ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ವಿವಾದಕ್ಕೀಡಾದ ದುನಿಯಾ ವಿಜಯ್ ಯ ʼಪ್ರೊಡಕ್ಷನ್ ನಂಬರ್ 2 ಪೋಸ್ಟರ್‌ʼ

ಸಿನಿಮಾ ರಿಲೀಸ್ ಮುನ್ನವೇ ದುನಿಯಾ ವಿಜಯ್ ಅಭಿನಯದ ವಿಜಿ V29 ಪೋಸ್ಟರ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ. ತಲ್ವಾರ್ ಹಿಡಿದ ದುನಿಯಾ ವಿಜಯ್ ವಿರುದ್ಧ ಹಿಂದೂ ಸಂಘಟನೆಗಳು ಕೆಂಡವಾಗಿವೆ.
01:28 PM Apr 14, 2024 IST | Ashitha S

ಬೆಂಗಳೂರು: ಸಿನಿಮಾ ರಿಲೀಸ್ ಮುನ್ನವೇ ದುನಿಯಾ ವಿಜಯ್ ಅಭಿನಯದ ವಿಜಿ V29 ಪೋಸ್ಟರ್‌ಗೆ ಭಾರೀ ವಿರೋಧ ವ್ಯಕ್ತವಾಗಿದೆ. ತಲ್ವಾರ್ ಹಿಡಿದ ದುನಿಯಾ ವಿಜಯ್ ವಿರುದ್ಧ ಹಿಂದೂ ಸಂಘಟನೆಗಳು ಕೆಂಡವಾಗಿವೆ.

Advertisement

ಇತ್ತೀಚೆಗೆ ಸ್ಯಾಂಡಲ್‌ವುಡ್‌ ನಟ ದುನಿಯಾ ವಿಜಯ್ ಅವರು ತಮ್ಮ ಮುಂದಿನ ಸಿನಿಮಾ ಪ್ರೊಡಕ್ಷನ್ ನಂಬರ್ 2 ಚಿತ್ರದ ಮೊದಲ ಪೋಸ್ಟರ್‌ ಬಿಡುಗಡೆ ಮಾಡಿದ್ದರು. ಇದೇ ಪೋಸ್ಟರ್ ಸದ್ಯ ಹಿಂದೂಗಳ ಆಕ್ರೋಶದ ಜ್ವಾಲೆಗೆ ಗುರಿಯಾಗಿದೆ.

ದೇವಸ್ಥಾನದ ರಥಕ್ಕೆ ಬೆಂಕಿ, ಅದರ ಮುಂದೆ ತಲ್ವಾರ್ ಇಟ್ಕೊಂಡು ಪೋಸ್ ಕೊಡಲಾಗಿದೆ. ಈ ಸಿನಿಮಾ ಪೋಸ್ಟರ್ ಹಿಂದೂಪರ ಸಂಘಟನೆಗಳ ಆಕ್ರೋಶಕ್ಕೆ ಕಾರಣವಾಗಿದೆ. ಶಾಂತಿಯ ತಾಣವಾದ ದೇವಸ್ಥಾನವನ್ನ ಕೆಟ್ಟದಾಗಿ ಬಿಂಬಿಸಿದ್ದಾರೆ. ದೇವಾಲಯದ ಪೋಸ್ಟರ್ ಅನ್ನ ಕೆಟ್ಟದಾಗಿ ಬಳಕೆ ಮಾಡಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಲಾಗುತ್ತಿದೆ.

Advertisement

ಪದೇ ಪದೇ ಹಿಂದೂ ದೇವಾಲಯಗಳನ್ನ ಈ ರೀತಿ ಬಳಕೆ ಮಾಡಿದ್ದು‌ ಎಷ್ಟು ಸರಿ ಎಂದು ಹಿಂದೂ ಜನಜಾಗೃತಿ ಸಮಿತಿ ರಾಜ್ಯ ಸಂಚಾಲಕ ಮೋಹನ್ ಅವರು ಪ್ರಶ್ನಿಸಿದ್ದಾರೆ. ಈ ಪೋಸ್ಟ್ ಡಿಲೀಟ್ ಮಾಡಬೇಕು. ಇಲ್ಲದಿದ್ರೆ ರಾಜ್ಯವ್ಯಾಪಿ ಈ ಸಿನಿಮಾ ಬ್ಯಾನ್ ಮಾಡ್ತೇವೆ ಅಂತ ಹಿಂದೂ ಜನಜಾಗೃತಿ ಸಮಿತಿ ಎಚ್ಚರಿಕೆಯನ್ನು ನೀಡಿದೆ.

Advertisement
Tags :
indiaKARNATAKALatestNewsNewsKarnatakaSANDALWOODದುನಿಯಾ ವಿಜಯ್ವಿಜಿ V29 ಪೋಸ್ಟರ್‌
Advertisement
Next Article