ಕರ್ನಾಟಕ | ಬೆಂಗಳೂರುಮೈಸೂರುಮಲೆನಾಡುಬೆಳಗಾವಿಕರಾವಳಿಕಲಬುರಗಿ
ಹೊರನಾಡ ಕನ್ನಡಿಗರು
ದೇಶ-ವಿದೇಶ | ವಿದೇಶದೇಶ
ವಿಶೇಷ
ಗಾಂಧಿನಗರ | ಸಾಂಡಲ್ ವುಡ್
ಮನರಂಜನೆಕ್ರೀಡೆಕ್ಯಾಂಪಸ್
ಇತರೆ | ಆರೋಗ್ಯಅಡುಗೆ ಮನೆಸಮುದಾಯಕ್ರೈಮ್ಶಿಕ್ಷಣವಿಡಿಯೊಭವಿಷ್ಯಫೋಟೊ ನ್ಯೂಸ್ಪಾಡ್‌ಕಾಸ್ಟ್‌ಉದ್ಯೋಗ
Advertisement

ಹುಟ್ಟುಹಬ್ಬದ ಸಂಭ್ರಮದಲ್ಲಿ ಸಚಿನ್ ತೆಂಡೂಲ್ಕರ್; ಕ್ರಿಕೆಟ್ ದೇವರ ದಾಖಲೆಗಳು ಹೀಗಿವೆ

ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇಂದು ತಮ್ಮ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್ 24, 1973 ರಂದು ಜನಿಸಿದ ಸಚಿನ್ ತೆಂಡೂಲ್ಕರ್ 16 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. ಅಲ್ಲಿಂದ ಸುಮಾರು 24 ವರ್ಷಗಳ ಕಾಲ ಕ್ರಿಕೆಟ್ ನ ಕಿರೀಟವಿಲ್ಲದ ಮಹಾರಾಜರಾದರು.
10:43 AM Apr 24, 2024 IST | Ashitha S

ಮುಂಬೈ: ಕ್ರಿಕೆಟ್ ದೇವರು ಸಚಿನ್ ತೆಂಡೂಲ್ಕರ್ ಇಂದು ತಮ್ಮ 51ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಏಪ್ರಿಲ್ 24, 1973 ರಂದು ಜನಿಸಿದ ಸಚಿನ್ ತೆಂಡೂಲ್ಕರ್ 16 ನೇ ವಯಸ್ಸಿನಲ್ಲಿ ಅಂತರಾಷ್ಟ್ರೀಯ ಕ್ರಿಕೆಟ್ ಪ್ರವೇಶಿಸಿದರು. ಅಲ್ಲಿಂದ ಸುಮಾರು 24 ವರ್ಷಗಳ ಕಾಲ ಕ್ರಿಕೆಟ್ ನ ಕಿರೀಟವಿಲ್ಲದ ಮಹಾರಾಜರಾದರು.

Advertisement

ಇವರು 1989ರಲ್ಲಿ ಪಾಕಿಸ್ತಾನ ವಿರುದ್ಧದ ಪಂದ್ಯದ ಮೂಲಕ ಅಂತರಾಷ್ಟ್ರೀಯ ಕ್ರಿಕೆಟ್​ಗೆ ಪಾದಾರ್ಪಣೆ ಮಾಡಿದರು. ಅದರಂತೆ 2013ರಲ್ಲಿ ವಿಂಡೀಸ್​ ವಿರುದ್ಧವೇ ಟೆಸ್ಟ್ ಪಂದ್ಯಕ್ಕೆ ಹಾಗೂ 2012ರಲ್ಲಿ ಪಾಕ್ ವಿರುದ್ಧದ ಏಕದಿನ ಪಂದ್ಯಕ್ಕೆ ವಿದಾಯ ಹೇಳುವ ಮೂಲಕ ಅಂತರಾಷ್ಟ್ರೀಯ ಕ್ರಿಕರೆಟ್ ಲೋಕಕ್ಕೆ ಗುಡ್ ಬೈ ಹೇಳಿದರು.

ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ಸಚಿನ್‌ ತೆಂಡೂಲ್ಕರ್‌ 264 ಬಾರಿ 50ಕ್ಕೂ ಹೆಚ್ಚಿನ ರನ್‌ಗಳನ್ನು ಗಳಿಸಿದ್ದಾರೆ. ಅಂತಾರಾಷ್ಟ್ರೀಯ ಟೆಸ್ಟ್‌ ಕ್ರಿಕೆಟ್‌ನಲ್ಲಿ 200 ಪಂದ್ಯಗಳನ್ನು ಆಡಿದ ಮೊದಲ ಕ್ರಿಕೆಟಿಗ ಎಂಬ ದಾಖಲೆ ಕೂಡ ಮಾಸ್ಟರ್‌ ಬ್ಲಾಸ್ಟರ್‌ ಸಚಿನ್‌ ತೆಂಡೂಲ್ಕರ್‌ ಅವರ ಹೆಸರಿನಲ್ಲಿದೆ. ಸಚಿನ್‌ ತೆಂಡೂಲ್ಕರ್‌ ಅವರು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ರನ್‌ ಹೊಳೆ ಹರಿಸುವ ಜೊತೆಗೆ ಬೌಲಿಂಗ್‌ನಲ್ಲಿ 200 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 30000 ರನ್‌ಗಳ ಜೊತೆಗೆ ಬೌಲಿಂಗ್‌ನಲ್ಲಿ 200 ವಿಕೆಟ್‌ಗಳನ್ನು ಪಡೆದಿದ್ದಾರೆ. ಆ ಮೂಲಕ ವಿಶೇಷ ದಾಖಲೆ ಬರೆದಿದ್ದಾರೆ.

Advertisement

ತಮ್ಮ ಕ್ರಿಕೆಟ್‌ ವೃತ್ತಿ ಜೀವನದಲ್ಲಿ 463 ಏಕದಿನ ಪಂದ್ಯಗಳನ್ನು ಆಡಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 100 ಶತಕಗಳ ದಾಖಲೆ ಬರೆದಿದ್ದಾರೆ. ಲಿಟಲ್ ಮಾಸ್ಟರ್ ಒಟ್ಟು 463 ಏಕದಿನ ಪಂದ್ಯಗಳನ್ನಾಡಿದ್ದು, 18,436 ರನ್​ ಗಳನ್ನು ಕಲೆಹಾಕಿದ್ದರೆ. ಇದರಲ್ಲಿ 49 ಶತಕ ಹಾಗೂ 96 ಅರ್ಧಶತಕಗಳನ್ನು ಸಿಡಿಸಿದ್ದಾರೆ. 200 ರನ್ ಅವರ ಅತೀ ಹೆಚ್ಚು ಒಂದು ಪಂದ್ಯದ ರನ್ ಆಗಿದ್ದು, ಈ ಸಾಧನೆಯನ್ನು ಮಾಡಿದ ವಿಶ್ವದ ಮೊದಲ ಆಟಗಾರರಾಗಿದ್ದಾರೆ.

ಸಚಿನ್ 200 ಟೆಸ್ಟ್ ಪಂದ್ಯಗಳನ್ನು ಆಡಿದ್ದು, 15,921 ರನ್ ಗಳಿಸಿದ್ದಾರೆ. ಇದರಲ್ಲಿ ಬರೋಬ್ಬರಿ 51 ಶತಕ ಹಾಗೂ 68 ಅರ್ಧಶತಕಗಳು ಸೇರಿವೆ, ಟೆಸ್ಟ್ ನಲ್ಲಿ 248 ರನ್ ವಯಕ್ತಿಕ ಗರಿಷ್ಠ ಸ್ಕೋರ್ ಆಗಿದೆ. ಇನ್ನು ಟೆಸ್ಟ್​ನಲ್ಲಿಯೇ 49 ವಿಕೆಟ್ ಗಳನ್ನು ಪಡೆದಿದ್ದಾರೆ.

ಕೇವಲ ತಮ್ಮ ಬ್ಯಾಟ್​ ನಿಂದ ಮಾತ್ರವಲ್ಲದೇ ಕೆಲ ವಿಚಿತ್ರ ದಾಖಲೆಗಳೂ ಅವರ ಹೆಸರಿನಲ್ಲಿದೆ. ಹೌದು. . . ಅತೀ ಹೆಚ್ಚು ಬಾರಿ ನರ್ವಸ್ 90ಗೆ ಔಟ್ ಆದ ಆಟಗಾರರಾಗಿದ್ದಾರೆ. ಇದರಲ್ಲದೇ ಮೂರನೆ ಅಂಪೈರ್ ನಿರ್ಣಯದಿಂದ ರನ್‍ಔಟ್ ಆದ ಮೊದಲ ಆಟಗಾರ ಸಹ ಹೌದು.

ಸಚಿನ್ ಅವರ ಸಾಧನೆಗೆ ಭಾರತರತ್ನ, ಪದ್ಮವಿಭೂಷಣ ಪ್ರಶಸ್ತಿ, ಪದ್ಮಶ್ರೀ ಪ್ರಶಸ್ತಿ, ರಾಜೀವ್ ಗಾಂಧಿ ಖೇಲ್ ರತ್ನ, ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿ 2020 ಸೇರಿದಂತೆ ಅನೇಕ ಪ್ರಶಸ್ತಿಗಳು ಲಭಿಸಿವೆ.

Advertisement
Tags :
birthdayindiaKARNATAKANewsKarnatakaSACHIN TENDULKARನವದೆಹಲಿ
Advertisement
Next Article