For the best experience, open
https://m.newskannada.com
on your mobile browser.
Advertisement

ಜೊಸೆಫ್ ಮಥಾಯಸ್ ಸಾಧನೆಗೆ ಮತ್ತೊಂದು ಗರಿ: ಬಹುಮುಖ ಪ್ರತಿಭೆಗೆ ಗಡಿನಾಡ ರತ್ನ ಪ್ರಶಸ್ತಿ

ದುಬೈ: ಡಿಸೆಂಬರ್ 10 ರಂದು ದುಬಾಯಿಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕ ಆಯೋಜಿಸಿದ ದುಬಾಯ್ ಗಡಿನಾಡ ಉತ್ಸವ ದ್ವಿತೀಯ ವರ್ಷದ ಆವೃತ್ತಿಯಲ್ಲಿ ಅನಿವಾಸಿ ಉದ್ಯಮಿ, ಸಮಾಜ ಸೇವಕ, ಸಾಂಸ್ಕೃತಿಕ ಕಾರ್ಯಕರ್ತ, ಗಾಯಕ - ನಟ ಹಿಗೆ ಬಹುಮುಖ ಪ್ರತಿಭೆ ಜೋಸೆಪ್ ಮಥಾಯಸ್ ಇವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು 'ಗಡಿನಾಡ ರತ್ನ' ಪ್ರಶಸ್ತಿ ನೀಡಿ ಗೌರವಿಸಿದರು.
07:48 PM Dec 11, 2023 IST | Umesha HS
ಜೊಸೆಫ್ ಮಥಾಯಸ್ ಸಾಧನೆಗೆ ಮತ್ತೊಂದು ಗರಿ  ಬಹುಮುಖ ಪ್ರತಿಭೆಗೆ ಗಡಿನಾಡ ರತ್ನ ಪ್ರಶಸ್ತಿ

ದುಬೈ: ಡಿಸೆಂಬರ್ 10 ರಂದು ದುಬಾಯಿಯಲ್ಲಿ ಗಡಿನಾಡ ಸಾಹಿತ್ಯ ಸಾಂಸ್ಕೃತಿಕ ಅಕಾಡೆಮಿ ಯುಎಇ ಘಟಕ ಆಯೋಜಿಸಿದ ದುಬಾಯ್ ಗಡಿನಾಡ ಉತ್ಸವ ದ್ವಿತೀಯ ವರ್ಷದ ಆವೃತ್ತಿಯಲ್ಲಿ ಅನಿವಾಸಿ ಉದ್ಯಮಿ, ಸಮಾಜ ಸೇವಕ, ಸಾಂಸ್ಕೃತಿಕ ಕಾರ್ಯಕರ್ತ, ಗಾಯಕ - ನಟ ಹಿಗೆ ಬಹುಮುಖ ಪ್ರತಿಭೆ ಜೋಸೆಪ್ ಮಥಾಯಸ್ ಇವರನ್ನು ಕರ್ನಾಟಕ ವಿಧಾನ ಪರಿಷತ್ತಿನ ಸಭಾಪತಿ ಬಸವರಾಜ ಹೊರಟ್ಟಿಯವರು 'ಗಡಿನಾಡ ರತ್ನ' ಪ್ರಶಸ್ತಿ ನೀಡಿ ಗೌರವಿಸಿದರು.

Advertisement

ಮಾಜಿ ಮುಖ್ಯಮಂತ್ರಿ ಡಿ. ವಿ. ಸದಾನಂದ ಗೌಡ, ರಾಜ್ಯ ಸಭಾ ಸದಸ್ಯರಾದ ಡಾ. ಎಲ್. ಹನುಮಂತಯ್ಯ ಮತ್ತು ಮಂಜೇಶ್ವರ ಲೋಕಸಭಾ ಸದಸ್ಯರಾದ ಎ.ಕೆ.ಎಮ್. ಅಶ್ರಫ್ ಮುಖ್ಯ ಅತಿಥಿಗಳಾಗಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ವುಡ್‌ಲೆಮ್ ಪಾರ್ಕ್ ಶಾಲೆಯ ಸಭಾಗೃಹದಲ್ಲಿ ಸರ್ವೋತ್ತಮ ಶೆಟ್ಟಿ ಅಬುದಾಬಿ ಅವರ ಅಧ್ಯಕ್ಷತೆಯಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಜೋಸೆಫ್ ಮಥಾಯಸ್ ಇವರಿಗೆ ಸಮಾಜ ಸೇವೆ ಮತ್ತು ಸಮುದಾಯ ನೇತೃತ್ವ ಕ್ಷೇತ್ರದಲ್ಲಿ ಗಡಿನಾಡ ರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು.

ಮೂಲತಃ ಮಂಗಳೂರಿನ ಕುಪ್ಪೆಪದವು ನಿವಾಸಿಯಾಗಿರುವ ಜೋಸೆಫ್ ಮಥಾಯಸ್ ಅವರು ಮೆರಿಟ್ ಪ್ರೈಟ್ ಸಿಸ್ಟಮ್ಸ್ ಹೆಸರಿನಲ್ಲಿ ಗಲ್ಫ್ ರಾಷ್ಟ್ರಗಳು ಮತ್ತು ಭಾರತದಲ್ಲಿ ಉದ್ಯಮಶಾಖೆಗಳನ್ನು ಹೊಂದಿದ್ದು ಸಾಕಷ್ಟು ಜನರಿಗೆ ಉದ್ಯೋಗ ದಾತರರಾಗಿದ್ದಾರೆ. ಪ್ರತೀ ವರ್ಷ ಸ್ವಾತಂತ್ರೋತ್ಸವ ದಿನದಂದು ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅಶೋಕನಗರ ಯುವಕ ಸಂಘದ ಮೂಲಕ ಶಾಲಾ ಮಕ್ಕಳಿಗೆ ಸಮವಸ್ತ್ರ, ಹಿರಿಯ ನಾಗರಿಕರಿಗೆ ಸೀರೆ, ಧೋತಿ, ಸ್ವ ಉದ್ಯೋಗಿಗಳಿಗೆ ಸೈಕಲ್, ಹೊಲಿಗೆ ಯಂತ್ರ ಹಾಗೂ ಆಶಕ್ತ ವರ್ಗದವರಿಗೆ ವೈದ್ಯಕೀಯ ನೆರವನ್ನು ತಮ್ಮ ಮಾತಾ ಪಿತರ ಸ್ಮರಣಾರ್ಥ ಕಳೆದ ಒಂದೂವರೆ ದಶಕದಿಂದ ನೀಡುತ್ತಾ ಬಂದಿದ್ದಾರೆ.

Advertisement

ಸ್ವತಃ ಉತ್ತಮ ಗಾಯಕರೂ, ನಟರೂ ಆಗಿರುವ ಜೋಸೆಫ್ ಮಥಾಯಸ್ ದೇಶ ವಿದೇಶಗಳಲ್ಲಿ ನಡೆಯುವ ಕೊಂಕಣಿ, ಕನ್ನಡ, ತುಳು ಹೀಗೆ ಎಲ್ಲಾ ಭಾಷೆಯ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಪೋಷಕರಾಗಿ ನೆರವಿನ ಹಸ್ತ ನೀಡುತ್ತಲೇ ಬಂದಿದ್ದಾರೆ. ತಮ್ಮ ಪ್ರತಿಭೆ ಮತ್ತು ಸಮಾಜ ಸೇವೆಗಾಗಿ ಹತ್ತು ಹಲವು ಪ್ರಶಸ್ತಿ ಪುರಸ್ಕಾರಗಳಿಗೆ ಭಾಜನರಾಗಿರುವ ಜೋಸೆಫ್ ಮಥಾಯಸ್ ಅವರಿಗೆ ಶಾರ್ಜಾ ಕರ್ನಾಟಕ ಸಂಘ - ಮಯೂರ ಪ್ರಶಸ್ತಿ ಹಾಗೂ ಗಲ್ಫ್ ಕನ್ನಡಿಗರ ಸಂಘ – ವಿಶ್ವ ಕನ್ನಡಿಗ ಪ್ರಶಸ್ತಿ ನೀಡಿ ಗೌರವಿಸಿದೆ. ಪ್ರಸ್ತುತ ಜೋಸೆಫ್‌ ಮಥಾಯಸ್ ಕುಟುಂಬ ಸಮೇತ ದುಬಾಯ್‌ಯಲ್ಲಿ ವಾಸವಾಗಿದ್ದಾರೆ.

Advertisement
Tags :
Advertisement