ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ರಾಷ್ಟ್ರಪತಿಗಳಿಗೆ ತಮಗೆ ದಯಾಮರಣ ನೀಡುವಂತೆ ಕೋರಿದ ವೃದ್ಧ ದಂಪತಿ: ಕಾರಣವಾದರೂ ಏನು?

ವ್ಯಕ್ತಿಯೋರ್ವರು ತಾವು ವಾಸಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೇ ನ್ಯಾಯಾಲಯದಿಂದ ಆದೇಶ ತಂದ ಹಿನ್ನೆಲೆಯಲ್ಲಿ ವೃದ್ಧ ದಂಪತಿಗಳಿಬ್ಬರು ತಮಗೆ ದಯಾಮರಣ ಕರುಣಿಸುವಂತೆ ತಹಶಿಲ್ದಾರ್ ಮೂಲಕ ದೇಶದ  ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ ವಿಲಕ್ಷಣ ಘಟನೆ ಕಡಬದಲ್ಲಿ ನಡೆದಿದೆ.
12:53 PM Feb 27, 2024 IST | Nisarga K
ರಾಷ್ಟ್ರಪತಿಗಳಿಗೆ ತಮಗೆ ದಯಾಮರಣ ನೀಡುವಂತೆ ಕೋರಿದ ವೃದ್ಧ ದಂಪತಿ: ಕಾರಣವಾದರೂ ಏನು?

ಕಡಬ: ವ್ಯಕ್ತಿಯೋರ್ವರು ತಾವು ವಾಸಿಸುತ್ತಿರುವ ಮನೆಯನ್ನು ತೆರವುಗೊಳಿಸುವಂತೇ ನ್ಯಾಯಾಲಯದಿಂದ ಆದೇಶ ತಂದ ಹಿನ್ನೆಲೆಯಲ್ಲಿ ವೃದ್ಧ ದಂಪತಿಗಳಿಬ್ಬರು ತಮಗೆ ದಯಾಮರಣ ಕರುಣಿಸುವಂತೆ ತಹಶಿಲ್ದಾರ್ ಮೂಲಕ ದೇಶದ  ರಾಷ್ಟ್ರಪತಿಗಳಿಗೆ ಅರ್ಜಿ ಸಲ್ಲಿಸಿದ ವಿಲಕ್ಷಣ ಘಟನೆ ಕಡಬದಲ್ಲಿ ನಡೆದಿದೆ.

Advertisement

ಇವರು ಮೂಲತಃ ಚಿತ್ರದುರ್ಗದವರಾಗಿದ್ದು ಉಪ್ಪಿನಂಗಡಿ ಹೋಬಳಿಯ ಕೌಕ್ರಾಡಿ ಗ್ರಾಮದ ಕಾಪಿನಬಾಗಿಲು ಎಂಬಲ್ಲಿ 6 ವರ್ಷದಿಂದ ವಾಸವಾಗಿದ್ದರು. ಇವರಿಗೆ ಯಾವುದೇ ಪಿತ್ರಾರ್ಜಿತವಾಗಿ ಯಾವುದೇ ಆಸ್ತಿ ಇಲ್ಲದ ಕಾರಣ ಅವರು ನೆಲೆಸಿರುವ ಜಾಗಕ್ಕೆ ಹಕ್ಕು ಪತ್ರ ನೀಡಬೇಕಾಗಿ ಅರ್ಜಿ ಸಲ್ಲಿಸಿದ್ದರು ಆದರೆ ಅದನ್ನು ಕಂದಾಯ ಅಧಿಕಾರಿಗಳು ತಿರಸ್ಕರಿಸಿದರು ಎನ್ನಲಾಗಿದೆ. ಹಾಗೂ ಅವರಿಗೆ ಮನೆ ಕಾಲಿ ಮಾಡುವಂತೆ ನೋಟೀಸ್ ಕೂಡ ನೀಡಲಾಗಿದೆ.

ಈ ಕಾರಣದಿಂದಾಗಿ ಬಡವರಾದ ಇವರು ಕಡಬ ತಹಶಿಲ್ದಾರ್ ಮೂಲಕ ದೇಶದ   ರಾಷ್ಟ್ರಪತಿಗಳಿಗೆ ದಯಾಮರಣಕ್ಕಾಗಿ ಮನವಿ ಮಾಡಿದ್ದೂ, ನಮ್ಮನ್ನು ಒಂದಾ ಈ ಸರ್ಕಾರಿ ಜಾಗದಲ್ಲಿ ತಾವು ನಿರ್ಮಿಸಿರುವ ಸಣ್ಣ ಮನೆಯಲ್ಲಿ ಜೀವನ ನಡೆಸಲು ಅವಕಾಶ ಕಲ್ಪಿಸಿಕೊಡಿ.ಅಥವಾ ಅದಕ್ಕೆ ಸಾಧ್ಯವಿಲ್ಲಾ ಎಂಬುದಾದರೆ ದಯಮಾಡಿ ವೃದ್ದರಾದ ನಮಗೆ ದಯಾಮರಣ ಅಥವಾ ಇನ್ಯಾವುದೇ ರೀತಿಯಲ್ಲಿ ಒಳ್ಳೆಯ ಮರಣಕ್ಕೆ ಅವಕಾಶವನ್ನು ನೀಡಬೇಕು ಎಂದು ಅರ್ಜಿ ನೀಡಿದ್ದಾರೆ.

Advertisement

ಈ ಬಗ್ಗೆ ಪ್ರತಿಕ್ರಿಯೆ ನೀಡಿದ ಕಡಬ ತಹಶಿಲ್ದಾರ್ ಪ್ರಭಾಕರ್ ಖಜೂರೆ ಅವರು ಕೂಡಲೇ ಪರಿಶೀಲನೆ ನಡೆಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳುವ ಭರವಸೆಯನ್ನು ನೀಡಿದ್ದಾರೆ.

Advertisement
Tags :
elderlycoupleeuthunasiaGOVERNMENTindiaNewsKannadaPRESIDENTREQUESTಮಂಗಳೂರು
Advertisement
Next Article