ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಎಸ್ ಡಿಎಂ ಕಾಲೇಜಿನಲ್ಲಿ ಆಪ್ತ ಸಮಾಲೋಚನಾ ಕಾರ್ಯಗಾರ   

ಎಸ್ ಡಿ ಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗ ಮತ್ತು ಶಿವಮೊಗ್ಗ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿತವಾದ ಎರಡು ದಿನಗಳ ಕಾರ್ಯಾಗಾರದಲ್ಲಿ ಆಪ್ತಸಮಾಲೋಚನೆಯ ಕಾರ್ಯತಂತ್ರಗಳ ಬಗ್ಗೆ ತರಬೇತಿ ನೀಡಲಾಯಿತು.
05:06 PM Mar 20, 2024 IST | Ashika S

ಉಜಿರೆ: ಎಸ್ ಡಿಎಂ ಸ್ನಾತಕೋತ್ತರ ಕೇಂದ್ರದ ಮನಃಶಾಸ್ತ್ರ ವಿಭಾಗ ಮತ್ತು ಶಿವಮೊಗ್ಗ ಕಟೀಲ್ ಅಶೋಕ್ ಪೈ ಮೆಮೋರಿಯಲ್ ಸಂಸ್ಥೆಯ ಸಹಭಾಗಿತ್ವದಲ್ಲಿ ಆಯೋಜಿತವಾದ ಎರಡು ದಿನಗಳ ಕಾರ್ಯಾಗಾರದಲ್ಲಿ ಆಪ್ತಸಮಾಲೋಚನೆಯ ಕಾರ್ಯತಂತ್ರಗಳ ಬಗ್ಗೆ ತರಬೇತಿ ನೀಡಲಾಯಿತು.

Advertisement

ವಿವಿಧ ಮಾನಸಿಕ ಬಿಕ್ಕಟ್ಟುಗಳನ್ನು ಎದುರಿಸುತ್ತಿರುವವರೊಂದಿಗೆ ಆಪ್ತ ಸಮಾಲೋಚನೆ ನಡೆಸುವ ಬಗೆಗಳನ್ನು ಕಾರ್ಯಗಾರದ ಸಂಪನ್ಮೂಲ ವ್ಯಕ್ತಿಗಳಾಗಿದ್ದ ಕಟೀಲ್ ಅಶೋಕ್ ಪೈ ಸಂಸ್ಥೆಯ ಸಹಾಯಕ ಪ್ರಾದ್ಯಾಪಕರಾದ ಹನಿ ಕುರುವಾರಿ ಮತ್ತು ಅನನ್ಯ ಎಸ್ ಎಮ್ ವಿವರಿಸಿದರು.

ಆಪ್ತ ಸಮಾಲೋಚನೆ ನಡೆಸುವಾಗ ಮಾನಸಿಕ  ಬಿಕ್ಕಟ್ಟುಗೊಳಗಾದವರಿಂದ ಸಮಗ್ರ ಮಾಹಿತಿ ಪಡೆಯಬೇಕು. ಇದಕ್ಕಾಗಿ ಸೂಕ್ಷ್ಮವಾಗಿ ಗ್ರಹಿಸುವ ಶಕ್ತಿ ಇರಬೇಕು. ಮುಕ್ತವಾಗಿ ಅನಿಸಿಕೆ ಹಂಚಿಕೊಳ್ಳಲು ಅನುವಾಗುವಂಥ ವಿಶ್ವಾಸಾರ್ಹತೆ ಮೂಡಿಸಬೇಕು.  ಹಾಗಾದಾಗ ಮಾತ್ರ ಆಪ್ತ ಸಮಾಲೋಚನೆ ಫಲಪ್ರದವಾಗುತ್ತದೆ ಎಂದು ಸಹಾಯಕ ಪ್ರಾಧ್ಯಾಪಕಿ ಅನನ್ಯ ಎಸ್. ಎಮ್ ಅಭಿಪ್ರಾಯಪಟ್ಟರು.

Advertisement

ಸಹಾಯಕ ಪ್ರಾಧ್ಯಾಪಕಿ ಹನಿ ಕುರುವಾರಿ ಆಪ್ತ ಸಮಾಲೋಚನಾ ವಿಧಾನಗಳನ್ನು ತಿಳಿಸಿಕೊಟ್ಟರು. ಕಿರುಚಿತ್ರದ ಮೂಲಕ ಸಹಾನಭೂತಿ ಏಷ್ಟು ಮುಖ್ಯ ಎನ್ನುವುದನ್ನು ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿಕೊಟ್ಟರು.

ಈ ಕಾರ್ಯಕ್ರಮದಿಂದ ಪ್ರಾಯೋಗಿಕ ಕಲಿಕೆ ಸಾಧ್ಯವಾಗಿದೆ ಎಂದು ವಿದ್ಯಾರ್ಥಿಗಳು ಅನಿಸಿಕೆ ವ್ಯಕ್ತಪಡಿಸಿದರು.

ಎಸ್ ಡಿಎಂ ಕಾಲೇಜಿನ ಮನಃಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ ವಂದನಾ ಜೈನ್ ಉಪಸ್ಥಿತರಿದ್ದರು, ವಿದ್ಯಾರ್ಥಿನಿ ತೇಜಸ್ವಿನಿ ಸ್ವಾಗತಿಸಿ, ಆರ್ಯ ವಂದಿಸಿ, ಸ್ಟಿನ್ಸೀ ನಿರೂಪಿಸಿದರು.

Advertisement
Tags :
LatetsNewsNewsKarnatakaSDM COLLEGEUJIRE
Advertisement
Next Article