ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ನಿಂಬೆ ಜ್ಯೂಸ್ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ!

ಬೇಸಿಗೆಯಲ್ಲಿ  ಬಿಸಿಲಿಗೆ ದಾಹ ಕಾಣಿಸಿಕೊಳ್ಳುವುದರಿಂದ ಮಾರುಕಟ್ಟೆಗಳಲ್ಲಿ ಸಿಗುವ ತಂಪು ಪಾನೀಯಗಳನ್ನು ಸೇವಿಸಿ ತಾತ್ಕಾಲಿಕವಾಗಿ ದಾಹ ತಣಿಸಿಕೊಳ್ಳುತ್ತೇವೆ. ಆದರೆ ಈ ಪಾನೀಯಗಳು ತಕ್ಷಣಕ್ಕೆ ದೇಹವನ್ನು ತಂಪುಗೊಳಿಸಿದಂತೆ ಭಾಸವಾದರೂ ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ.  ಹೀಗಾಗಿ ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಿಂಬೆ ಹಣ್ಣಿನ ಪಾನೀಯ ಸೇವನೆ ಅತ್ಯಗತ್ಯ.
08:55 AM Feb 21, 2024 IST | Ashika S

ಬೇಸಿಗೆಯಲ್ಲಿ  ಬಿಸಿಲಿಗೆ ದಾಹ ಕಾಣಿಸಿಕೊಳ್ಳುವುದರಿಂದ ಮಾರುಕಟ್ಟೆಗಳಲ್ಲಿ ಸಿಗುವ ತಂಪು ಪಾನೀಯಗಳನ್ನು ಸೇವಿಸಿ ತಾತ್ಕಾಲಿಕವಾಗಿ ದಾಹ ತಣಿಸಿಕೊಳ್ಳುತ್ತೇವೆ. ಆದರೆ ಈ ಪಾನೀಯಗಳು ತಕ್ಷಣಕ್ಕೆ ದೇಹವನ್ನು ತಂಪುಗೊಳಿಸಿದಂತೆ ಭಾಸವಾದರೂ ಆರೋಗ್ಯದ ದೃಷ್ಟಿಯಿಂದ ಒಳಿತಲ್ಲ.  ಹೀಗಾಗಿ ಬೇಸಿಗೆಯಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳಬೇಕಾದರೆ ನಿಂಬೆ ಹಣ್ಣಿನ ಪಾನೀಯ ಸೇವನೆ ಅತ್ಯಗತ್ಯ.

Advertisement

ನಿಂಬೆಹಣ್ಣಿನ ಪಾನೀಯದಲ್ಲಿ ಕೇವಲ ದಾಹ ನೀಗಿಸುವ ಶಕ್ತಿ ಮಾತ್ರವಿಲ್ಲದೆ ಇದರಲ್ಲಿ ದೇಹಕ್ಕೆ ಆರೋಗ್ಯವನ್ನು ನೀಡುವ ಪೋಷಕ ಶಕ್ತಿಯೂ ಇರುವುದರಿಂದ  ಬೇಸಿಗೆಯಲ್ಲಿ ಬೇರೆಲ್ಲ ಪಾನೀಯಗಳಿಗಿಂತ ನಿಂಬೆಗೆ ಆದ್ಯತೆ ನೀಡುವುದು  ಒಳ್ಳೆಯದು. ಹಿಂದಿನ ಕಾಲದಿಂದಲೂ ಜ್ಯೂಸ್ ಗೆ ನಿಂಬೆಹಣ್ಣನ್ನೇ ಬಳಸುತ್ತಾ ಬರಲಾಗುತ್ತದೆ. ಕಾರಣ ಇದು ಬೇಸಿಗೆಯ ದಿನಗಳಲ್ಲಿ ಮನುಷ್ಯನ ದೇಹಕ್ಕೆ ಶಕ್ತಿಯನ್ನು ಒದಗಿಸಿ ಆಯಾಸವನ್ನು ದೂರ ಮಾಡುತ್ತದೆ.

ಇನ್ನು  ನಿಂಬೆ ಹಣ್ಣಿನ ರಸದಲ್ಲಿ ಜೀರ್ಣಶಕ್ತಿಯನ್ನು ಹೆಚ್ಚಿಸುವ, ಕೊಬ್ಬು ಕರಗಿಸುವ, ವಾಂತಿಯನ್ನು ನಿಯಂತ್ರಿಸುವ, ಪಚನ ಕ್ರಿಯೆಯನ್ನು ಹೆಚ್ಚಿಸುವ ಹೀಗೆ ಹಲವು ಆರೋಗ್ಯಕಾರಿ ಗುಣವಿದೆ. ಅಷ್ಟೇ ಅಲ್ಲದೆ, ಇದರ ರಸದಲ್ಲಿ ಕ್ರಿಮಿಗಳನ್ನು ನಾಶ ಮಾಡುವ ಶಕ್ತಿಯೂ ಇದೆ. ಬಿಸಿಲಲ್ಲಿ ನಡೆದಾಡಿಯೋ, ಕೆಲಸ ಮಾಡಿಯೋ ಸುಸ್ತಾಗಿದ್ದರೆ ನಿಂಬೆಹಣ್ಣಿನ ರಸದ ಪಾನಕ ಸೇವಿಸಿದರೆ ಬಳಲಿಕೆ ದೂರವಾಗುತ್ತದೆ.

Advertisement

ಉರಿಮೂತ್ರದ ಸಮಸ್ಯೆಯಿಂದ ಬಳಲುವವರು ಒಂದು ಚಮಚ ರಸದೊಂದಿಗೆ ಜೇನುತುಪ್ಪ ಬೆರೆಸಿ ಕುಡಿದರೆ  ಶಮನವಾಗಲಿದೆ. ತಲೆಹೊಟ್ಟಿನ ಸಮಸ್ಯೆಯಿಂದ ಬಳಲುವವರು ನಿಂಬೆ ರಸವನ್ನು ಸೀಗೆಕಾಯಿಪುಡಿಯೊಂದಿಗೆ ಬೆರೆಸಿಕೊಂಡು ತಲೆಗೆ ಹಚ್ಚಿ ಸ್ನಾನ ಮಾಡಿದರೆ ಹೊಟ್ಟು ಕಡಿಮೆಯಾಗುತ್ತದೆ. ಬರೀ ನಿಂಬೆ ರಸವನ್ನು ಕೂದಲಿಗೆ ಹಚ್ಚಿ ಕೆಲವು ಸಮಯಗಳ ಬಳಿಕ ಸ್ನಾನ ಮಾಡಿದರೆ ಕೂದಲು ಮೃದುವಾಗುತ್ತದೆಯಲ್ಲದೆ, ಉದುರುವುದು ಕಡಿಮೆಯಾಗುತ್ತದೆ.

ಅಜೀರ್ಣದ ಸಮಸ್ಯೆಯಿಂದ ಉಂಟಾಗುವ ಹುಳಿತೇಗು ಕಂಡು ಬಂದರೆ ದಿನಕ್ಕೆ ಎರಡು ಬಾರಿಯಂತೆ ಎರಡು ಚಮಚ  ನಿಂಬೆರಸವನ್ನು ಸೇವಿಸಿ ನಿಯಂತ್ರಿಸಬಹುದಾಗಿದೆ. ಲೆಮನ್ ಟೀ ಸೇವಿಸುವುದರಿಂದ ನೆಗಡಿ ಕಡಿಮೆಯಾಗುತ್ತದೆ. ಮೂತ್ರವಿಸರ್ಜನೆ ಸುಲಭವಾಗಿ ಆಗಲು ಒಂದು ಲೋಟ ಎಳನೀರಿಗೆ ನಿಂಬೆ ರಸವನ್ನು ಬೆರೆಸಿ ಸೇವಿಸಬೇಕು. ನಿಂಬೆ ಹಣ್ಣಿನ ಸಿಪ್ಪೆಯನ್ನು ಅರೆದು ಮುಖಕ್ಕೆ ಹಚ್ಚುವುದರಿಂದ  ಮೊಡವೆಗಳು ಕಡಿಮೆಯಾಗುತ್ತದೆ. ಚೇಳು ಕಡಿದ ಜಾಗಕ್ಕೆ ನಿಂಬೆ ರಸವನ್ನು ಹಾಕುವುದರಿಂದ ಉರಿ ಶಮನವಾಗಲು ಸಾಧ್ಯವಾಗುತ್ತದೆ.

ಒಂದು ಲೋಟ ಹಸುವಿನ ಹಾಲಿಗೆ ನಿಂಬೆ ರಸವನ್ನು ಬೆರೆಸಿ ಕುಡಿಯುವುದರಿಂದ ಮೂಲವ್ಯಾಧಿ ಕಡಿಮೆಯಾಗುತ್ತದೆ.  ನಿಂಬೆರಸದಲ್ಲಿ  ಖನಿಜ, ಲವಣಗಳ ಸತ್ವ ಗುಣಗಳಿದ್ದು ರೋಗನಿರೋಧಕವಾಗಿಯೂ ಕಾರ್ಯನಿರ್ವಹಿಸುತ್ತಿದೆ. ನಿಂಬೆ ಹಣ್ಣನ್ನು ತಮ್ಮ ನಿತ್ಯದ ಬಳಕೆಯಲ್ಲಿ ಹೆಚ್ಚಾಗಿ ಬಳಸುತ್ತಾ ಬಂದರೆ ಆರೋಗ್ಯದಲ್ಲಿ ವೃದ್ಧಿ ಕಾಣ ಬಹುದಾಗಿದೆ. ಇಷ್ಟೆಲ್ಲ ಆರೋಗ್ಯ ಗುಣವಿರುವ ನಿಂಬೆ ಹಣ್ಣನ್ನು ದೂರವಿಟ್ಟು ಮಾರುಕಟ್ಟೆಯಲ್ಲಿ ಸಿಗುವ ಜ್ಯೂಸ್ ಗಳನ್ನು ಕುಡಿಯುವುದೆಷ್ಟು ಸರಿ?

ಇನ್ನಾದರೂ ಬೇಸಿಗೆ ದಿನಗಳಲ್ಲಿ ಬಾಯಾರಿಕೆಯಾಯಿತೆಂದು ಯಾವುದೋ ಜ್ಯೂಸ್ ಕುಡಿಯುವ ಬದಲು ಮನೆಯಲ್ಲಿಯೇ ನಿಂಬೆ ಹಣ್ಣಿನಿಂದ ತಯಾರಿಸಿದ ಜ್ಯೂಸ್ ಕುಡಿದು ಆರೋಗ್ಯ ಕಾಪಾಡಿಕೊಳ್ಳಿ.

Advertisement
Tags :
LatetsNewsNewsKannadaಜ್ಯೂಸ್ನಿಂಬೆ ಹಣ್ಣಿನ ಪಾನೀಯಬೇಸಿಗೆ
Advertisement
Next Article