ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಲೇಟ್​&ನೈಟ್​ ಪಾರ್ಟಿ : ಪ್ರಕರಣದ ತನಿಖೆಗೆ ಮುಂದಾದ ಕ್ರಿಕೆಟ್​ ಆಸ್ಟ್ರೇಲಿಯಾ

ಕಳೆದ ವಾರ ಅಡಿಲೇಡ್​ನಲ್ಲಿ ನಡೆದ ಲೇಟ್​&ನೈಟ್​ ಪಾರ್ಟಿಯೊಂದರಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು.
07:33 AM Jan 23, 2024 IST | Ramya Bolantoor

ಮೆಲ್ಬೋರ್ನ್​: ಕಳೆದ ವಾರ ಅಡಿಲೇಡ್​ನಲ್ಲಿ ನಡೆದ ಲೇಟ್​&ನೈಟ್​ ಪಾರ್ಟಿಯೊಂದರಲ್ಲಿ ಗ್ಲೆನ್​ ಮ್ಯಾಕ್ಸ್​ವೆಲ್​ ಪ್ರಜ್ಞೆ ತಪ್ಪಿ ಬಿದ್ದು ಆಸ್ಪತ್ರೆಗೆ ದಾಖಲಾಗಿದ್ದರು. ಇದೀಗ ಈ ಪ್ರಕರಣದ ಕುರಿತು ತನಿಖೆ ನಡೆಸಲು ಕ್ರಿಕೆಟ್​ ಆಸ್ಟ್ರೆಲಿಯಾ (ಸಿಎ) ಮುಂದಾಗಿದೆ.

Advertisement

ಆಸೀಸ್​ ಮಾಜಿ ವೇಗಿ ಬ್ರೆಟ್​ ಲೀ ಅವರನ್ನೊಳಗೊಂಡ 'ಸಿಕ್ಸ್​ ಆಂಡ್​ ಔಟ್​' ಬ್ಯಾಂಡ್​ನ ಸಂಗೀತಗೋಷ್ಠಿಗೂ ಹಾಜರಾಗಿದ್ದ ಮ್ಯಾಕ್ಸ್​ವೆಲ್​ ಅತಿಯಾದ ಮದ್ಯಪಾನ ಸೇವನೆಯಿಂದ ಅಸ್ವಸ್ಥರಾಗಿದ್ದರು. ಬಳಿಕ ಅವರನ್ನು ಆಂಬುಲೆನ್ಸ್​ನಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ಮರುದಿನವೇ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರು ಎನ್ನಲಾಗಿದೆ.
ಗ್ಲೆನ್​ ಮ್ಯಾಕ್ಸ್​​ವೆಲ್​ ಮುಂಬರುವ ಐಪಿಎಲ್​ನಲ್ಲಿ ಆರ್​ಸಿಬಿ ತಂಡದ ಪರ ಆಡಬೇಕಿದೆ. ಆದರೆ ಪ್ರಕರಣದಲ್ಲಿ ಒಂದು ವೇಳೆ ಮ್ಯಾಕ್ಸ್​​ವೆಲ್​ಗೆ ಸಿಎ ನಿಷೇಧ ಶಿಕ್ಷೆ ವಿಧಿಸಿದರೆ, ಆರ್​ಸಿಬಿಯಲ್ಲಿ ಆಡುವುದು ಸಂಶಯವಾಗಿದೆ.

Advertisement
Advertisement
Tags :
LatestNewsNewsKannadaಮೆಲ್ಬೋರ್ನ್
Advertisement
Next Article