ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಚಲಿಸುವ ಕಾರಿನ ಕಿಟಕಿಗಳಲ್ಲಿ ಡ್ಯಾನ್ಸ್‌ ನಾಲ್ವರು ಕೇರಳಿಗರ ಸೆರೆ

ಬೆಂಗಳೂರು ನಗರದಲ್ಲಿ ವೀಕೆಂಡ್‌ಗಳಲ್ಲಿ ವೀಲ್ಹಿಂಗ್‌ ಅಬ್ಬರ ಹೆಚ್ಚಿರುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಡ್ಯಾನ್ಸ್ ಮಾಡಿ ಅವಾಂತರ ಸೃಷ್ಟಿಸಿದ್ದ ನಾಲ್ವರು ಮಲಯಾಳಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.
07:32 AM Dec 18, 2023 IST | Ashika S

ಬೆಂಗಳೂರು: ಬೆಂಗಳೂರು ನಗರದಲ್ಲಿ ವೀಕೆಂಡ್‌ಗಳಲ್ಲಿ ವೀಲ್ಹಿಂಗ್‌ ಅಬ್ಬರ ಹೆಚ್ಚಿರುತ್ತದೆ. ಅದೇ ರೀತಿ ಬೆಂಗಳೂರಿನಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ ಡ್ಯಾನ್ಸ್ ಮಾಡಿ ಅವಾಂತರ ಸೃಷ್ಟಿಸಿದ್ದ ನಾಲ್ವರು ಮಲಯಾಳಿಗಳನ್ನು ಬೆಂಗಳೂರು ಪೊಲೀಸರು ಬಂಧಿಸಿದ್ದಾರೆ.

Advertisement

ಬಂಧಿತರನ್ನು ಮಲಪ್ಪುರಂ ಮೂಲದ ಸಲ್ಮಾನ್ ಫಾರಿಸ್, ನಸೀಮ್ ಅಬ್ಬಾಸ್ (21), ಸಲ್ಮಾನುಲ್ ಫಾರಿಸ್ (21) ಮತ್ತು ಮುಹಮ್ಮದ್ ನುಸೈಫ್ (21) ಎಂದು ಗುರುತಿಸಲಾಗಿದೆ.

ಕಳೆದ ಗುರುವಾರ ಈ ಘಟನೆ ನಡೆದಿತ್ತು. ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ ಕಡೆಗೆ ಎಕ್ಸ್‌ಪ್ರೆಸ್‌ವೇಯಲ್ಲಿ ಚಾಲನೆ ಮಾಡುವಾಗ, ಯುವಕ ಗುಂಪೊಂದು ತಮ್ಮ ಕಾರಿನ ಸನ್‌ರೂಫ್ ಮತ್ತು ಕಿಟಕಿಗಳ ಮೂಲಕ ನೃತ್ಯ ಮಾಡುವ ಮೂಲಕ ಇತರೆ ವಾಹನ ಸವಾರರಿಗೆ ತೊಂದರೆ ನೀಡಿದ್ದರು.

Advertisement

ನಂತರ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಘಟನೆ ನಡೆದ ದಿನ ಸ್ನೇಹಿತರನ್ನು ಭೇಟಿಯಾಗಲು ಸಲ್ಮಾನ್ ಫಾರಿಸ್ ಬೆಂಗಳೂರಿಗೆ ಬಂದಿದ್ದರು. ಪೊಲೀಸರ ಪ್ರಕಾರ, ಆತ ದೆಹಲಿಯಲ್ಲಿ ತನ್ನ ತಂದೆ ಖರೀದಿಸಿದ ಬಳಸಿದ ಕಾರಿನಲ್ಲಿ ಬೆಂಗಳೂರಿಗೆ ಬಂದಿದ್ದಾನೆ. ವಿಮಾನ ನಿಲ್ದಾಣಕ್ಕೆ ಜಾಯ್ ರೈಡ್‌ಗಾಗಿ ಹೋಗಿದ್ದೆವು ಎಂದು ಆರೋಪಿಗಳು ಒಪ್ಪಿಕೊಂಡಿದ್ದಾರೆ.

Advertisement
Tags :
LatetsNewsNewsKannadaಅವಾಂತರಡ್ಯಾನ್ಸ್ಮಲಯಾಳಿವೀಕೆಂಡ್ವೀಲ್ಹಿಂಗ್‌ಸೆರೆ
Advertisement
Next Article