For the best experience, open
https://m.newskannada.com
on your mobile browser.
Advertisement

‘ಸ್ವತಂತ್ರ ವೀರ್ ಸಾವರ್ಕರ್' ಮೊದಲ ದಿನದ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು?

ಈ ವಾರ  ಹಿಂದಿ ಮತ್ತು ಮರಾಠಿಯಲ್ಲಿ ಭಾಷೆಯಲ್ಲಿ ತೆರೆಗೆ ಬಂದ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳ ಪೈಕಿ ‘ಸ್ವತಂತ್ರ ವೀರ್ ಸಾವರ್ಕರ್’ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.
05:53 PM Mar 23, 2024 IST | Ashika S
‘ಸ್ವತಂತ್ರ ವೀರ್ ಸಾವರ್ಕರ್  ಮೊದಲ ದಿನದ ಬಾಕ್ಸ್‌ ಆಫೀಸ್‌ ಗಳಿಕೆ ಎಷ್ಟು

ಮುಂಬೈ: ಈ ವಾರ  ಹಿಂದಿ ಮತ್ತು ಮರಾಠಿಯಲ್ಲಿ ಭಾಷೆಯಲ್ಲಿ ತೆರೆಗೆ ಬಂದ ಬಾಲಿವುಡ್‌ನ ಬಹು ನಿರೀಕ್ಷಿತ ಚಿತ್ರಗಳ ಪೈಕಿ ‘ಸ್ವತಂತ್ರ ವೀರ್ ಸಾವರ್ಕರ್’ ಮೊದಲ ದಿನ ಬಾಕ್ಸ್‌ ಆಫೀಸ್‌ನಲ್ಲಿ ಗಳಿಸಿದ್ದೆಷ್ಟು? ನಿಮ್ಮ ಕುತೂಹಲಕ್ಕೆ ಇಲ್ಲಿದೆ ಉತ್ತರ.

Advertisement

ಸ್ವಾತಂತ್ರ್ಯ ಹೋರಾಟಗಾರ ವಿನಾಯಕ್​ ದಾಮೋದರ್​ ಸಾವರ್ಕರ್​  ಅವರ ಜೀವನದ ಮೇಲೆ ಬೆಳಕು ಚೆಲ್ಲುವ ಈ ಚಿತ್ರವನ್ನು ಬಾಲಿವುಡ್‌ ನಟ ರಣದೀಪ್ ಹೂಡಾ  ನಿರ್ದೇಶಿಸುವ ಜತೆಗೆ ನಾಯಕನಾಗಿಯೂ ಅಭಿನಯಿಸಿದ್ದಾರೆ.

ಸಿನಿಮಾ ಮೊದಲ ದಿನ ಗಲ್ಲಾ ಪಟ್ಟಿಗೆಯಲ್ಲಿ ಸಾಧಾರಣ ಗಳಿಕೆ ಕಾಣುವ ಮೂಲಕ ನಿರಾಸೆ ಮೂಡಿಸಿದೆ. ಶುಕ್ರವಾರ ಕೇವಲ 1.15 ಕೋಟಿ ರೂಪಾಯಿ ಕಲೆಕ್ಷನ್ ಮಾಡಿದೆ ಎಂದು ವರದಿಯೊಂದು ತಿಳಿಸಿದೆ.

Advertisement

ಶನಿವಾರ (ಮಾರ್ಚ್ 23) ಮತ್ತು ಭಾನುವಾರ (ಮಾರ್ಚ 24) ರಜೆಯ ಕಾರಣ ಕಲೆಕ್ಷನ್ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಚಿತ್ರತಂಡ ಅಭಿಪ್ರಾಯ ಪಟ್ಟಿದೆ. ಜತೆಗೆ ಮಾರ್ಚ್ 25ರಂದು ಹೋಳಿಯ ಕಾರಣಕ್ಕೆ ರಜೆ ಇರುವುದರಿಂದ ಅಂದೂ ಹೆಚ್ಚಿನ ಗಳಿಕೆ ದಾಖಲಿಸುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಅಂಕಿತಾ ಲೋಖಂಡೆ, ಅಮಿತ್‌ ಸಿಯಾಲ್‌, ರಾಕೇಶ್‌ ಚತುರ್ವೇದಿ, ಲೋಕೇಶ್‌ ಮಿತ್ತಲ್‌ ಮತ್ತಿತರರು ಮುಖ್ಯ ಪಾತ್ರಗಳಲ್ಲಿ ನಟಿಸಿದ್ದಾರೆ.

ವಿನಾಯಕ್​ ದಾಮೋದರ್​ ಸಾವರ್ಕರ್​ ಪಾತ್ರ ನಿರ್ವಹಿಸಲು ರಣದೀಪ್‌ ಹೂಡಾ ಸುಮಾರು 30 ಕೆಜಿ ಕಳೆದುಕೊಳ್ಳುವ ಮೂಲಕ ಗಮನ ಸೆಳೆದಿದ್ದರು.

Advertisement
Tags :
Advertisement