ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಧನುಷ್- ಐಶ್ವರ್ಯ ಇಬ್ಬರೂ ಬೇರೆಯವರೊಟ್ಟಿಗೆ ಡೇಟಿಂಗ್; ಖ್ಯಾತ ಗಾಯಕಿ ಮಾಹಿತಿ

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. 2022ರ ಜನವರಿ 17ರಂದು ಧನುಷ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದಾಗಿ ಘೋಷಿಸಿದ್ದರು.
10:21 PM May 14, 2024 IST | Ashitha S

ಕಾಲಿವುಡ್‌ ನಟ ಧನುಷ್‌ ಮತ್ತು ಸೂಪರ್‌ ಸ್ಟಾರ್‌ ರಜನಿಕಾಂತ್‌ ಪುತ್ರಿ ಐಶ್ವರ್ಯಾ ರಜನಿಕಾಂತ್‌ ಅವರ ದಾಂಪತ್ಯ ಜೀವನ ಮುರಿದು ಬಿದ್ದಿದೆ. 2022ರ ಜನವರಿ 17ರಂದು ಧನುಷ್‌ ತಮ್ಮ ಸೋಷಿಯಲ್‌ ಮೀಡಿಯಾ ಖಾತೆಯಲ್ಲಿ 18 ವರ್ಷಗಳ ದಾಂಪತ್ಯ ಜೀವನಕ್ಕೆ ಅಂತ್ಯ ಹಾಡುವುದಾಗಿ ಘೋಷಿಸಿದ್ದರು.

Advertisement

ಇವರು ಬೇರೆ ಆಗೋಕೆ ಕಾರಣ ಏನು ಎಂಬುದು ಈಗಲೂ ರಿವೀಲ್ ಆಗಿಲ್ಲ. ಈ ಮಧ್ಯೆ ತಮಿಳು ರೇಡಿಯೋ ಜಾಕಿ ಹಾಗೂ ಗಾಯಕಿ ಸುಚಿತ್ರಾ ಕಾರ್ತಿಕ್ ಅವರು ಈಗ ದೊಡ್ಡ ಬಾಂಬ್ ಹಾಕಿದ್ದಾರೆ. ಧನುಷ್ ಪರಸ್ತ್ರೀ ಸಹವಾಸ ಮಾಡಿದ್ದರು ಎಂದು ಅವರು ಆರೋಪಿಸಿದ್ದಾರೆ.

2017ರಲ್ಲಿ ಸುಚಿತ್ರಾ ಅವರು ಒಂದು ಗಂಭೀರ ಆರೋಪ ಮಾಡಿದ್ದರು. ತಮ್ಮ ಸೋಶಿಯಲ್ ಮೀಡಿಯಾ ಖಾತೆ ಹ್ಯಾಕ್ ಆಗಿದೆ ಎಂದಿದ್ದ ಅವರು, ಧನುಷ್ ಸಹಾಯಕ ತಮ್ಮ ಜೊತೆ ಬೇರೆ ರೀತಿಯಲ್ಲಿ ನಡೆದುಕೊಂಡಿದ್ದ ಎಂದು ಕೂಡ ಅವರು ಆರೋಪಿಸಿದ್ದರು. ಆ ಬಳಿಕ ಸುಚಿತ್ರಾ ಅವರು ಧನುಷ್ ಬಗ್ಗೆಯೂ ಆರೋಪಿಸಿದ್ದರು. ಧನುಷ್ ಓರ್ವ ಡ್ರಗ್ ಅಡಿಕ್ಟ್ ವ್ಯಕ್ತಿ, ತಮಗೆ ಕಿರುಕುಳ ನೀಡಿದ್ದರು ಎಂದು ಆರೋಪಿಸಿದ್ದರು. ಇದರಿಂದ ತಮಿಳು ಸಿನಿಮಾ ರಂಗದಲ್ಲಿ ಕಾಸ್ಟಿಂಗ್​ಕೌಚ್ ವಿಚಾರ ಚರ್ಚೆಗೆ ಬಂದಿತ್ತು. ಆ ಬಳಿಕ ಧನುಷ್ ಅವರ ಕೆಲವು ಖಾಸಗಿ ಫೋಟೋ ಹಾಗೂ ವಿಡಿಯೋಗಳನ್ನು ಲೀಕ್ ಮಾಡಿದ್ದರು. ಈಗ ಅವರು ಧನುಷ್ ವಿರುದ್ಧ ಕೂಗಾಡಿದ್ದಾರೆ.

Advertisement

‘ಧನುಷ್ ಮತ್ತು ಐಶ್ವರ್ಯಾ ವಿಚ್ಛೇದನ ಇಬ್ಬರೂ ಸರಿ ಇಲ್ಲ. ಐಶ್ವರ್ಯಾ ಒಳ್ಳೆಯ ತಾಯಿ ಅಲ್ಲ. ಧನುಷ್-ಐಶ್ವರ್ಯಾ ಪರಸ್ಪರ ಮೋಸ ಮಾಡಿಕೊಂಡಿದ್ದಾರೆ. ನನಗೆ ಧನುಷ್ ಮೇಲೆ ಸಿಟ್ಟಿದೆ. ಅದನ್ನು ಬೇರೆ ರೀತಿಯಲ್ಲಿ ತೀರಿಸಿಕೊಳ್ಳುತ್ತೇನೆ. ರೀಲ್ಸ್ ಮಾಡೋ ತಾಯಿಗಳು ನನಗೆ ಇಷ್ಟ ಆಗುವುದಿಲ್ಲ. ಧನುಷ್ ಓರ್ವ ಒಳ್ಳೆಯ ತಂದೆ’ ಎಂದಿದ್ದಾರೆ ಸುಚಿತ್ರಾ.

ಮದುವೆ ಆದ ಬಳಿಕ ಯಾರಾದರೂ ಡೇಟ್​​ಗೆ ಹೋಗುತ್ತಾರಾ? ಧನುಷ್ ಹೋಗಿದ್ದರು. ಓಪನ್ ಆಗಿ ಧನುಷ್ ಮೋಸ ಮಾಡಿದ್ದಾರೆ. ದೆವ್ವ ಹಾಗೂ ಆಳ ಸಮುದ್ರದಲ್ಲಿ ದೆವ್ವವೇ ಬೆಸ್ಟ್. ಧನುಷ್ ನಿಜಕ್ಕೂ ಉತ್ತಮ. ನನಗೆ ಅವರ ಮೇಲೆ ದ್ವೇಷ ಇಲ್ಲ. ನನಗೆ ಪ್ರ್ಯಾಂಕ್ ಮಾಡಿ ನನ್ನ ಜೀವನವೇ ನಾಶ ಮಾಡಿದರು’ ಎಂದಿದ್ದಾರೆ ಸುಚಿತ್ರಾ. ಈ ಮೂಲಕ ಪರಸ್ತ್ರೀ ಸಹವಾಸದಿಂದ ವಿಚ್ಛೇದನ ಆಯಿತೇ ಎನ್ನುವ ಪ್ರಶ್ನೆ ಮೂಡುವಂತೆ ಮಾಡಿದೆ.

ಐಶ್ವರ್ಯಾ ಅವರು ಯಾವಾಗಲೂ ಧನುಷ್‌ ತಮಗೆ ಮೋಸ ಮಾಡಿದ್ದಾರೆ ಎಂದು ಹೇಳುತ್ತಾರೆ. ಆದರೆ ಅವರೂ ಕೂಡ ಅದನ್ನೇ ಮಾಡಿದ್ದಾರೆ. ಆಕೆಗೊಂದು ನ್ಯಾಯ ಆತನಿಗೊಂದು ನ್ಯಾಯವೇ? ಎಂದು ಸುಚಿತ್ರಾ ಪ್ರಶ್ನಿಸಿದ್ದಾರೆ. 'ಅವರು ಬಾರ್‌ನಲ್ಲಿ ಕುಳಿತು ಡೇಟಿಂಗ್ ನಡೆಸುತ್ತಿರುವ ವ್ಯಕ್ತಿಯೊಂದಿಗೆ ಮದ್ಯ ಸೇವಿಸಿದ್ದಾರೆ' ಎಂದಿದ್ದಾರೆ.

ತಮ್ಮ ಮಾಜಿ ಪತಿ ಕಾರ್ತಿಕ್ ವಿರುದ್ಧವೂ ಸುಚಿತ್ರಾ ಗಂಭೀರ ಆರೋಪ ಮಾಡಿದ್ದಾರೆ. ʼಆತ (ಕಾರ್ತಿಕ್) ಸಲಿಂಗಕಾಮಿ. ಆದರೆ ಅದನ್ನು ಹೇಳಲು ಅವನಿಗೆ ಧೈರ್ಯವಿಲ್ಲ. ಪತಿ ಸಲಿಂಗಕಾಮಿ ಎಂದು ನನಗೆ ಮದುವೆಯಾದ 2 ವರ್ಷಕ್ಕೆ ತಿಳಿಯಿತು. ಧನುಷ್ ಹಾಗೂ ನನ್ನ ಮಾತಿ ಪತಿ ಒಟ್ಟಿಗೆ ಕೋಣೆಯಲ್ಲಿ ಏನು ಮಾಡುತ್ತಿದ್ದರು? ಪಾರ್ಟಿಗಳಲ್ಲಿ ಏನು ನಡೆಯುತ್ತಿತ್ತು?ʼ ಎಂದು ಸುಚಿತ್ರಾ ಕೇಳಿದ್ದಾರೆ.

Advertisement
Tags :
Aishwarya RajinikanthDHANUSHGOVERNMENTindiaKARNATAKANewsKarnataka
Advertisement
Next Article