ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಕೆ.ಕೆ.ಎಂ.ಪಿ ಭವನದ ಮೊದಲನೇ ಅಂತಸ್ತಿನ ಉದ್ಘಾಟನೆ ಪ್ರಯುಕ್ತ ಜ.13 ಮತ್ತು 14 ರಂದು ಕ್ರೀಡಾಕೂಟ

ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಯೋಜಿಸುತ್ತಿರುವ ಮಂಗಳೂರಿನ ಬೊಂದೆಲ್ ಮಹಾತ್ಮನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಕೆ.ಎಂ.ಪಿ ಭವನದ ಮೊದಲನೆ ಅಂತಸ್ತಿನ ಉದ್ಘಾಟನೆ ಜನವರಿ 28ರಂದು ನಡೆಯಲಿದ್ದು, ಈ ಪ್ರಯುಕ್ತ ಪುರುಷರ, ಮಹಿಳೆಯರ ಮತ್ತು ಮಕ್ಕಳ ಕ್ರೀಡಾಕೂಟವನ್ನು ಜ.13 ಮತ್ತು 14ರಂದು ಬೆಳಗ್ಗೆ 9ಗೆ ಪಿ ಡಬ್ಲ್ಯೂ ಡಿ ಮೈದಾನ ಮಹಾನಗರ ಬಡಾವಣೆ, ಬೊಂದೆಲ್ ನಲ್ಲಿ ನಡೆಯಲಿದೆ .
04:11 PM Jan 12, 2024 IST | Gayathri SG

ಮಂಗಳೂರು: ಕರ್ನಾಟಕ ಕ್ಷತ್ರಿಯ ಮರಾಠ ಪರಿಷತ್ ದಕ್ಷಿಣ ಕನ್ನಡ ಜಿಲ್ಲಾ ಘಟಕ ಆಯೋಜಿಸುತ್ತಿರುವ ಮಂಗಳೂರಿನ ಬೊಂದೆಲ್ ಮಹಾತ್ಮನಗರ ಬಡಾವಣೆಯಲ್ಲಿ ನೂತನವಾಗಿ ನಿರ್ಮಿಸಿರುವ ಕೆ.ಕೆ.ಎಂ.ಪಿ ಭವನದ ಮೊದಲನೆ ಅಂತಸ್ತಿನ ಉದ್ಘಾಟನೆ ಜನವರಿ 28ರಂದು ನಡೆಯಲಿದ್ದು, ಈ ಪ್ರಯುಕ್ತ ಪುರುಷರ, ಮಹಿಳೆಯರ ಮತ್ತು ಮಕ್ಕಳ ಕ್ರೀಡಾಕೂಟವನ್ನು ಜ.13 ಮತ್ತು 14ರಂದು ಬೆಳಗ್ಗೆ 9ಗೆ ಪಿ ಡಬ್ಲ್ಯೂ ಡಿ ಮೈದಾನ ಮಹಾನಗರ ಬಡಾವಣೆ, ಬೊಂದೆಲ್ ನಲ್ಲಿ ನಡೆಯಲಿದೆ.

Advertisement

ಈ ಕ್ರೀಡಾಕೂಟದ ಉದ್ಘಾಟನೆಯನ್ನು ಮಂಗಳೂರಿನ ಕೆಕೆ ಎಂಪಿ ಮಾಜಿ ಉಪಾಧ್ಯಕ್ಷರು ಹಾಗೂ ಮೈಸೂರು ಕೆಕೆಎಂಪಿ ಸಂಘಟನಾ ಕಾರ್ಯದರ್ಶಿಯಾಗಿರುವ ದಿವಾಕರ್ ಕೋರೆ ಮಾಡಲಿದ್ದಾರೆ. ಅಧ್ಯಕ್ಷತೆಯನ್ನು ದಕ್ಷಿಣ ಕನ್ನಡ ಜಿಲ್ಲೆಯ ಮಂಗಳೂರು ಕೆಕೆ ಎಂಪಿ ಜಿಲ್ಲಾಧ್ಯಕ್ಷರು ವಿವಿ ಸುರೇಶ್ ರಾವ್ ಕರ್ ಮೋರೆ ವಹಿಸಿಕೊಳ್ಳಲಿದ್ದಾರೆ.

ಈ ಕ್ರೀಡೆಯ ಟ್ರೋಫಿಯನ್ನು ಮಂಗಳೂರು ಕೆಕೆ ಎಂಪಿ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಚಂದ್ರಮಾನ್ ಅನಾವರಣ ಮಾಡಲಿದ್ದಾರೆ. ಕ್ರಿಕೆಟ್ ಪಂದ್ಯಾಟದ ಉದ್ಘಾಟನೆಯನ್ನು ಮಂಗಳೂರಿನ ಸ್ಕಂದ ಬೋಟ್ ,ವಾಣಿಜ್ಯೋದ್ಯಮಿ ಗಿರೀಶ್ ರಾವ್ ಭೋಂಸ್ಲೆ ಹಾಗೂ ಕಾರ್ಕಳ ಕೆಕೆ ಎಂಪಿ ತಾಲೂಕು ಅಧ್ಯಕ್ಷರು ಕೀರ್ತನ್ ಕುಮಾರ್ ಲಾಡ್ ಮಾಡಲಿದ್ದಾರೆ. ಹಗ್ಗ ಜಗ್ಗಾಟ ಪಂದ್ಯಾಟದ ಉದ್ಘಾಟನೆಯನ್ನ ಮಂಗಳೂರು ಶ್ರೀ ದುರ್ಗಾ ಏಜೆನ್ಸಿ ಮಾಲಕರು ಗಿರಿರಾಜ್ ಎಂ. ಧರೇಕರ್ ಹಾಗೂ ಕಾಸರಗೋಡು, ಜೂಮ್ ಸ್ಟುಡಿಯೋ ಮಾಲಕರು ಹರಿಪ್ರಸಾದ್ ಚೌವ್ಹಾಣ್ ಮಾಡಲಿದ್ದಾರೆ. ತ್ರೋಬಾಲ್ ಪಂದ್ಯಾಟದ ಉದ್ಘಾಟನೆಯನ್ನ ಉದ್ಯಮಿ, ಶ್ರುತಿ ಎಂಟರ್ಪ್ರೈಸಸ್, ಸಂತ ಅಂತೋನಿ ಕಾಲೋನಿ ಅಶೋಕನಗರ, ಮಂಗಳೂರು ಹಾಗೂ ಸುರೇಶ್ ಧರ್ಮರಾಜ್ ಮಾಡಲಿದ್ದಾರೆ.

Advertisement

ವಿವಿಧ ಕ್ರೀಡೆಗಳು

ಗಂಡಸರಿಗೆ ಹಗ್ಗ ಜಗ್ಗಾಟ,
ಹೆಂಗಸರಿಗೆ ಹಗ್ಗ ಜಗ್ಗಾಟ ,
ಗಂಡಸರ ಓವರ್ ಆರ್ಮ್ ಕ್ರಿಕೆಟ್ ,
ಹೆಂಗಸರ ಅಂಡರ್ ಆರ್ಮ್ ಕ್ರಿಕೆಟ್
ಹೆಂಗಸರಿಗೆ ತ್ರೋಬಾಲ್.

ಕ್ರೀಡಾಕೂಟ ಸ್ಪರ್ಧೆಯ ಬಗ್ಗೆ ಹೆಚ್ಚಿನ ಮಾಹಿತಿಗಾಗಿ 9845256560, 9448723213, 9901205339, 9483910672, 8050542958 ಸಂಪರ್ಕಿಸಬಹುದು.

Advertisement
Tags :
LatestNewsNewsKannadaಕ್ರೀಡಾಕೂಟಮಂಗಳೂರು
Advertisement
Next Article