ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಇಟಲಿ ಅಧ್ಯಕ್ಷರನ್ನು ಭೇಟಿಯಾದ ವಿದೇಶಾಂಗ ಸಚಿವ ಜೈಶಂಕರ್

ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇಟಲಿ ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾ ಅವರನ್ನು ರೋಮ್‌ನಲ್ಲಿ ಭೇಟಿ ಮಾಡಿ ರಕ್ಷಣೆ, ಸೈಬರ್ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ ನಡೆಸಿದರು.
02:58 PM Nov 04, 2023 IST | Ashika S

ನವದೆಹಲಿ: ವಿದೇಶಾಂಗ ಸಚಿವ ಎಸ್. ಜೈಶಂಕರ್ ಅವರು ಇಟಲಿ ಅಧ್ಯಕ್ಷ ಸೆರ್ಗಿಯೋ ಮಟ್ಟರೆಲ್ಲಾ ಅವರನ್ನು ರೋಮ್‌ನಲ್ಲಿ ಭೇಟಿ ಮಾಡಿ ರಕ್ಷಣೆ, ಸೈಬರ್ ಭದ್ರತೆ ಮತ್ತು ಭಯೋತ್ಪಾದನೆ ನಿಗ್ರಹದಂತಹ ಕ್ಷೇತ್ರಗಳಲ್ಲಿ ದ್ವಿಪಕ್ಷೀಯ ಕಾರ್ಯತಂತ್ರದ ಪಾಲುದಾರಿಕೆ ಕುರಿತು ಚರ್ಚೆ ನಡೆಸಿದರು.

Advertisement

ಇಟಾಲಿಯ ಪ್ರತಿನಿಧಿ ಆಂಟೋನಿಯೊ ತಜಾನಿ ಅವರ ಆಹ್ವಾನದ ಮೇರೆಗೆ ರೋಮ್‌ಗೆ ಜೈಶಂಕರ್‌ ಭೇಟಿ ನೀಡಿದ್ದಾರೆ. ‌ ಇಟಲಿ ರಕ್ಷಣಾ ಸಚಿವ ಗಿಡೋ ಕ್ರೊಸೆಟ್ಟೊ ಅವರನ್ನು ಕೂಡ ಭೇಟಿಯಾಗಿದ್ದಾರೆ. ರಕ್ಷಣಾ ಉತ್ಪಾದನೆಯಲ್ಲಿ ಸಹಯೋಗ ಸೇರಿದಂತೆ ಮತ್ತು ಭಯೋತ್ಪಾದನೆ ನಿಗ್ರಹ, ಸೈಬರ್ ಭದ್ರತೆ ಮತ್ತು ಸಮುದ್ರ ರಕ್ಷಣೆ ಕ್ಷೇತ್ರಗಳಲ್ಲಿ ಪರಸ್ಪರ ಸಹಕಾರ ಒದಗಿಸುವ ಕುರಿತು ಮಾತುಕತೆ ನಡೆದಿದೆ.

ಕೃಷಿ ತಂತ್ರಜ್ಞಾನ, ಎಂಜಿನಿಯರಿಂಗ್, ಡಿಜಿಟಲ್ ಮೂಲಸೌಕರ್ಯ ಕ್ಷೇತ್ರಗಳಲ್ಲಿ ಹೂಡಿಕೆ ಕುರಿತು ವಿವಿಧ ಚರ್ಚೆಗಳು ನಡೆದಿದೆ ಎಂದು ಎಂಇಎ ಪ್ರಕಟಣೆ ಹೇಳಿದೆ.

Advertisement

Advertisement
Tags :
LatetsNewsNewsKannadaಎಸ್.ಜೈಶಂಕರ್ದ್ವಿಪಕ್ಷೀಯ ಕಾರ್ಯತಂತ್ರವಿದೇಶಾಂಗ ಸಚಿವಸೈಬರ್ ಭದ್ರತೆ
Advertisement
Next Article