ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕುಪ್ಪೆಪದವು ನೆಲ್ಲಿಜೋರ ಎಂಬಲ್ಲಿ ಸ್ಥಳೀಯರ ನಿದ್ದೆಗೆಡಿಸಿದ್ದ ಕೋತಿ ಕೊನೆಗೂ ಸೆರೆ

ಕುಪ್ಪೆಪದವು ನೆಲ್ಲಿಜೋರ ಎಂಬಲ್ಲಿ ಸ್ಥಳೀಯರ ನಿದ್ದೆಗೆಡಿಸಿದ್ದ ಕೋತಿಯೊಂದನ್ನು ಅರಣ್ಯ ಇಲಾಖೆ ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
11:13 PM Jan 09, 2024 IST | Gayathri SG

ಮಂಗಳೂರು: ಕುಪ್ಪೆಪದವು ನೆಲ್ಲಿಜೋರ ಎಂಬಲ್ಲಿ ಸ್ಥಳೀಯರ ನಿದ್ದೆಗೆಡಿಸಿದ್ದ ಕೋತಿಯೊಂದನ್ನು ಅರಣ್ಯ ಇಲಾಖೆ ಕೊನೆಗೂ ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ. ಹೌದು. ಇಲ್ಲಿಯ ಪ್ರದೇಶದಲ್ಲಿ ಕೋತಿಯೊಂದು ಕಳೆದೆರಡು ತಿಂಗಳಿನಿಂದ ಸ್ಥಳೀಯರ ನಿದ್ದೆಗೆಡಿಸಿತ್ತು. ಅಷ್ಟೇ ಅಲ್ಲದೆ ಮಹಿಳೆಯೊಬ್ಬರ ಮೇಲೆ ದಾಳಿ ನಡೆಸಿದ್ದು ಬರೋಬ್ಬರಿ 22 ಸ್ಟಿಚ್ಚ್‌ ಹಾಕಲಾಗಿತ್ತು. ಈ ಹಿಂದೆ ಹಲವರಿಗೆ ಇದೇ ಕೋತಿ ಕಚ್ಚಿ ಗಾಯಗೊಳಿಸಿದೆ.

Advertisement

ಈ ಕೋತಿ ಕಾದು ಕೂತು ತೊಂದರೆ ನೀಡುತ್ತಿತ್ತು. ಹೀಗಾಗಿ ಸ್ಥಳೀಯರು ಮನೆಯಿಂದ ಹೊರಬರಲು ಹೆದರುತ್ತಿದ್ದರು. ಅರಣ್ಯ ಇಲಾಖೆಗೆ ಇದರ ಬಗ್ಗೆ ಮಾಹಿತಿ ನೀಡಿದರು ಪ್ರಯೋಜನವಾಗಿರಲಿಲ್ಲ. ಬಳಿಕ ಈ ಕುರಿತಂತೆ ಸ್ಥಳೀಯರ ಸಮಸ್ಯೆಯನ್ನು ಆಲಿಸಿ "ನ್ಯೂಸ್‌ ಕನ್ನಡ" ವರದಿ ಬಿತ್ತರಿಸಿತ್ತು. ಇದರಿಂದ ಎಚ್ಚೆತ್ತ ಅರಣ್ಯ ಇಲಾಖೆ ಕೂಡಲೇ ಎಚ್ಚೆತ್ತು ಬೋನು ಇರಿಸಿ ಒಂಟಿ ಮಂಗನನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದ್ದಾರೆ. ಇದರಿಂದ ಸದ್ಯ ಸ್ಥಳೀಯರು ನಿಟ್ಟುಸಿರು ಬಿಡುವಂತಾಗಿದೆ.

Advertisement

Advertisement
Tags :
BreakingNewsLatestNewsNewsKannadaಕೋತಿಮಂಗಳೂರು
Advertisement
Next Article