ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನೆಸ್ಲೆ ವಿರುದ್ಧ ತನಿಖೆಗೆ ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲ ಸೂಚನೆ

ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ), ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಇಂದು ಸೂಚಿಸಿದೆ.
08:28 PM Apr 19, 2024 IST | Ashitha S

ನವದೆಹಲಿ: ನೆಸ್ಲೆ ಇಂಡಿಯಾ ಕಂಪನಿ ವಿರುದ್ಧ ಕೇಳಿಬಂದಿರುವ ಆರೋಪದ ಬಗ್ಗೆ ಸಮಗ್ರ ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಭಾರತದ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರಕ್ಕೆ (ಎಫ್‌ಎಸ್‌ಎಸ್‌ಎಐ), ಕೇಂದ್ರ ಗ್ರಾಹಕ ವ್ಯವಹಾರಗಳ ಸಚಿವಾಲಯವು ಇಂದು ಸೂಚಿಸಿದೆ.

Advertisement

ಭಾರತದಲ್ಲಿ ನೆಸ್ಲೆ ಮಾರಾಟ ಮಾಡುತ್ತಿರುವ ಶಿಶು ಆಹಾರ ಉತ್ಪನ್ನಗಳಲ್ಲಿ ಅಧಿಕ ಪ್ರಮಾಣದಲ್ಲಿ ಸಕ್ಕರೆ ಅಂಶ ಸೇರಿಸುತ್ತಿದೆ ಎಂಬ ಆರೋಪ ಕೇಳಿಬಂದಿದೆ. ಈ ಕುರಿತು ಸ್ವಿಟ್ಜರ್‌ಲೆಂಡ್‌ನ ಸ್ವಯಂಸೇವಾ ಸಂಸ್ಥೆ ಪಬ್ಲಿಕ್‌ ಐ ಹಾಗೂ ಇಂಟರ್‌ನ್ಯಾಷನಲ್ ಬೇಬಿ ಫುಡ್ ಆಯಕ್ಷನ್ ನೆಟ್‌ವರ್ಕ್‌ (ಐಬಿಎಫ್‌ಎಎನ್‌) ಅಧ್ಯಯನ ನಡೆಸಿ ವರದಿ ಪ್ರಕಟಿಸಿವೆ.

'ಈ ವರದಿಗೆ ಸಂಬಂಧಿಸಿದಂತೆ ನೆಸ್ಲೆ ಉತ್ಪನ್ನಗಳ ಬಗ್ಗೆ ತನಿಖೆ ನಡೆಸುವಂತೆ ಎಫ್‌ಎಸ್‌ಎಸ್‌ಎಐಗೆ ಪತ್ರ ಬರೆಯಲಾಗಿದೆ' ಎಂದು ಸಚಿವಾಲಯದ ಅಧೀನದಲ್ಲಿ ಬರುವ ಕೇಂದ್ರ ಗ್ರಾಹಕ ರಕ್ಷಣಾ ಪ್ರಾಧಿಕಾರದ (ಸಿಸಿಪಿಎ) ಮುಖ್ಯಸ್ಥೆ ನಿಧಿ ಖರೆ ಅವರು ಸುದ್ದಿಸಂಸ್ಥೆಗೆ ತಿಳಿಸಿದ್ದಾರೆ.‌

Advertisement

'ನೆಸ್ಲೆ ಕಂಪನಿಯು ಉತ್ಪನ್ನಗಳ ತಯಾರಿಕೆ ಬಗ್ಗೆ ಅನುಸರಿಸುತ್ತಿರುವ ಮಾದರಿ ಕುರಿತು ತನಿಖೆ ನಡೆಸುವಂತೆ ಸೂಚಿಸಲಾಗಿದೆ. ಎಫ್‌ಎಸ್‌ಎಸ್‌ಎಐ ತನಿಖೆ ನಡೆಸಿ ವಾಸ್ತವಾಂಶವನ್ನು ಬೆಳಕಿಗೆ ತರಲಿದೆ' ಎಂದು ಹೇಳಿದ್ದಾರೆ.

Advertisement
Tags :
GOVERNMENTindiaLatestNewsNewsKarnatakaನವದೆಹಲಿನೆಸ್ಲೆ
Advertisement
Next Article