಇಲಾಖೆಯಿಂದ ಪತ್ರ ಬರೆಯಲಾಗಿದ್ದು, ಅದರಲ್ಲಿ ರಾಜ್ಯದ ಎಲ್ಲಾ ಸಾರಿಗೆ ಬಸ್ ಗಳಲ್ಲೂ 10 ರೂ. ನಾಣ್ಯ ಪಡೆಯುವಂತೆ ಆದೇಶಿಸಲಾಗಿದೆ.

 

Advertisement
Tags :
10 ರೂ.LatetsNewsNewsKannadaಕಂಡಕ್ಟರ್‌ನಾಣ್ಯಬಸ್ರಾಜ್ಯ
Advertisement
Next Article