For the best experience, open
https://m.newskannada.com
on your mobile browser.
Advertisement

ಕೊನೆಗೂ ಒಟಿಟಿಗೆ ಬಂತು ‘ಹನುಮಾನ್​’ ಸಿನಿಮಾ

ಬ್ಲಾಕ್ ಬಸ್ಟರ್ ಸಿನಿಮಾ ‘ಹನುಮಾನ್​’ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ‘ಜೀ 5’ ಒಟಿಟಿ ಮೂಲಕ ‘ಹನುಮಾನ್​’ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಈ ಸಿನಿಮಾಗಾಗಿ ಕಾಯುತ್ತಿದ್ದ ಅದೆಷ್ಟೋ ಸಿನಿ ರಸಿಕರಿಗೆ ಈ ಸುದ್ದಿ ಖುಷಿ ಕೊಟ್ಟಿದೆ.
06:23 PM Mar 17, 2024 IST | Gayathri SG
ಕೊನೆಗೂ ಒಟಿಟಿಗೆ ಬಂತು ‘ಹನುಮಾನ್​’ ಸಿನಿಮಾ

ಬ್ಲಾಕ್ ಬಸ್ಟರ್ ಸಿನಿಮಾ ‘ಹನುಮಾನ್​’ ಒಟಿಟಿಯಲ್ಲಿ ಬಿಡುಗಡೆ ಆಗಿದೆ. ‘ಜೀ 5’ ಒಟಿಟಿ ಮೂಲಕ ‘ಹನುಮಾನ್​’ ಸಿನಿಮಾ ವೀಕ್ಷಣೆಗೆ ಲಭ್ಯವಾಗಿದೆ. ಈ ಸಿನಿಮಾಗಾಗಿ ಕಾಯುತ್ತಿದ್ದ ಅದೆಷ್ಟೋ ಸಿನಿ ರಸಿಕರಿಗೆ ಈ ಸುದ್ದಿ ಖುಷಿ ಕೊಟ್ಟಿದೆ.

Advertisement

ಈ ಚಿತ್ರದಲ್ಲಿ ತೇಜ ಸಜ್ಜಾ ಅವರು ಹೀರೋ, ಅಮೃತಾ ಅಯ್ಯರ್​ ಹೀರೋಯಿನ್ ಆಗಿ ನಟಿಸಿದ್ದಾರೆ. ಪ್ರಶಾಂತ್​ ವರ್ಮಾ ನಿರ್ದೇಶನ ಮಾಡಿದ್ದಾರೆ. ಸಂಕ್ರಾಂತಿ ಹಬ್ಬದ ಪ್ರಯುಕ್ತ ಚಿತ್ರಮಂದಿರದಲ್ಲಿ ‘ಹನುಮಾನ್​’ ಸಿನಿಮಾ ಬಿಡುಗಡೆ ಆಗಿತ್ತು. ಪ್ಯಾನ್​ ಇಂಡಿಯಾ ಮಟ್ಟದಲ್ಲಿ ‘ಹನುಮಾನ್​’ ತೆರೆಕಂಡಿತ್ತು. ಸದ್ಯಕ್ಕೆ ‘ಜೀ 5’ ಒಟಿಟಿಯಲ್ಲಿ ತೆಲುಗು ವರ್ಷನ್​ ಮಾತ್ರ ಲಭ್ಯವಾಗಿದೆ. ಕನ್ನಡ, ತಮಿಳು, ಮಲಯಾಳಂ ವರ್ಷನ್​ಗಾಗಿ ಪ್ರೇಕ್ಷಕರು ಕಾದಿದ್ದಾರೆ. ‘ಜಿಯೋ ಸಿನಿಮಾ’ ಒಟಿಟಿಯಲ್ಲಿ ಉಚಿತವಾಗಿ ‘ಹನುಮಾನ್​’ ಸಿನಿಮಾದ ಹಿಂದಿ ವರ್ಷನ್​ ವೀಕ್ಷಿಸಬಹುದು.

ಆಂಜನೇಯನ ಕೃಪೆಯಿಂದ ಸೂಪರ್​ ಪವರ್​ ಪಡೆಯುವ ಯುವಕನ ಕಥೆಯನ್ನು ಈ ಸಿನಿಮಾದಲ್ಲಿ ತೋರಿಸಲಾಗಿದೆ.

Advertisement

Advertisement
Tags :
Advertisement