For the best experience, open
https://m.newskannada.com
on your mobile browser.
Advertisement

ಶಾ ಅವರನ್ನು ಭೇಟಿ ಮಾಡಿದ ‘ಹನುಮಾನ್​’ ತಂಡ: ಸಿನಿಮಾವನ್ನು ಹೊಗಳಿದ ಗೃಹ ಸಚಿವರು

ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆದ ‘ಹನುಮಾನ್​’  ಸಿನಿಮಾವನ್ನು ಜನರು ಗೆಲ್ಲಿಸಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.
03:45 PM Mar 13, 2024 IST | Ashika S
ಶಾ ಅವರನ್ನು ಭೇಟಿ ಮಾಡಿದ ‘ಹನುಮಾನ್​’ ತಂಡ  ಸಿನಿಮಾವನ್ನು ಹೊಗಳಿದ ಗೃಹ ಸಚಿವರು

ಹೈದರಾಬಾದ್: ಪ್ಯಾನ್​ ಇಂಡಿಯಾ ಮಟ್ಟದಲ್ಲಿ ರಿಲೀಸ್​ ಆದ ‘ಹನುಮಾನ್​’ ಸಿನಿಮಾವನ್ನು ಜನರು ಗೆಲ್ಲಿಸಿದ್ದಾರೆ. ಈ ಸಿನಿಮಾ ಬಗ್ಗೆ ಈಗಾಗಲೇ ಅನೇಕ ಸೆಲೆಬ್ರಿಟಿಗಳು ಮೆಚ್ಚುಗೆಯ ಮಾತುಗಳನ್ನು ಆಡಿದ್ದಾರೆ.

Advertisement

ಈಗ ಕೇಂದ್ರ ಗೃಹ ಸಚಿವ ಅಮಿತ್​ ಶಾ ಕೂಡ   ಸಿನಿಮಾವನ್ನು ಹೊಗಳಿದ್ದಾರೆ. ಹೈದರಾಬಾದ್​​ನಲ್ಲಿ ಅಮಿತ್​ ಶಾ ಅವರನ್ನು ‘ಹನುಮಾನ್​’ ತಂಡದವರು ಭೇಟಿ ಮಾಡಿದ್ದಾರೆ.

ಪಕ್ಷದ ಮೀಟಿಂಗ್​ ಸಲುವಾಗಿ ಅಮಿತ್​ ಶಾ ಅವರು ಹೈದರಾಬಾದ್​ಗೆ ಆಗಮಿಸಿದ್ದರು. ಈ ವೇಳೆ ಅವರನ್ನು ಭೇಟಿ ಆಗುವ ಅವಕಾಶ ‘ಹನುಮಾನ್​’ ತಂಡಕ್ಕೆ ಸಿಕ್ಕಿದೆ. ಗೃಹ ಸಚಿವರಿಗೆ ಆಂಜನೇಯನ ಮೂರ್ತಿ ಇರುವ ಸ್ಮರಣಿಕೆಯನ್ನು ನೀಡಲಾಗಿದೆ.  ಆ ಸಂದರ್ಭದ ಫೋಟೋ ವೈರಲ್​ ಆಗಿದೆ.

Advertisement

‘ಹನುಮಾನ್​’ ತಂಡದ ಭೇಟಿಯ ಬಳಿಕ ಅಮಿತ್​ ಶಾ ಅವರು ‘ಎಕ್ಸ್​’ (ಟ್ವಿಟರ್​) ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ. ‘ಇತ್ತೀಚೆಗೆ ಸೂಪರ್​ ಹಿಟ್​ ಆದ ಹನುಮಾನ್​ ಸಿನಿಮಾದ ನಿರ್ದೇಶಕ ಪ್ರಶಾಂತ್​ ವರ್ಮಾ, ಪ್ರತಿಭಾವಂತ ನಟ ತೇಜ ಸಜ್ಜಾ ಅವರನ್ನು ಭೇಟಿ ಮಾಡಿದೆ. ಭಾರತದ ಧಾರ್ಮಿಕ ಪರಂಪರೆಯನ್ನು ತೋರಿಸುವಲ್ಲಿ ಈ ಚಿತ್ರತಂಡದವರು ಉತ್ತಮವಾದ ಕೆಲಸ ಮಾಡಿದ್ದಾರೆ. ಅವರ ಮುಂದಿನ ಸಿನಿಮಾಗಳಿಗೆ ಶುಭವಾಗಲಿ’ ಎಂದು ಅಮಿತ್ ಶಾ ಪೋಸ್ಟ್​ ಮಾಡಿದ್ದಾರೆ. ತಂಡದ ಜೊತೆಗಿನ ಫೋಟೋವನ್ನು ಅವರು ಹಂಚಿಕೊಂಡಿದ್ದಾರೆ.

ಈ ಭೇಟಿಯ ಸಂದರ್ಭದಲ್ಲಿ ನಿರ್ಮಾಪಕ ಕೆ. ನಿರಂಜನ್​ ರೆಡ್ಡಿ, ಕೇಂದ್ರ ಸಚಿವ ಜಿ. ಕೃಷ್ಣ ರೆಡ್ಡಿ ಕೂಡ ಜೊತೆಯಲ್ಲಿ ಇದ್ದರು.

Advertisement
Tags :
Advertisement