ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೇಜ್ರಿವಾಲ್ ವಿರುದ್ಧ ಇಡಿ ಮತ್ತೊಂದು ಸಮರ

ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಮನ್ಸ್ ಅನುಪಾಲಿಸದ ಕಾರಣ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದೆಹಲಿಯ ನ್ಯಾಯಾಲಯದ ಮೆಟ್ಟಿಲೇರಿದೆ.
09:12 AM Feb 04, 2024 IST | Ashitha S
ನವದೆಹಲಿ: ದೆಹಲಿ ಅಬಕಾರಿ ನೀತಿ ಪ್ರಕರಣದಲ್ಲಿ ಸಮನ್ಸ್ ಅನುಪಾಲಿಸದ ಕಾರಣ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ದೆಹಲಿಯ ನ್ಯಾಯಾಲಯದ ಮೆಟ್ಟಿಲೇರಿದೆ.
Advertisement

ಸಮನ್ಸ್, ದಾಖಲೆಗಳ ಸಲ್ಲಿಕೆ ಇತ್ಯಾದಿಗಳಿಗೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯಕ್ಕೆ ಅಧಿಕಾರ ನೀಡಿರುವ ಅಕ್ರಮ ಹಣ ವರ್ಗಾವಣೆ ಕಾಯಿದೆಯ ಸೆಕ್ಷನ್ 50 ಅನುಸರಣೆ ಮಾಡದ ಹಿನ್ನೆಲೆಯಲ್ಲಿ ಇ ಡಿ ಪ್ರಕರಣ ದಾಖಲಿಸಿದೆ. ಈ ಪ್ರಕರಣದ ವಿಚಾರಣೆಯನ್ನು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟನ್ ಮ್ಯಾಜಿಸ್ಟ್ರೇಟ್ ದಿವ್ಯಾ ಮಲ್ಹೋತ್ರಾ ಇಂದು ನಡೆಸಿದರು. ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಹಾಜರಾಗಿ ಜಾರಿ ನಿರ್ದೇಶನಾಲಯದ ಪರವಾಗಿ ವಾದ ಮಂಡಿಸಿದರು. ನ್ಯಾಯಾಲಯವು ಈ ವಿಷಯವನ್ನು ಫೆಬ್ರವರಿ 7ರಂದು ಹೆಚ್ಚಿನ ಪರಿಗಣನೆಗೆ ಇರಿಸಿದೆ.

ಹಗರಣದ ತನಿಖೆಗೆ ಸಂಬಂಧಿಸಿದಂತೆ ಕೇಜ್ರಿವಾಲ್ ಅವರಿಗೆ ವಿವಿಧ ದಿನಾಂಕಗಳಲ್ಲಿ ಐದು ಸಮನ್ಸ್ ನೀಡಿದ್ದರೂ ಕೇಂದ್ರ ಏಜೆನ್ಸಿಯ ಮುಂದೆ ಹಾಜರಾಗಿಲ್ಲ. ಆಮ್ ಆದ್ಮಿ ಪಕ್ಷದ (ಎಎಪಿ) ಹಿರಿಯ ನಾಯಕರಾದ ಮನೀಶ್ ಸಿಸೋಡಿಯಾ ಮತ್ತು ಸಂಜಯ್ ಸಿಂಗ್ ಈಗಾಗಲೇ ಇದೇ ಪ್ರಕರಣದಲ್ಲಿ ಬಂಧನದಲ್ಲಿದ್ದಾರೆ. ಇಡಿ ಹೊರಡಿಸಿದ ಸಮನ್ಸ್ ಅನ್ನು "ರಾಜಕೀಯ ಪ್ರೇರಿತ" ಎಂದು ಎಎಪಿ ಕರೆದಿದ್ದು, ತನಿಖಾ ಸಂಸ್ಥೆಯು ಮುಖ್ಯಮಂತ್ರಿಯವರನ್ನು ಬಂಧಿಸಲು ಯೋಜಿಸುತ್ತಿದೆ ಎಂದು ಆರೋಪಿಸಿದೆ.
2023ರಲ್ಲಿ ನವೆಂಬರ್ 2, ಡಿಸೆಂಬರ್ 21 ಹಾಗೂ 2024ರಲ್ಲಿ ಜನವರಿ 3, ಜನವರಿ 18, ಫೆಬ್ರವರಿ 2 ರಂದು ವಿಚಾರಣೆಗೆ ಹಾಜರಾಗುವಂತೆ ಇಡಿ ನೋಟಿಸ್ ನೀಡಿತ್ತು. ಆದರೆ ಕೇಜ್ರಿವಾಲ್ ಮಾತ್ರ ವಿಚಾರಣೆಗೆ ಹಾಜರಾಗಿಲ್ಲ.

Advertisement

Advertisement
Tags :
GOVERNMENTindiaLatestNewsNewsKannadaಕೇಜ್ರಿವಾಲ್‌
Advertisement
Next Article