For the best experience, open
https://m.newskannada.com
on your mobile browser.
Advertisement

ಮಾನವೀಯತೆ ಇನ್ನೂ ಬದುಕುಳಿದಿದೆಯೆಂದು ಸಾಬೀತುಪಡಿಸಿದ ದಂಪತಿ: ವೀಡಿಯೋ ವೈರಲ್

ರಸ್ತೆ ಬದಿಯಲ್ಲಿ ಸಾಮಾನ್ಯವಾಗಿ ಕಾಣಸಿಗುವ ನಿರ್ಗತಿಕರತ್ತ ಜನ ಗಮನಹರಿಸುವುದೇ ಕಡಿಮೆ. ಒಂದೊಮ್ಮೆ ಕಂಡರೂ ಮುಖ ಸಿಂಡರಿಸಿ ಮುಂದುವರಿಯುವುದನ್ನು ಸಾಮಾನ್ಯವಾಗಿ ಕಾಣಬಹುದು. ಹೀಗಿರುವ ಇಲ್ಲೊಂದು ದಂಪತಿ ಕೈಲಾಗದವರಿಗೆ ನೆರವಾಗಿ ಜನರಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.
07:42 PM Jan 19, 2024 IST | Maithri S
ಮಾನವೀಯತೆ ಇನ್ನೂ ಬದುಕುಳಿದಿದೆಯೆಂದು ಸಾಬೀತುಪಡಿಸಿದ ದಂಪತಿ  ವೀಡಿಯೋ ವೈರಲ್

ರಸ್ತೆ ಬದಿಯಲ್ಲಿ ಸಾಮಾನ್ಯವಾಗಿ ಕಾಣಸಿಗುವ ನಿರ್ಗತಿಕರತ್ತ ಜನ ಗಮನಹರಿಸುವುದೇ ಕಡಿಮೆ. ಒಂದೊಮ್ಮೆ ಕಂಡರೂ ಮುಖ ಸಿಂಡರಿಸಿ ಮುಂದುವರಿಯುವುದನ್ನು ಸಾಮಾನ್ಯವಾಗಿ ಕಾಣಬಹುದು. ಹೀಗಿರುವ ಇಲ್ಲೊಂದು ದಂಪತಿ ಕೈಲಾಗದವರಿಗೆ ನೆರವಾಗಿ ಜನರಿಂದ ಮೆಚ್ಚುಗೆ ಗಳಿಸುತ್ತಿದ್ದಾರೆ.

Advertisement

ಬಾಲಿವುಡ್ ಕೊರಿಯೋಗ್ರಾಫರ್ ಹಾಗೂ ಡೈರೆಕ್ಟರ್ ರೆಮೋ ಡಿಸೋಜಾ ತಮ್ಮ ಇನ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡ ವೀಡಿಯೋ ತುಣುಕಿನಲ್ಲಿ ರಸ್ತೆ ಬದಿಯಲ್ಲಿರುವ ವೃದ್ಧೆಯೊಬ್ಬರಿಗೆ ದಂಪತಿಗಳು ಸಹಾಯ ಮಾಡಿ ಆಶೀರ್ವಾದ ಪಡೆಯುತ್ತಿರುವುದನ್ನು ಕಾಣಬಹುದು. ʼಅವರಿಬ್ಬರು ಯಾರು ಎಂದು ನನಗೆ ತಿಳಿದಿಲ್ಲ. ಆದರೆ ಅವರ ಒಳ್ಳೆಯ ಗುಣವನ್ನು ಮೆಚ್ಚಿ ಈ ವೀಡಿಯೋ ಹಂಚಿಕೊಳ್ಳುತ್ತಿದ್ದೇನೆ. ದಯೆಯ ಸಣ್ಣ ಕೆಲಸ ಅತಿ ಶ್ರೇಷ್ಠವಾದುದು. ತೋರಿಕೆಗಾಗಿ ಬದುಕುವ ಜನರ ನಡುವೆ ಒಳ್ಳೆಯತನವನ್ನು ನಂಬುವ ಜನರಾಗಿ. ಇದು ತುಂಬಾ ಪರಿಣಾಮಕಾರಿ ನಡೆʼ ಎಂದು ಅವರು ಬರೆದುಕೊಂಡಿದ್ದಾರೆ.

ವೀಡಿಯೋದಲ್ಲಿ ರಸ್ತೆ ಬದಿ ನಿಂತಿರುವ ಒಬ್ಬ ವೃದ್ಧೆಯ ಬಳಿ ನಡೆದುಹೋಗುವ ದಂಪತಿ, ಆಕೆಗೆ ಕೊಂಚ ಕಾಸು ಕೊಟ್ಟು, ನಂತರ ಪಾದ ಮುಟ್ಟಿ ನಮಸ್ಕರಿಸುವುದನ್ನು ಕಾಣಬಹುದು. ಲಕ್ಷಾಂತರ ಲೈಕ್ಸ್ ಗಳಿಸಿರುವ ಈ ವೀಡಿಯೋಗೆ ಪ್ರತಿಕ್ರಿಯಿಸಿದ ಜನ, ʼಈ ದಂಪತಿ ಮಾಡಿದ ಸಹಾಯ ತೋರ್ಪಡಿಕೆಗೆ ಆಗಿರಲಿಲ್ಲ. ಇವರಲ್ಲಿ ನಿಜವಾದ ಮಾನವೀಯ ಗುಣವಿದೆʼ ಎಂದಿದ್ದಾರೆ.

Advertisement

Advertisement
Tags :
Advertisement