ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ದಯಾ ಕ್ರಿಯೇಷನ್ ಗೆ ತೃತೀಯ ವರ್ಷದ ಸಂಭ್ರಮ: ಧರ್ಮದರ್ಶಿ ಅವರಿಗೆ ʼಕಲಾಬೊಲ್ಪುʼ ಗೌರವ

ದಯಾ ಕ್ರಿಯೇಷನ್ ಬಾಯರು ಇದರ  ಮೂರನೇ  ವರ್ಷದ ವಾರ್ಷಿಕ ಸಂಭ್ರಮೋತ್ಸವವು ಬ್ರಹ್ಮವರದ ಉಪ್ಪಿನಕೋಟೆ ಎಂಬಲ್ಲಿನ ರಿಲಾಕ್ಸ್‌ ಲೀಶೊರ್‌ ಪಾರ್ಕ್ ನಲ್ಲಿ ದಯಾ ಕ್ರಯೇಷನ್ ಅಧ್ಯಕ್ಷರಾದ ಶ್ರೀ ದಯಾನಂದ ಅಮೀನ್ ಬಾಯರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.
11:31 AM Jan 09, 2024 IST | Ramya Bolantoor

ವಿಟ್ಲ: ದಯಾ ಕ್ರಿಯೇಷನ್ ಬಾಯರು ಇದರ  ಮೂರನೇ  ವರ್ಷದ ವಾರ್ಷಿಕ ಸಂಭ್ರಮೋತ್ಸವವು ಬ್ರಹ್ಮವರದ ಉಪ್ಪಿನಕೋಟೆ ಎಂಬಲ್ಲಿನ ರಿಲಾಕ್ಸ್‌ ಲೀಶೊರ್‌ ಪಾರ್ಕ್ ನಲ್ಲಿ ದಯಾ ಕ್ರಿಯೇಷನ್ ಅಧ್ಯಕ್ಷರಾದ ಶ್ರೀ ದಯಾನಂದ ಅಮೀನ್ ಬಾಯರು ಇವರ ಅಧ್ಯಕ್ಷತೆಯಲ್ಲಿ ನಡೆಯಿತು.

Advertisement

ಕಲಾಮಾತೆಯ ಸೇವೆ ಎಂದರೆ ದೇವರ ಸೇವೆ ಕಲಾಮಾತೆಗೆ ಜಾತಿ ಬೇಧ ವರ್ಣ ಬೇಧ ಇಲ್ಲ ಎಲ್ಲರೂ ಸಮಾನರು ಎಂದುವುದು ಈ ಕಾರ್ಯಕ್ರಮ ಸಾಕ್ಷಿಯಾಗಿದೆ ಈ ಕಾರ್ಯಕ್ರಮಕ್ಕೆ ಬಂದು ಸ್ವರ್ಗಲೋಕದ ಅನುಭವ ಕಂಡತ್ತಾಯಿತು ಎಂದು ಕುಕ್ಕಾಜೆ ಶ್ರೀ ಕಾಳಿಕಾಂಬ ಆಂಜನೇಯ ದೇವಸ್ಥಾನದ ಧರ್ಮದರ್ಶಿ ಶ್ರೀ ಶ್ರೀಕೃಷ್ಣ ಗುರೂಜಿಯವರು ಆಶೀರ್ವದಿಸಿದರು. ಈ ಸಂಧರ್ಭದಲ್ಲಿ ಪೂಜ್ಯ ಧರ್ಮದರ್ಶಿಯವರನ್ನು ದಯಾ ಕ್ರಿಯೇಷನ್ ವತಿಯಿಂದ ಭಕ್ತಿ ಪೂರ್ವಕವಾಗಿ ಸನ್ಮಾನ ಮಾಡಿ ಕಲಾಬೊಲ್ಪು ಎಂಬ ಬಿರುದು ನೀಡಿ ಗೌರವಿಸಲಾಯಿತು.

Advertisement

ಈ ಸಂಧರ್ಭದಲ್ಲಿ ಹಿರಿಯ ಸಾಹಿತಿ ಶ್ರೀ ತೋಡಿಕ್ಕಾನ ಅಬ್ದುಲ , ಶ್ರೀಧರ್ ಪಿ.ಕೆ ಕುಕ್ಕಾಜೆ, ರಿಲಾಕ್ಸ್‌ ಲೀಶೊರ್‌ ಪಾರ್ಕ್ ನ ವ್ಯವಸ್ಥಾಪಕರಾದ.ಜೋಸ್ನ ಡಿಸಿಲ್ವ.
ಮತ್ತಿತರರು ಉಪಸ್ಥಿತರಿದ್ದರು. ಮೂರನೇ  ವರ್ಷದ ಕಾರ್ಯಕ್ರಮದ ಅಂಗವಾಗಿ ವಿವಿಧ ಆಟೋಟ ಸ್ಪರ್ಧೆ,ಹಾಗೂ ಮನೋರಂಜನ ಕಾರ್ಯಕ್ರಮ ನಡೆಸಲಾಯಿತು. ಸ್ಪರ್ಧೆಯಲ್ಲಿ ವಿಜೇತರಿಗೆ ಪೂಜ್ಯ ಗುರೂಜಿಯವರು ಬಹುಮಾನ ವಿತರಿಸಿದರು.

ದಯಾ ಕ್ರಿಯೇಷನ್ ನ ಕಾರ್ಯದರ್ಶಿ ರವಿ ಎಸ್ ಎಂ ಸ್ವಾಗತಿಸಿ ಕು| ವೈಷ್ಣವಿ ಪುತ್ತೂರು ವಂದಿಸಿದರು. ದಯಾ ಕ್ರಯೇಷನ್ ನ ಉಪಾಧ್ಯಕ್ಷರು ಕು| ಅಶ್ವಿನಿ ಪೆರುವಾಯಿ ಕಾರ್ಯಕ್ರಮ ನಿರೂಪಣೆ ಮಾಡಿದರು

Advertisement
Tags :
LatestNewsNewsKannadaಮಂಗಳೂರುವಿಟ್ಲ
Advertisement
Next Article