For the best experience, open
https://m.newskannada.com
on your mobile browser.
Advertisement

ನಿರ್ದೇಶಕಿ ಏಕ್ತಾ ಕಪೂರ್ ಗೆ ಒಲಿದ ಎಮ್ಮಿ ಅವಾರ್ಡ್ಸ್

ನ್ಯೂಯಾರ್ಕ್​: 51 ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭ ನ್ಯೂಯಾರ್ಕ್ ನಗರದಲ್ಲಿ ಅದ್ದೂರಿಯಾಗಿ ನಡೆದಿದ್ದು, ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕಿ ಹಾಗೂ ನಿರ್ದೇಶಕಿಯೂ ಆದ ಏಕ್ತಾ ಕಪೂರ್ ಅವರು ಎಮ್ಮಿ ಅವಾರ್ಡ್​ ಸ್ವೀಕರಿಸುವ ಮೂಲಕ ಇತಿಹಾಸವೊಂದನ್ನು ಸೃಷ್ಟಿಸಿದ್ದು, ಇದೀಗ ಅಪಾರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
12:27 PM Nov 21, 2023 IST | Ashitha S
ನಿರ್ದೇಶಕಿ ಏಕ್ತಾ ಕಪೂರ್ ಗೆ ಒಲಿದ ಎಮ್ಮಿ ಅವಾರ್ಡ್ಸ್

ನ್ಯೂಯಾರ್ಕ್​: 51 ನೇ ಅಂತಾರಾಷ್ಟ್ರೀಯ ಎಮ್ಮಿ ಪ್ರಶಸ್ತಿ ಸಮಾರಂಭ ನ್ಯೂಯಾರ್ಕ್ ನಗರದಲ್ಲಿ ಅದ್ದೂರಿಯಾಗಿ ನಡೆದಿದ್ದು, ಭಾರತೀಯ ಚಿತ್ರರಂಗದ ಪ್ರಸಿದ್ಧ ನಿರ್ಮಾಪಕಿ ಹಾಗೂ ನಿರ್ದೇಶಕಿಯೂ ಆದ ಏಕ್ತಾ ಕಪೂರ್ ಅವರು ಎಮ್ಮಿ ಅವಾರ್ಡ್​ ಸ್ವೀಕರಿಸುವ ಮೂಲಕ ಇತಿಹಾಸವೊಂದನ್ನು ಸೃಷ್ಟಿಸಿದ್ದಾರೆ.

Advertisement

ಮನರಂಜನಾ ಉದ್ಯಮಕ್ಕೆ ನೀಡಿದ ಮಹತ್ವದ ಕೊಡುಗೆಗಳಿಗಾಗಿ ಬಾಲಿವುಡ್ ನಿರ್ಮಾಪಕಿಗೆ ಅಂತಾರಾಷ್ಟ್ರೀಯ ಎಮ್ಮಿ ನಿರ್ದೇಶನಾಲಯ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಎಮ್ಮಿ ಅವಾರ್ಡ್ಸ್ 2023ರ ಸಮಾರಂಭದಲ್ಲಿ ಪ್ರಶಸ್ತಿ ಗೆದ್ದು ಬೀಗಿದ ನಿರ್ದೇಶಕಿ ಏಕ್ತಾ ಕಪೂರ್​ ಅವರಿಗೆ ದೇಶವ್ಯಾಪಿ ಶ್ಲಾಘನೆ, ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ.

Advertisement

ಇನ್ನು ನೆಟ್​ಫ್ಲಿಕ್ಸ್​ನಲ್ಲಿ ಸ್ಟ್ರೀಮ್ ಆಗುತ್ತಿರುವ ವೀರ್ ದಾಸ್​ರ ಕಾಮಿಡಿ ಸ್ಪೆಷಲ್ ‘ವೀರ್ ದಾಸ್; ಲ್ಯಾಂಡಿಂಗ್’ ಎಮ್ಮಿಯ ಯೂನಿಕ್ ಕಾಮಿಡಿ ವಿಭಾಗದಲ್ಲಿ ಪ್ರಶಸ್ತಿ ಗೆದ್ದುಕೊಂಡಿದೆ.

Advertisement
Tags :
Advertisement