ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಮಸಮುದ್ರ ಕೆರೆಯಲ್ಲಿ ಬಿದ್ದಿದ್ದ ಚಿನ್ನದ ಸರವನ್ನು ಹುಡುಕಿಕೊಟ್ಟ ಮುಳುಗುತಜ್ಞ ಈಶ್ವರ್ ಮಲ್ಪೆ

ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ದ ರಾಮಸಮುದ್ರ ಕೆರೆಯಲ್ಲಿ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ನಿತಿನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು.
10:57 AM Dec 07, 2023 IST | Ashika S

ಉಡುಪಿ: ಕಾರ್ಕಳ ತಾಲೂಕಿನ ಇತಿಹಾಸ ಪ್ರಸಿದ್ದ ರಾಮಸಮುದ್ರ ಕೆರೆಯಲ್ಲಿ ತನ್ನ ಗೆಳೆಯರೊಂದಿಗೆ ಮೀನು ಹಿಡಿಯಲು ಹೋಗಿದ್ದ ನಿತಿನ್ ಎಂಬ ಯುವಕ ತನ್ನ ಕತ್ತಿನಲ್ಲಿದ್ದ ಬೆಲೆಬಾಳುವ ಚಿನ್ನದ ಸರವನ್ನು ಕಳೆದುಕೊಂಡಿದ್ದರು.

Advertisement

ನಿಂತ ನೀರಿನಿಂದಾಗಿ ಕೆಸರು ತುಂಬಿಕೊಂಡಿದ್ದ ಕೆರೆಯಲ್ಲಿ ಸತತ 2 ದಿನ ಹುಡುಕಾಡಿದರೂ ಸರ ಸಿಕ್ಕಿರಲಿಲ್ಲ. ಈ ವಿಷಯ ತಿಳಿದ ಆಪತ್ಪಾಂಧವ ಈಶ್ವರ್ ಮಲ್ಪೆ ಮತ್ತು ತಂಡ ಸ್ಥಳಕ್ಕೆ ಧಾವಿಸಿತು.

ಸ್ಥಳೀಯ ದೈವ ದೇವರಿಗೆ ಹಾಗೂ ಕೊಲ್ಲೂರು ಶ್ರೀ ಮೂಕಾಂಬಿಕೆ ತಾಯಿಗೆ ಕೈ ಮುಗಿದು ಬೇಡಿಕೊಂಡು ಕೆರೆಗಿಳಿದ ಮುಳುಗು ತಜ್ಞ ಈಶ್ವರ್ ಮಲ್ಪೆ ಕೇವಲ 15 ನಿಮಿಷಗಳಲ್ಲಿ ಹುಡುಕಾಡಿ ಸುಮಾರು 2 ಲಕ್ಷ ಮೌಲ್ಯದ ಚಿನ್ನದ ಸರವನ್ನು ಮೇಲೆತ್ತಿ ವಾರಿಸುದಾರರಿಗೊಪ್ಪಿಸಿ ಮಾನವೀಯತೆ ಮೆರೆದರು. ಕೆಲವು ದಿನಗಳ ಹಿಂದೆ ಸ್ವರ್ಣ ನದಿಗೆ ಬಿದ್ದಿದ್ದ ಚಿನ್ನದ ಸರವನ್ನು ಈಶ್ವ‌ರ್ ಮಲ್ಪೆ ತೆಗೆದು ಕೊಟ್ಟಿದ್ದನ್ನು ಇಲ್ಲಿ ಸ್ಮರಿಸಬಹುದು.

Advertisement

Advertisement
Tags :
LatestNewsNewsKannadaಕಾರ್ಕಳಕೆರೆಚಿನ್ನದ ಸರರಾಮಸಮುದ್ರ
Advertisement
Next Article