For the best experience, open
https://m.newskannada.com
on your mobile browser.
Advertisement

ವೋಟ್ ಮಾಡದೇ ಎಲ್ಲಿಗೆ ಹೋದ್ರು ರಮ್ಯಾ, ರಶ್ಮಿಕಾ ಮಂದಣ್ಣ ?

ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಬಿರುಸಿನಿಂದ ನಡೆದಿದೆ. ಸ್ಯಾಂಡಲ್​ವುಡ್​ ಖ್ಯಾತ ನಟ ಹಾಗೂ ನಟಿಯರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತದಾನ ಮಾಡಿದ್ದಾರೆ. ಆದರೆ ಇದರ ಮಧ್ಯೆ ಸ್ಯಾಂಡಲ್​ವುಡ್​​ನ ಇಬ್ಬರು ಖ್ಯಾತ ನಟಿಯರು ಮತ ಹಾಕಿಲ್ಲ.
08:39 PM Apr 26, 2024 IST | Ashitha S
ವೋಟ್ ಮಾಡದೇ ಎಲ್ಲಿಗೆ ಹೋದ್ರು ರಮ್ಯಾ  ರಶ್ಮಿಕಾ ಮಂದಣ್ಣ

ಬೆಂಗಳೂರು: ಲೋಕಸಭಾ ಚುನಾವಣೆಯ ಹಿನ್ನೆಲೆಯಲ್ಲಿ ಕರ್ನಾಟಕದ 14 ಲೋಕಸಭಾ ಕ್ಷೇತ್ರಗಳಲ್ಲಿ ಮೊದಲ ಹಂತದ ಚುನಾವಣೆ ಬಿರುಸಿನಿಂದ ನಡೆದಿದೆ. ಸ್ಯಾಂಡಲ್​ವುಡ್​ ಖ್ಯಾತ ನಟ ಹಾಗೂ ನಟಿಯರು ಮತಗಟ್ಟೆಗಳಿಗೆ ಆಗಮಿಸಿ ತಮ್ಮ ಮತದಾನ ಮಾಡಿದ್ದಾರೆ. ಆದರೆ ಇದರ ಮಧ್ಯೆ ಸ್ಯಾಂಡಲ್​ವುಡ್​​ನ ಇಬ್ಬರು ಖ್ಯಾತ ನಟಿಯರು ಮತ ಹಾಕಿಲ್ಲ.

Advertisement

ಹೌದು, ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಸಾಕಷ್ಟು ಸ್ಟಾರ್​ ನಟ ನಟಿಯರು ಮತಗಟ್ಟೆಗೆ ಬಂದು ಮತದಾನ ಮಾಡಿದ್ದಾರೆ. ಈ ಮಧ್ಯೆ ಸ್ಯಾಂಡಲ್​ವುಡ್​ ನಟಿ ರಮ್ಯಾ ಹಾಗೂ ನ್ಯಾಷನಲ್​ ಕ್ರಶ್​ ರಶ್ಮಿಕಾ ಮಂದಣ್ಣ ಅವರು ಮತದಾನ ಮಾಡದೆ ಕರ್ತವ್ಯ ಮರೆತಿದ್ದಾರೆ. ಮಂಡ್ಯ ಕ್ಷೇತ್ರದಲ್ಲಿ ಮತದಾನ ಹೊಂದಿದ್ದ ರಮ್ಯಾ ಅವರು ಮತದಾನ ಮಾಡದೇ ಕರ್ತವ್ಯ ಮರೆತಿದ್ದಾರೆ.

ಇತ್ತ ನಟಿ ರಶ್ಮಿಕಾ ಮಂದಣ್ಣ ಕೂಡ ವಿರಾಜಪೇಟೆಯಲ್ಲಿ ಮತವನ್ನು ಹೊಂದಿದ್ದು ಅವರು ಕೂಡ ಈ ಬಾರಿ ಮತದಾನ ಮಾಡಿಲ್ಲ. ಹೀಗಾಗಿ ಈ ಇಬ್ಬರು ಸ್ಟಾರ್​ ನಟಿಯರ ಮೇಲೆ ಅಭಿಮಾನಿಗಳು ಬೇಸರ ಹೊರ ಹಾಕುತ್ತಿದ್ದಾರೆ.

Advertisement

Advertisement
Tags :
Advertisement