ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಫ್ರಾನ್ಸ್​ ವಶದಲ್ಲಿದ್ದ ಭಾರತೀಯ ಪ್ರಯಾಣಿಕರಿದ್ದ ವಿಮಾನ ಮುಂಬೈಗೆ ವಾಪಸ್

ಮಾನವ ಕಳ್ಳಸಾಗಣೆ ಆರೋಪದ ಮೇಲೆ ಪ್ಯಾರಿಸ್ ವಶದಲ್ಲಿದ್ದ ಸುಮಾರು 270 ಭಾರತೀಯ ಪ್ರಯಾಣಿಕರೊಂದಿಗೆ ಬಂಧನಕ್ಕೊಳಗಾಗಿದ್ದ ವಿಮಾನ ಮಂಗಳವಾರ ಮುಂಜಾನೆ ಮುಂಬೈಗೆ ಬಂದಿಳಿದಿದೆ.
08:28 AM Dec 26, 2023 IST | Ramya Bolantoor

ಮುಂಬೈ:  ಮಾನವ ಕಳ್ಳಸಾಗಣೆ ಆರೋಪದ ಮೇಲೆ ಪ್ಯಾರಿಸ್ ವಶದಲ್ಲಿದ್ದ ಸುಮಾರು 270 ಭಾರತೀಯ ಪ್ರಯಾಣಿಕರೊಂದಿಗೆ ಬಂಧನಕ್ಕೊಳಗಾಗಿದ್ದ ವಿಮಾನ ಮಂಗಳವಾರ ಮುಂಜಾನೆ ಮುಂಬೈಗೆ ಬಂದಿಳಿದಿದೆ.

Advertisement

ಮಾನವ ಕಳ್ಳಸಾಗಣೆ ಶಂಕೆಯ ಮೇರೆಗೆ ಪ್ಯಾರಿಸ್ ಸಮೀಪದ ವತ್ರಿ ವಿಮಾನ ನಿಲ್ದಾಣದಲ್ಲಿ ನಾಲ್ಕು ದಿನಗಳ ಕಾಲ ನಿಲ್ಲಿಸಲಾಗಿತು.

ಈ ವಿಮಾನವು ಸೋಮವಾರ ಮಧ್ಯಾಹ್ನ 2:20 ಕ್ಕೆ ಮುಂಬೈ ತಲುಪಬೇಕಾಗಿತ್ತು, ಆದರೆ ಅದು ತಡವಾಯಿತು. ವಿಮಾನದಲ್ಲಿದ್ದ 50 ಪ್ರಯಾಣಿಕರು ಫ್ರಾನ್ಸ್‌ನಲ್ಲಿ ಆಶ್ರಯಕ್ಕಾಗಿ ಅರ್ಜಿ ಸಲ್ಲಿಸಿದ ಕಾರಣ ಹಿಂತಿರುಗಲು ಬಯಸುವುದಿಲ್ಲ ಎಂದು ಹೇಳಲಾಗಿದೆ. ನಂತರ ಕೆಲವು ಪ್ರಯಾಣಿಕರನ್ನು ಬಿಟ್ಟು ವಿಮಾನ ಮುಂಬೈಗೆ ಹೊರಟಿತು. ಆದರೆ, ವಿಮಾನದಲ್ಲಿ ಎಷ್ಟು ಪ್ರಯಾಣಿಕರಿದ್ದಾರೆ ಎಂದು ಮಾಹಿತಿ ಲಭ್ಯವಾಗಿಲ್ಲ.

Advertisement

ರೊಮೇನಿಯಾದ ಲೆಜೆಂಡ್ ಏರ್‌ಲೈನ್ಸ್‌ನ ಈ ವಿಮಾನವು 303 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿತ್ತು.  ಅವರಲ್ಲಿ ಹೆಚ್ಚಿನವರು ಭಾರತೀಯರಾಗಿದ್ದರು. ಈ  ವಿಮಾನವು ದುಬೈನಿಂದ ನಿಕರಾಗುವಾಗೆ ಹೊರಟು ತೈಲ ತುಂಬಲು ಫ್ರಾನ್ಸ್‌ನ ವತ್ರಿ ವಿಮಾನ ನಿಲ್ದಾಣದಲ್ಲಿ ಗುರುವಾರ ಬಂದಿಳಿದಿತ್ತು. ಈ ಸಮಯದಲ್ಲಿ, ಮಾನವ ಕಳ್ಳಸಾಗಣೆಯ ಬಲಿಪಶುಗಳನ್ನು ಅದರಲ್ಲಿ ಸಾಗಿಸಲಾಗುತ್ತಿದೆ ಅಧಿಕಾರಿಗಳಿಗೆ ಮಾಹಿತಿ ಮೇರೆಗೆ ವಿಮಾನವನ್ನು ಟೇಕ್ ಆಫ್ ಮಾಡುವುದನ್ನು ತಡೆಹಿಡಿಯಲಾಯಿತು. ವಿಚಾರಣೆ ನಡೆಸಿದ ಬಳಿಕ ಫ್ರೆಂಚ್ ಅಧಿಕಾರಿಗಳು ಈ A340 ವಿಮಾನಕ್ಕೆ ಪ್ರಯಾಣವನ್ನು ಪುನರಾರಂಭಿಸಲು ಅನುಮತಿಯನ್ನು ನೀಡಿದ್ದರು.

Advertisement
Tags :
FLIGHTLatestNewsNewsKannadaಮುಂಬೈ
Advertisement
Next Article