ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಪಿಜಿಯಲ್ಲಿ ಸ್ಪೈ ಕ್ಯಾಮರಾ ಇಟ್ಟ ಖತರ್ನಾಕ್‌ ಜೋಡಿ

ಇಲ್ಲಿನ ಸೆಕ್ಟರ್ 22ರಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದ ಮಹಿಳಾ ವಾಶ್ ರೂಂನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿದ್ದ ಯುವತಿ ಮತ್ತು ಆಕೆಯ ಗೆಳೆಯನನ್ನು ಬುಧವಾರ ಬಂಧಿಸಲಾಗಿದೆ.
05:01 PM Nov 29, 2023 IST | Ashika S

ಚಂಡೀಗಢ: ಇಲ್ಲಿನ ಸೆಕ್ಟರ್ 22ರಲ್ಲಿರುವ ಪೇಯಿಂಗ್ ಗೆಸ್ಟ್ (ಪಿಜಿ) ವಸತಿಗೃಹದ ಮಹಿಳಾ ವಾಶ್ ರೂಂನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿದ್ದ ಯುವತಿ ಮತ್ತು ಆಕೆಯ ಗೆಳೆಯನನ್ನು ಬುಧವಾರ ಬಂಧಿಸಲಾಗಿದೆ.

Advertisement

ಆರೋಪಿ ಯುವತಿ ಇತರ ನಾಲ್ಕು ಯುವತಿಯರೊಂದಿಗೆ ಪಿಜಿಯಲ್ಲಿ ವಾಸಿಸುತ್ತಿದ್ದಳು. ತನ್ನ ಗೆಳೆಯನ ಕೋರಿಕೆಯ ಮೇರೆಗೆ, ಅವಳು ವಾಶ್ ರೂಂನಲ್ಲಿ ಸ್ಪೈ ಕ್ಯಾಮೆರಾ ಅಳವಡಿಸಿ ಯುವತಿಯರ ಖಾಸಗಿ ವೀಡಿಯೊಗಳನ್ನು ರೆಕಾರ್ಡ್ ಮಾಡಿದ್ದಾಳೆ. ಈ ಬಗ್ಗೆ ಅದೇ ಪಿಜಿಯಲ್ಲಿ ವಾಸವಿದ್ದ ಯುವತಿಯೊಬ್ಬರಿಗೆ ಅನುಮಾನ ಬಂದಿದ್ದು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.

ನಂತರ ಆರೋಪಿಗಳಿಬ್ಬರನ್ನೂ ಬಂಧಿಸಿ ನಂತರ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ. ಅಲ್ಲದೆ ಆರೋಪಿಗಳ ಫೋನ್‌ ಗಳನ್ನು ವಶಪಡಿಸಿಕೊಂಡು ಕೇಂದ್ರೀಯ ವಿಧಿ ವಿಜ್ಞಾನ ಪ್ರಯೋಗಾಲಯಕ್ಕೆ (ಸಿಎಫ್‌ಎಸ್‌ಎಲ್) ಕಳುಹಿಸಲಾಗಿದೆ.

Advertisement

ಪೊಲೀಸ್ ಉಪಾಧೀಕ್ಷಕ ಗುರುಮುಖ್ ಸಿಂಗ್ ಅವರು ಮಾಧ್ಯಮಗಳಿಗೆ ಈ ಬಗ್ಗೆ ಹೇಳಿಕೆ ನೀಡಿದ್ದು, "ಸುಮಾರು ಐದು ದಿನಗಳ ಹಿಂದೆ, ಯುವಕ, ಯುವತಿ ಚಂಡೀಗಢದಿಂದ ಸ್ಪೈ ಕ್ಯಾಮೆರಾವನ್ನು ಖರೀದಿಸಿ ವಾಶ್ ರೂಮ್‌ನಲ್ಲಿ ಅಳವಡಿಸಿದ್ದಾರೆ. ಅವರು ಸೆರೆಹಿಡಿದ ಫೋಟೋಗಳು ಮತ್ತು ವೀಡಿಯೊಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಅಪ್‌ಲೋಡ್ ಮಾಡಿದ್ದಾರೆಯೇ ಹಂಚಿಕೊಂಡಿದ್ದಾರೆಯೇ ಎಂಬ ಬಗ್ಗೆ ನಾವು ತನಿಖೆ ನಡೆಸುತ್ತಿದ್ದೇವೆ ಎಂದು ಹೇಳಿದ್ದಾರೆ.

Advertisement
Tags :
LatetsNewsNewsKannadaಪೇಯಿಂಗ್ ಗೆಸ್ಟ್ವಸತಿಗೃಹವಾಶ್ ರೂಂಸ್ಪೈ ಕ್ಯಾಮೆರಾ
Advertisement
Next Article