ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇನ್ಮುಂದೆ 'ಮಕ್ಕಳು' ನಟಿಸಲು ಡಿಸಿ ಅನುಮತಿ ಕಡ್ಡಾಯ: ರಾಜ್ಯ ಸರ್ಕಾರ ಆದೇಶ

ರಾಜ್ಯದಲ್ಲಿ ಚಲನಚಿತ್ರಗಳು, ಸೀರಿಯಲ್ ಗಳಲ್ಲಿ ಮಕ್ಕಳು ನಟಿಸುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಇದರೊಟ್ಟಿಗೆ ಅವರ ವಿದ್ಯಾಭ್ಯಾಸವು ಕುಂಠಿತಗೊಳ್ಳುತ್ತಿದೆ. ಈ ಕಾರಣದಿಂದಾಗಿ ಇನ್ಮುಂದೆ ಮಕ್ಕಳು ಸೀರಿಯಲ್, ಸಿನಿಮಾಗಳಲ್ಲಿ ನಟಿಸೋದಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.
04:33 PM Feb 14, 2024 IST | Ashitha S

ಬೆಂಗಳೂರು: ರಾಜ್ಯದಲ್ಲಿ ಚಲನಚಿತ್ರಗಳು, ಸೀರಿಯಲ್ ಗಳಲ್ಲಿ ಮಕ್ಕಳು ನಟಿಸುತ್ತಿರುವ ಸಂಖ್ಯೆ ಹೆಚ್ಚಾಗಿದೆ. ಇದರೊಟ್ಟಿಗೆ ಅವರ ವಿದ್ಯಾಭ್ಯಾಸವು ಕುಂಠಿತಗೊಳ್ಳುತ್ತಿದೆ. ಈ ಕಾರಣದಿಂದಾಗಿ ಇನ್ಮುಂದೆ ಮಕ್ಕಳು ಸೀರಿಯಲ್, ಸಿನಿಮಾಗಳಲ್ಲಿ ನಟಿಸೋದಕ್ಕೆ ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆಯುವುದು ಕಡ್ಡಾಯ ಮಾಡಿ ರಾಜ್ಯ ಸರ್ಕಾರ ಆದೇಶಿಸಿದೆ.

Advertisement

ಈ ಕುರಿತಂತೆ ರಾಜ್ಯ ಕಾರ್ಮಿಕ ಇಲಾಖೆಯಿಂದ ಆದೇಶ ಹೊರಡಿಸಲಾಗಿದ್ದು, ಮಕ್ಕಳನ್ನು ಧಾರವಾಹಿ, ಚಲನಚಿತ್ರಗಳಲ್ಲಿ ನಟಿಸಲು ಜಿಲ್ಲಾಧಿಕಾರಿಗಳ ಅನುಮತಿ ಪಡೆಯಬೇಕು. ಮಕ್ಕಳು ಜಿಲ್ಲಾಧಿಕಾರಿಗಳಿಂದ ಅನುಮತಿ ಪಡೆದ ನಂತರವೇ ಸಿನಿಮಾ, ಸೀರಿಯಲ್ ಗಳಲ್ಲಿ ನಟಿಸಲು ಅವಕಾಶ ಎಂಬುದಾಗಿ ತಿಳಿಸಿದೆ.

ಒಂದು ದಿನದಲ್ಲಿ 5 ಗಂಟೆಗೂ ಹೆಚ್ಚು ಕಾಲ ಮಕ್ಕಳನ್ನು ನಟಿಸೋದಕ್ಕೆ ಬಳಸಿಕೊಳ್ಳಬಾರದು. ತಿಂಗಳಲ್ಲಿ ಕೇವಲ 27 ದಿನಗಳು ಮಾತ್ರವೇ ಮಕ್ಕಳನ್ನು ಶೂಟಿಂಗ್ ನಲ್ಲಿ ಬಳಿಸಿಕೊಳ್ಳಬೇಕು ಎಂಬುದಾಗಿಯೂ ಷರತ್ತು ವಿಧಿಸಿದೆ.

Advertisement

ಒಂದು ವೇಳೆ ಕಾರ್ಮಿಕ ಇಲಾಖೆಯ ಈ ಆದೇಶ ಪಾಲಿಸದೇ ಮಕ್ಕಳನ್ನು ಸೀರಿಯಲ್, ಸಿನಿಮಾಗಳಲ್ಲಿ ನಟಿಸಿಕೊಳ್ಳೋದಕ್ಕೆ ಆಯೋಜಕರು, ನಿರ್ಮಾಪಕರು ಬಳಿಸಿಕೊಂಡಿದ್ದೇ ಆದಲ್ಲಿ, ಅಂತವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳೋದಾಗಿ ಎಚ್ಚರಿಕೆ ನೀಡಿದೆ.

 

Advertisement
Tags :
bengalurucinemaDCLatestNewsLatetsNewsNewsKannadaserialಮಕ್ಕಳು
Advertisement
Next Article