For the best experience, open
https://m.newskannada.com
on your mobile browser.
Advertisement

ಕಿರುತೆರೆಗೆ ಮತ್ತೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ.ಸೂಪರ್ ಸ್ಟಾರ್ ಆಗಿ ಮಿಂಚಲು ಮಲೆನಾಡಿನ ಬೆಡಗಿ ದಿವ್ಯಾ ಸಜ್ಜಾಗಿದ್ದು, ಹೊಸ ಪ್ರೋಮೋ ಮೂಲಕ ನಟಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.
08:15 PM Apr 09, 2024 IST | Chaitra Kulal
ಕಿರುತೆರೆಗೆ ಮತ್ತೆ ಕಾಲಿಟ್ಟ ‘ಬಿಗ್ ಬಾಸ್’ ಖ್ಯಾತಿಯ ದಿವ್ಯಾ ಉರುಡುಗ

ಬಿಗ್ ಬಾಸ್ ಖ್ಯಾತಿಯ ದಿವ್ಯಾ ಉರುಡುಗ ಮತ್ತೆ ಕಿರುತೆರೆಗೆ ಕಾಲಿಟ್ಟಿದ್ದಾರೆ. ಸೂಪರ್ ಸ್ಟಾರ್ ಆಗಿ ಮಿಂಚಲು ಮಲೆನಾಡಿನ ಬೆಡಗಿ ದಿವ್ಯಾ ಸಜ್ಜಾಗಿದ್ದು, ಹೊಸ ಪ್ರೋಮೋ ಮೂಲಕ ನಟಿ ಪ್ರೇಕ್ಷಕರ ಗಮನ ಸೆಳೆಯುತ್ತಿದ್ದಾರೆ.

Advertisement

ಕಲರ್ಸ್ ಕನ್ನಡ ವಾಹಿನಿಯಲ್ಲಿ ‘ನಿನಗಾಗಿ’ ಎಂಬ ಸೀರಿಯಲ್ ಮೂಲಕ ಮತ್ತೆ ಟಿವಿ ಪರದೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ. ದಿವ್ಯಾ ಉರುಡುಗ ಅವರು ರಚನಾ ಪಾತ್ರದಲ್ಲಿ ನಟಿಸಲಿದ್ದಾರೆ. ಸ್ಟಾರ್ ಆಗಿ ಮಿಂಚುತ್ತಿರುವ ಸಿನಿಮಾ ನಾಯಕಿಯ ಕಥೆಯನ್ನು ಹೇಳೋಕೆ ಹೊರಟಿದ್ದಾರೆ. ಸಿನಿಮಾ ಸ್ಟಾರ್ ಆಗಿರುವ ರಚನಾ ಬಾಳಿನ ಕಹಾನಿಯನ್ನು ‘ನಿನಗಾಗಿ’ ಸೀರಿಯಲ್ ಮೂಲಕ ಹೇಳಲಿದ್ದಾರೆ.

‘ನಿನಗಾಗಿ’ ಸೀರಿಯಲ್ ಪ್ರಸಾರದ ದಿನಾಂಕ ಇನ್ನೂ ಖಚಿತವಾಗಿಲ್ಲ. ‘ಅರ್ದಂ ಬರ್ಧ ಪ್ರೇಮ ಕಥೆ’ ಕಳೆದ ವರ್ಷ ರಿಲೀಸ್ ಆಗಿತ್ತು. ದಿವ್ಯಾ ಉರುಡುಗ ಮತ್ತು ಅರವಿಂದ್ ಕೆಪಿ ಜೋಡಿಯಾಗಿ ನಟಿಸಿದ್ದರು.

Advertisement

Advertisement
Tags :
Advertisement