For the best experience, open
https://m.newskannada.com
on your mobile browser.
Advertisement

ಗೋವಾ: ತೆಲುಗಿನ'ಸಂತೋಷಂ ಅವಾರ್ಡ್ಸ್' ಸಮಾರಂಭದಲ್ಲಿ ಕನ್ನಡ ಸಿನಿತಾರೆಯರಿಗೆ ಅವಮಾನ

ಬೆಂಗಳೂರು: ಗೋವಾದಲ್ಲಿ ತೆಲುಗಿನ ಪ್ರತಿಷ್ಠಿತ 'ಸಂತೋಷಂ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರೆ ಅವಮಾನವಾಗಿದೆ ಎಂದು ತಿಳಿದುಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಪಿಆರ್ ಓ ಸುರೇಶ್ ಕೊಂಡೇಟಿ  ಈ ರೀತಿ ಅವಮಾನ ಮಾಡಿದ್ದು, ಕನ್ನಡದ ತಾರೆಯರು ಕಾರ್ಯಕ್ರಮ ಬಹಿಷ್ಕರಿಸಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಮಾಹಿತಿಯಿದೆ.
06:27 PM Dec 03, 2023 IST | Umesha HS
ಗೋವಾ  ತೆಲುಗಿನ ಸಂತೋಷಂ ಅವಾರ್ಡ್ಸ್  ಸಮಾರಂಭದಲ್ಲಿ ಕನ್ನಡ ಸಿನಿತಾರೆಯರಿಗೆ ಅವಮಾನ

ಬೆಂಗಳೂರು: ಗೋವಾದಲ್ಲಿ ತೆಲುಗಿನ ಪ್ರತಿಷ್ಠಿತ 'ಸಂತೋಷಂ ಅವಾರ್ಡ್ಸ್' ಕಾರ್ಯಕ್ರಮದಲ್ಲಿ ಕನ್ನಡ ಕಲಾವಿದರಿಗೆ ಅವಮಾನವಾಗಿದೆ ಎಂದು ತಿಳಿದುಬಂದಿದೆ. ಮೆಗಾಸ್ಟಾರ್ ಚಿರಂಜೀವಿ ಪಿಆರ್ ಓ ಸುರೇಶ್ ಕೊಂಡೇಟಿ  ಈ ರೀತಿ ಅವಮಾನ ಮಾಡಿದ್ದು, ಕನ್ನಡದ ತಾರೆಯರು ಕಾರ್ಯಕ್ರಮ ಬಹಿಷ್ಕರಿಸಿ ಬೆಂಗಳೂರಿಗೆ ಬರುತ್ತಿದ್ದಾರೆ ಎಂದು ಮಾಹಿತಿಯಿದೆ.

Advertisement

ಗೋವಾದಲ್ಲಿ ಬಂದಂತಹ ಅತಿಥಿಗಳಿಗೆ ಸರಿಯಾದ ಆತಿಥ್ಯ ನೀಡದೆ ಅಪಮಾನ ಮಾಡಲಾಗಿದೆ. ಹೋಟೆಲ್ ರೂಮ್ಸ್ ನಿಂದ ಹಿಡಿದು ಹಾಸ್ಪಿಟಾಲಿಟಿ ನೀಡಲು ಸಹ ಆಯೋಜಕರು ವಿಫಲರಾಗಿದ್ದಾರೆ ಎನ್ನಲಾಗಿದೆ. ಕೊನೆಗೆ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಕ್ರಾಂತಿ ಸಿನಿಮಾಗೆ ಅವಾರ್ಡ್ ನೀಡ್ತಿದ್ದಂತೆ ವೇದಿಕೆಯಲ್ಲಿ ಕರೆಂಟ್ ಆಫ್ ಆಗಿದೆಯಂತೆ. ಆಯೋಜನೆಯಲ್ಲಿ ಮಹಾ ಎಡವಟ್ಟು ನಡೆದಿದ್ದು, ಕನ್ನಡಿಗರಿಗೆ ತೆಲುಗು ಆಯೋಜಕರಿಂದ ಮೋಸವಾಗಿದೆ ಎನ್ನಲಾಗಿದೆ. ಕಾರ್ಯಕ್ರಮಕ್ಕೆ ಕರೆದು ಈ ರೀತಿ ಅವಮಾನ ಆಗಿರುವುದು ತುಂಬಾ ಬೇಸರ ತರಿಸಿದೆ ಎಂದು ಗೋವಾಗೆ ಹೋಗಿ ವಾಪಸ್ಸಾಗುತ್ತಿರುವ ಸೆಲೆಬ್ರಿಟಿಗಳು ಹೇಳಿದ್ದಾರೆ.
ಕಾರ್ಯಕ್ರಮದಲ್ಲಿ ಭಾಗಿಯಾಗಲು ತೆರಳಿದ್ದ ನಟ ರಮೇಶ್ ಅರವಿಂದ್, ಸಪ್ತಮಿ ಗೌಡ, ರಾಜವರ್ಧನ್, ಬಿ ಸುರೇಶ್, ಶೈಲಜಾ ನಾಗ್ ಮುಂತಾದವರು ಕಾರ್ಯಕ್ರಮವನ್ನು ಬಾಯ್ಕಾಟ್ ಮಾಡಿ ವಾಪಸ್‌ ಬೆಂಗಳೂರಿಗೆ ಹೊರಟಿದ್ದಾರೆ. ತಮಿಳು ನಟ ನಟಿಯರಿಗೂ ಇದೇ ರೀತಿಯ ಅನುಭವ ಆಗಿದೆ ಎಂದು ತಿಳಿದುಬಂದಿದೆ.

Advertisement
Advertisement
Tags :
Advertisement