ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಬೇಸಿಗೆಯಲ್ಲಿ ಸೌತೆಕಾಯಿ ಸೇವಿಸಿ ಆರೋಗ್ಯ ಕಾಪಾಡಿಕೊಳ್ಳಿ

ಬೇಸಿಗೆಯಲ್ಲಿ ನಾವು ಯಾವ ಹಣ್ಣು ತರಕಾರಿಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಂಡು ಅಂತಹ ತರಕಾರಿ, ಹಣ್ಣುಗಳನ್ನು ಸೇವಿಸುವ ಮೂಲಕ ಬೇಸಿಗೆಯಲ್ಲಿ ದೇಹದ ಮೇಲೆ ಆಗುವ ತೊಂದರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.
05:28 PM Feb 22, 2024 IST | Gayathri SG

ಬೇಸಿಗೆಯಲ್ಲಿ ನಾವು ಯಾವ ಹಣ್ಣು ತರಕಾರಿಗಳನ್ನು ಸೇವಿಸಬೇಕು ಎಂಬುದನ್ನು ತಿಳಿದುಕೊಂಡು ಅಂತಹ ತರಕಾರಿ, ಹಣ್ಣುಗಳನ್ನು ಸೇವಿಸುವ ಮೂಲಕ ಬೇಸಿಗೆಯಲ್ಲಿ ದೇಹದ ಮೇಲೆ ಆಗುವ ತೊಂದರೆಯಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗುತ್ತದೆ.

Advertisement

ಬೇಸಿಗೆಯ ದಿನಗಳಲ್ಲಿ ಸೌತೆಕಾಯಿಯನ್ನು ಸೇವಿಸುವುದರಿಂದ ಆರೋಗ್ಯ ಕಾಪಾಡಬಹುದಾಗಿರುವುದರಿಂದ ಅದರ ಬಳಕೆಯನ್ನು ಹೆಚ್ಚೆಚ್ಚಾಗಿ ಮಾಡುವುದು ಒಳಿತು. ಏಕೆಂದರೆ ಸೌತೆಕಾಯಿಯಲ್ಲಿ ನೀರಿನಾಂಶ ಹೆಚ್ಚಿರುವ ಕಾರಣ ದೇಹದ ದಾಹವನ್ನು ತಣಿಸಲು ಮತ್ತು ದೇಹವನ್ನು ತಂಪಾಗಿಡಲು ಇದು ಸಹಕಾರಿಯಾಗಿದೆ.

ಸೌತೆಕಾಯಿಯನ್ನು ಅಡುಗೆಯಲ್ಲಿ ಬಳಸಲಾಗುತ್ತಿದೆಯಾದರೂ ಬೇಸಿಗೆಯಲ್ಲಂತು ಇದನ್ನು ಹಸಿಯಾಗಿ ಸೇವಿಸಿದಷ್ಟು ಅನುಕೂಲ ಜಾಸ್ತಿ. ಮಿಡಿ ಸೌತೆಯನ್ನು ತಿನ್ನಲೆಂದೇ ಬಳಸಲಾಗುತ್ತದೆ. ಉಳಿದಂತೆ ಮಲೆನಾಡುಗಳಲ್ಲಿ ದೊಡ್ಡಗಾತ್ರದ ಸೌತೆಕಾಯಿಯನ್ನು ಬೆಳೆಯಲಾಗುತ್ತದೆ.

Advertisement

ಸೌತೆಕಾಯಿ ಹಲವು ರೀತಿಯಲ್ಲಿ ಆರೋಗ್ಯಕಾರಿಯಾಗಿರುವುದರಿಂದ ಇದರ ಬಳಕೆ ಮಾಡಿದಷ್ಟು ನಮಗೆ ಅನುಕೂಲ ಜಾಸ್ತಿ. ಬೇಸಿಗೆ ದಿನಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸೌತೆಕಾಯಿ ದೇಹದಲ್ಲಿ ಉಷ್ಣಾಂಶವನ್ನು ತಗ್ಗಿಸುವುದಲ್ಲದೆ, ಬಾಯಾರಿಕೆಯನ್ನು ಕಡಿಮೆ ಮಾಡುತ್ತದೆ. ಅಷ್ಟೇ ಅಲ್ಲ ಇದರ ರಸವನ್ನು ತೆಗೆದು ಮುಖ ಕೈಕಾಲು, ಚರ್ಮಕ್ಕೆ ಹಚ್ಚಿ ಕೆಲವು ಸಮಯ ಬಿಟ್ಟು ತೊಳೆಯುವುದರಿಂದ ಚರ್ಮದ ಸುಕ್ಕು ಕಡಿಮೆಯಾಗಿ ಚರ್ಮದ ಕಾಂತಿ ಹೆಚ್ಚುತ್ತದೆ.

ಇನ್ನು ಅಜೀರ್ಣ ಸಮಸ್ಯೆಯಿಂದ ಬಳಲುವವರು ಸೌತೆಕಾಯಿಯನ್ನು ಆಹಾರದೊಂದಿಗೆ ಸೇವಿಸುವುದರಿಂದ ಅಜೀರ್ಣದ ಸಮಸ್ಯೆಯನ್ನು ದೂರ ಮಾಡಬಹುದು. ಕೆಲವೊಮ್ಮೆ ಅಂಗಾಲುಗಳಲ್ಲಿ ಉರಿಕಾಣಿಸಿಕೊಳ್ಳುತ್ತದೆ. ಈ ವೇಳೆ ಸೌತೆಕಾಯಿಯ ತಿರುಳು ತೆಗೆದು ಅದರಿಂದ ಉಜ್ಜಿದರೆ ಶಮನವಾಗುತ್ತದೆ. ದೇಹದ ಉಷ್ಣದ ಕಾರಣಕ್ಕೆ ಮೂತ್ರ ಸಮರ್ಪಕವಾಗಿ ಹೋಗದೆ ತೊಂದರೆ ಅನುಭವಿಸುವವರು ಒಂದು ಬಟ್ಟಲು ಸೌತೆ ರಸದೊಂದಿಗೆ ಒಂದು ಚಮಚ ಜೇನು ತುಪ್ಪ ಹಾಗೂ ನಿಂಬೆ ರಸವನ್ನು ಹಾಕಿ ದಿನಕ್ಕೆರಡು ಬಾರಿ ಸೇವಿಸುತ್ತಾ ಬಂದರೆ ಮೂತ್ರ ವರ್ಧನೆಯಾಗಿ ಸಮಸ್ಯೆಗೆ ಪರಿಹಾರ ದೊರಕಲಿದೆ.

ಮುಖದಲ್ಲಿ ಕಪ್ಪಗಿನ ಕಲೆಗಳು ಇದ್ದರೆ ಸೌತೆಕಾಯಿ ಸಿಪ್ಪೆಯೊಂದಿಗೆ ನಿಂಬೆ ಹಣ್ಣಿನ ರಸವನ್ನು ಬೆರೆಸಿ ನುಣ್ಣಗೆ ಅರೆದು ಅದನ್ನು ಲೇಪಿಸುತ್ತಾ ಬಂದರೆ ಕಲೆ ಮಾಯವಾಗುತ್ತದೆ. ಇದಲ್ಲದೆ ಸೌತೆಕಾಯಿಯ ತಿರುಳನ್ನು ಹಚ್ಚಿ ಅಂಗೈ ಮತ್ತು ಪಾದಗಳಿಗೆ ಮೃದುವಾಗಿ ಮಾಲೀಸ್ ಮಾಡಿದರೆ ದೇಹ ತಂಪಾಗಿ ನಿದ್ದೆ ಬರಲು ಸಾಧ್ಯವಾಗುತ್ತದೆ. ಸೌತೆಕಾಯಿಯನ್ನು ಚಕ್ರದಾಕಾರವಾಗಿ ಕತ್ತರಿಸಿ ಕಣ್ಣಿಗೆ ಇಟ್ಟುಕೊಂಡರೆ ಕಣ್ಣಿನ ಉರಿ ಕಡಿಮೆಯಾಗುತ್ತದೆ. ಇದರಲ್ಲಿ ಮೂತ್ರದ ಉರಿ ಶಮನಕಾರಿ ಗುಣ, ವೀರ್ಯ ಶುದ್ಧಿಕಾರಿ ಗುಣ ಹೊಂದಿದ್ದು, ಮಧುಮೇಹಿಗಳು ಕೂಡ ಸೇವಿಸಬಹುದಾಗಿದೆ.

ಸೌತೆಕಾಯಿ ಏಕೆ ಆರೋಗ್ಯಕಾರಿ ಎಂಬುದಕ್ಕೆ ಅದರಲ್ಲಿರುವ ಪೋಷಕಾಂಶವೇ ಸಾಕ್ಷಿಯಾಗಿದೆ. ಉದಾಹರಣೆಗೆ ನೂರು ಗ್ರಾಂ ಸೌತೆಕಾಯಿನಲ್ಲಿರುವ ಪೋಷಕಾಂಶಗಳನ್ನು ಗಮನಿಸಿದರೆ ಅದರ ಮಹತ್ವ ನಮಗೆ ತಿಳಿಯಲಿದೆ.

ಶರ್ಕರಪಿಷ್ಠ 2.8ಗ್ರಾಂ, ಸಸಾರಜನಕ 0.4, ಕೊಬ್ಬು 0.56ಮಿ.ಗ್ರಾಂ ಸುಣ್ಣ 14.00, ರಂಜಕ 28.00, ಕಬ್ಬಿಣ 1.4, ನಯಾಸಿನ್ 0.4, ಸಿ ಜೀವಸತ್ವ 8.0, ಪೊಟ್ಯಾಷಿಯಂ 14.90, ಸೋಡಿಯಂ 7.0, ಬಿ ಜೀವಸತ್ವ 28.00, ಕ್ಲೋರಿನ್ 5.60, ಗಂಧಕ 5.90ಮಿ.ಗ್ರಾಂ ಇರುವುದನ್ನು ನಾವು ಕಾಣಬಹುದಾಗಿದೆ.

 

Advertisement
Tags :
cucumberhealthtipsLatestNewsNewsKannada
Advertisement
Next Article