For the best experience, open
https://m.newskannada.com
on your mobile browser.
Advertisement

ಸಹನಟರನ್ನು ನಿಂದಿಸೋದು ಒಳಿತಲ್ಲ; ದರ್ಶನ್‌ ಹಳೇ ಪೋಸ್ಟ್ ವೈರಲ್‌

ಸಾಮಾಜಿಕ ಜಾಲತಾಣಗಳಲ್ಲಿ ಸಹನಟರನ್ನು ನಿಂದನೆ ಮಾಡೋದು ಒಳಿತಲ್ಲ, ನನ್ನ ನಿಜವಾದ ಅಭಿಮಾನಿಗಳಾಗಿದ್ದರೆ ಇಂತಹುದನ್ನು ನಿಲ್ಲಿಸಬೇಕೆಂದು ನಟ ದರ್ಶನ್‌ ಸುಮಾರು 9 ವರ್ಷಗಳ ಹಿಂದೆ ಮನವಿ ಮಾಡಿದ್ದ ಪೋಸ್ಟ್‌ ಒಂದು ಇದೀಗ ವೈರಲ್‌ ಆಗುತ್ತಿದೆ.
10:41 PM Apr 05, 2024 IST | Ashitha S
ಸಹನಟರನ್ನು ನಿಂದಿಸೋದು ಒಳಿತಲ್ಲ  ದರ್ಶನ್‌ ಹಳೇ ಪೋಸ್ಟ್ ವೈರಲ್‌

ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಸಹನಟರನ್ನು ನಿಂದನೆ ಮಾಡೋದು ಒಳಿತಲ್ಲ, ನನ್ನ ನಿಜವಾದ ಅಭಿಮಾನಿಗಳಾಗಿದ್ದರೆ ಇಂತಹುದನ್ನು ನಿಲ್ಲಿಸಬೇಕೆಂದು ನಟ ದರ್ಶನ್‌ ಸುಮಾರು 9 ವರ್ಷಗಳ ಹಿಂದೆ ಮನವಿ ಮಾಡಿದ್ದ ಪೋಸ್ಟ್‌ ಒಂದು ಇದೀಗ ವೈರಲ್‌ ಆಗುತ್ತಿದೆ.

Advertisement

ಹೌದು, ಇತ್ತೀಚೆಗೆ ನಟ ದರ್ಶನ್‌ ಅವರ ಹೆಸರಿನಲ್ಲಿ ಫೇಸ್‌ ಬುಕ್‌ ನಕಲಿ ಖಾತೆಯೊಂದನ್ನು ಸೃಷ್ಟಿಸಿ ಕಿಡಿಗೇಡಿಗಳು ಅಶ್ವಿನಿ ಪುನೀತ್‌ ರಾಜ್‌ಕುಮಾರ್‌ ಅವರನ್ನು ಕೆಟ್ಟದಾಗಿ ನಿಂದಿಸಿದ್ದರು.

ಆರ್‌ಸಿಬಿ ಸೋಲಿಗೆ ಅವರನ್ನು ಟಾರ್ಗೆಟ್‌ ಮಾಡಲಾಗಿದ್ದು, ಅಶ್ವಿನಿ ಅವರನ್ನು ನಿಂದಿಸಿ ಅವಮಾನ ಮಾಡಿದ್ದರು. ಈ ಕೃತ್ಯವನ್ನು ದರ್ಶನ್‌ ಅಭಿಮಾನಿಗಳೇ ಮಾಡಿದ್ದಾರೆಂದು ಆರೋಪಿಸಲಾಗಿದೆ.

Advertisement

ಇನ್ನು ತಮ್ಮ ಅತಿರೇಕದ ವರ್ತನೆಗೆ ದರ್ಶನ್‌ ಈ ಹಿಂದೆಯೇ ವಾರ್ನ್‌ ಮಾಡಿದ್ದರು. ದರ್ಶನ್‌ ಹಳೇ ಪೋಸ್ಟ್‌ನಲ್ಲಿ, ನನ್ನ ಪ್ರೀತಿಯ ಅಭಿಮಾನಿಗಳಲ್ಲಿ ವಿನಂತಿ. ಫೇಸ್‌ಬುಕ್‌, ಟ್ವಿಟ್ಟರ್‌ಗಳಲ್ಲಿ ಬೇರೆ ಸಹನಟರನ್ನು ನಿಂದಿಸಿ ಮಾತನಾಡುವುದು, ಇವು ಯಾವುದು ಒಳಿತಲ್ಲ. ನನ್ನ ನಿಜವಾದ ಅಭಿಮಾನಿಗಳಾಗಿದ್ದಲ್ಲಿ ಅದನ್ನು ನಿಲ್ಲಿಸಬೇಕು. ಯಾರಾದರೂ ಅಂತಹ ಕೆಲಸಗಳಲ್ಲಿ ಭಾಗವಹಿಸಿದರೆ ನನಗೆ ನೋವಾಗುವುದಂತು ನಿಜ. ಬೇರೆಯವರು ಮಾಡುತ್ತಾರೆ ಅಂತ ನಾವು ಅವರ ವಿರುದ್ಧ ಅದೇ ರೀತಿ ವರ್ತಿಸಿದರೆ ನಮಗೂ ಬೇರೆಯವರಿಗೂ ವ್ಯತ್ಯಾಸ ಇರುವುದಿಲ್ಲ. ಎಲ್ಲರನ್ನೂ ಪ್ರೀತಿಸಿ, ಕನ್ನಡ ಚಿತ್ರಗಳನ್ನು ಪ್ರೋತ್ಸಾಹಿಸಿ ಎಂದು ಬರೆದಿದ್ದರು. ಈ ಪೋಸ್ಟ್‌ ಇದೀಗ ಮತ್ತೆ ವೈರಲ್‌ ಆಗ್ತಿದೆ.

Advertisement
Tags :
Advertisement