For the best experience, open
https://m.newskannada.com
on your mobile browser.
Advertisement

ಕರಾವಳಿಯಲ್ಲಿ ಮೋದಿ ರೋಡ್‌ ಶೋ ಪಕ್ಕದಲ್ಲೆ ಬೆಂಕಿ ಅವಘಡ

ಪ್ರಧಾನಿ ಮೋದಿ ಅವರ ರೋಡ್ ಶೋ ಪಕ್ಕದಲ್ಲಿ ಬೆಂಕಿ ಅವಘಡ ಸಂಭವಿಸ್ದುಘಟನೆ ಭಾನುವಾರ ರಾತ್ರಿ ನಡೆದಿದೆ. ನಗರದ ಭಾರತ್ ಮಾಲ್ ಪಕ್ಕದ ಔಷಧ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.
09:34 PM Apr 14, 2024 IST | Nisarga K
ಕರಾವಳಿಯಲ್ಲಿ ಮೋದಿ ರೋಡ್‌ ಶೋ ಪಕ್ಕದಲ್ಲೆ ಬೆಂಕಿ ಅವಘಡ
ಕರಾವಳಿಯಲ್ಲಿ ಮೋದಿ ರೋಡ್‌ ಶೋ ಪಕ್ಕದಲ್ಲೆ ಬೆಂಕಿ ಅವಘಡ

ಮಂಗಳೂರು: ಪ್ರಧಾನಿ ಮೋದಿ ಅವರ ರೋಡ್ ಶೋ ಪಕ್ಕದಲ್ಲಿ ಬೆಂಕಿ ಅವಘಡ ಸಂಭವಿಸ್ದುಘಟನೆ ಭಾನುವಾರ ರಾತ್ರಿ ನಡೆದಿದೆ. ನಗರದ ಭಾರತ್ ಮಾಲ್ ಪಕ್ಕದ ಔಷಧ ಗೋಡೌನ್‌ನಲ್ಲಿ ಬೆಂಕಿ ಕಾಣಿಸಿಕೊಂಡು ಆತಂಕದ ವಾತಾವರಣ ನಿರ್ಮಾಣವಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ದಳ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

Advertisement

ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣ ಮುಂಭಾಗದ ನರಸಿಂಹ ಪ್ರಸಾದ್ ಅವರ ಕಟ್ಟಡದಲ್ಲಿ ಬೆಂಕಿ ಕಾಣಿಸಿಕೊಂಡಿದೆ. ನರೇಂದ್ರ ಮೋದಿ ರೋಡ್ ಶೋ ನಡೆಯುತ್ತಿದ್ದ ಮಾರ್ಗದಿಂದ ಈ ಕಟ್ಟಡ ಕೇವಲ 50 ಮೀಟರ್ ಅಂತರದಲ್ಲಿದೆ. ನಾಯಕ್ ಹೆಲ್ತ್ ಕೇರ್ ಗೋಡೌನ್‌ನಲ್ಲಿ ಔಷಧ, ವೈದ್ಯಕೀಯ ಉಪಕರಣ ಸಂಗ್ರಹಿಸಲಾಗಿತ್ತು. ಸ್ಥಳಕ್ಕೆ ಎರಡು ಅಗ್ನಿಶಾಮಕ ವಾಹನಗಳಲ್ಲಿ ಸಿಬ್ಬಂದಿ ಧಾವಿಸಿ ಬೆಂಕಿ ನಂದಿಸುವ ಕಾರ್ಯ ಮಾಡುತ್ತಿದ್ದಾರೆ.

Advertisement
Advertisement
Tags :
Advertisement