ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

3 ದಿನ ಕಳೆದರೂ 100 ಕೋಟಿ ರೂಪಾಯಿ ಗಡಿ ದಾಟದ ‘ಫೈಟರ್​’

ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಅವರು ಜೋಡಿಯಾಗಿ ನಟಿಸಿದ ‘ಫೈಟರ್​’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡದಿದ್ದರೂ ಕೂಡ ನಿರ್ಮಾಪಕರು ಖುಷಿ ಆಗುವ ರೀತಿಯಲ್ಲಿ ‘ಫೈಟರ್​’ ಸಿನಿಮಾ ಗಳಿಕೆ ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಮೂರು ದಿನಕ್ಕೆ ಕಲೆಕ್ಷನ್​  93.40 ಕೋಟಿ ರೂಪಾಯಿ ಆಗಿದೆ.  
01:47 PM Jan 28, 2024 IST | Ashika S

ಮುಂಬೈ: ಗಣರಾಜ್ಯೋತ್ಸವದ ಪ್ರಯುಕ್ತ ಜನವರಿ 25ರಂದು ಹೃತಿಕ್​ ರೋಷನ್​ ಮತ್ತು ದೀಪಿಕಾ ಪಡುಕೋಣೆ ಅವರು ಜೋಡಿಯಾಗಿ ನಟಿಸಿದ ‘ಫೈಟರ್​’ ಸಿನಿಮಾ ನಿರೀಕ್ಷಿತ ಮಟ್ಟದಲ್ಲಿ ಕಲೆಕ್ಷನ್​ ಮಾಡದಿದ್ದರೂ ಕೂಡ ನಿರ್ಮಾಪಕರು ಖುಷಿ ಆಗುವ ರೀತಿಯಲ್ಲಿ ‘ಫೈಟರ್​’ ಸಿನಿಮಾ ಗಳಿಕೆ ಮಾಡುತ್ತಿದೆ. ಗಲ್ಲಾ ಪೆಟ್ಟಿಗೆಯಲ್ಲಿ ಮೂರು ದಿನಕ್ಕೆ ಕಲೆಕ್ಷನ್​  93.40 ಕೋಟಿ ರೂಪಾಯಿ ಆಗಿದೆ.

Advertisement

ಮೊದಲ ದಿನ ಅಂದರೆ, ಜನವರಿ 25ರಂದು ಈ ಸಿನಿಮಾ ಗಳಿಸಿದ್ದು 24.60 ಕೋಟಿ ರೂಪಾಯಿ. ಎರಡನೇ ದಿನವಾದ ಶುಕ್ರವಾರ (ಜನವರಿ 26) ಈ ಚಿತ್ರ 41.20 ಕೋಟಿ ರೂಪಾಯಿ ಕಲೆಕ್ಷನ್​ ಮಾಡಿತು. ಮೂರನೇ ದಿನ ಶನಿವಾರ (ಜ.27) ‘ಫೈಟರ್​’ ಸಿನಿಮಾ 27.60 ಕೋಟಿ ರೂಪಾಯಿ ಗಳಿಸಿದೆ.

2ನೇ ದಿನದ ಏರಿಕೆಯನ್ನು ಗಮನದಲ್ಲಿ ಇಟ್ಟುಕೊಂಡು, ಮೂರು ದಿನದಲ್ಲಿ ‘ಫೈಟರ್​’ ಚಿತ್ರದ ಕಲೆಕ್ಷನ್​ 100 ಕೋಟಿ ರೂಪಾಯಿ ಮೀರಲಿದೆ ಎಂದು ಅಂದಾಜಿಸಲಾಗಿತ್ತು. ಆದರೆ ಶನಿವಾರ ವೀಕೆಂಡ್​ ಇದ್ದರೂ ಕೂಡ ಕಲೆಕ್ಷನ್​ ಇಳಿಮುಖ ಆಯಿತು. 100 ಕೋಟಿ ರೂಪಾಯಿ ಗಡಿ ಮುಟ್ಟಲು ಈ ಸಿನಿಮಾಗೆ ಇನ್ನೂ 6.60 ಕೋಟಿ ರೂಪಾಯಿ ಬೇಕು. ನಾಲ್ಕನೇ ದಿನವಾದ ಇಂದು (ಜನವರಿ 28) ಅನಾಯಾಸವಾಗಿ ಈ ಸಿನಿಮಾ ನೂರು ಕೋಟಿ ರೂಪಾಯಿ ಕ್ಲಬ್​ ಸೇರಲಿದೆ.

Advertisement

ಅನಿಲ್​ ಕಪೂರ್​, ಕರಣ್​ ಸಿಂಗ್​ ಗ್ರೋವರ್​, ಅಕ್ಷಯ್​ ಒಬೆರಾಯ್​​ ಮುಂತಾದವರು ಈ ಸಿನಿಮಾದಲ್ಲಿ ನಟಿಸಿದ್ದಾರೆ.

Advertisement
Tags :
LatestNewsNewsKannadaಕಲೆಕ್ಷನ್ದೀಪಿಕಾ ಪಡುಕೋಣೆಫೈಟರ್ಸಿನಿಮಾಹೃತಿಕ್ ರೋಷನ್
Advertisement
Next Article